• Thu. Sep 28th, 2023

PLACE YOUR AD HERE AT LOWEST PRICE

ಬಂಗಾರಪೇಟೆ:ಆದರ್ಶ ಶಾಲೆಯ ಮುಖಾಂತರ ನನ್ನ ತಾಲೂಕಿನ 274 ಶಾಲೆಗಳು ಸಹ ಆದರ್ಶ ಶಾಲೆಯಂತೆ ಹೆಚ್ಚಿನ ವಿದ್ಯಾಭ್ಯಾಸ ಮಾಡಲಿ ಎಂದು ಆದರ್ಶ ಶಾಲೆಯ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಶಾಸಕ ಎಸ್ಎನ್ ನಾರಾಯಣಸ್ವಾಮಿ ಹೇಳಿದರು.

ಪಟ್ಟಣದ ಆದರ್ಶ ಶಾಲೆಯ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡುತ್ತಾ, ಆದರ್ಶ ಶಾಲೆಗೆ ದಾಖಲಾಗಿರುವ ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಮಾಡುವ ಮುಖಾಂತರ ಉತ್ತಮ ಪ್ರಜೆಗಳಾಗಬೇಕೆಂದು ಕರೆ ನೀಡಿದರು.

ಹಿಂದೆ ಕೇವಲ 80 ಮಕ್ಕಳಿಗೆ ದಾಖಲಾತಿ ಮಾಡಿಕೊಳ್ಳಲು ಅವಕಾಶವಿತ್ತು, ಈಗ ನಮ್ಮೆಲ್ಲರ ಒತ್ತಾಯದ ಮೇರೆಗೆ 120 ಮಕ್ಕಳನ್ನು ದಾಖಲಾತಿ ಮಾಡಿಕೊಳ್ಳುತ್ತಿದ್ದಾರೆ. ನಾನು 25 ವರ್ಷಗಳ ಮುಂದಾಲೋಚನೆ ಮಾಡಿ 10200 ಮಕ್ಕಳು ಓದುವ ವ್ಯವಸ್ಥೆಯನ್ನು ಅಂದಿನ ದಿನಗಳಲ್ಲಿಯೇ ಮಾಡಿದ್ದೇನೆ ಎಂದರು.

ಇಡೀ ಕೋಲಾರ ಜಿಲ್ಲೆಯಲ್ಲಿಯೇ ಊರಿನ ಮಧ್ಯೆ ಇರುವಂತ ಶಾಲೆ ಎಂದರೆ ಅದು ಬಂಗಾರಪೇಟೆಯಲ್ಲಿ ಮಾತ್ರ, ನಾನು ಯಾಕೆ ಇಲ್ಲಿ ಮಾಡಿದ್ದೇನೆ ಎಂದರೆ ಮಕ್ಕಳು ಬಂದು ಹೋಗಲು ಹತ್ತಿರವಾಗುತ್ತದೆ ಎಂದು, ಶಿಕ್ಷಕರಿಗೆ ಬಂದು ಹೋಗಲು ಅನುಕೂಲವಾಗಲಿ ಎಂದು ನಿರ್ಮಿಸಲಾಗಿದೆ ಎಂದರು.

ಶಾಸಕರಾದ ಮೇಲೆ ನಮ್ಮ ಕರ್ತವ್ಯವೇನು ನಮ್ಮ ಜವಾಬ್ದಾರಿಗಳು ಕುಡಿಯುವ ನೀರಿನ ವ್ಯವಸ್ಥೆ, ರಸ್ತೆಗಳ ಅಭಿವೃದ್ಧಿ, ಮಕ್ಕಳ ವಿದ್ಯಾಭ್ಯಾಸ, ಗ್ರಾಮಗಳ ಸ್ವಚ್ಛತೆ, ಗ್ರಾಮಗಳ ಅಭಿವೃದ್ಧಿ, ನಾನಾ ರೀತಿಯಲ್ಲಿ ಯೋಚನೆ ಮಾಡಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಿದರೆ ಮಾತ್ರ ಕ್ಷೇತ್ರದಲ್ಲಿ ಬೆಳೆಯಲು ಸಾಧ್ಯ ಎಂದು ಹೇಳಿದರು.

ನಮ್ಮ ತಾಲೂಕಿನಲ್ಲಿ 274 ಸರ್ಕಾರಿ ಶಾಲೆಗಳಿವೆ ಅವುಗಳಲ್ಲಿ ಮಕ್ಕಳು 14,000 ಓದುತ್ತಿದ್ದಾರೆ, ಖಾಸಗಿ ಶಾಲೆಗಳು ಕೇವಲ ಐವತ್ತನಾಲ್ಕು ಶಾಲೆಗಳಿವೆ ಹದಿಮೂರು ಸಾವಿರ ಮಕ್ಕಳಿದ್ದಾರೆ ಿದು ಯಾಕೆ ಎಂದು ಪ್ರಶ್ನಿಸಿದರು.

ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಏನು ಕಮ್ಮಿ, ಉತ್ತಮ ಶಿಕ್ಷಕರಿದ್ದಾರೆ, ಒಳ್ಳೆಯ ಅನುಕೂಲಗಳಿವೆ, ಪಠ್ಯಪುಸ್ತಕಗಳನ್ನು ಉಚಿತವಾಗಿ ನೀಡುತ್ತೇವೆ, ಬಿಸಿ ಊಟವನ್ನು ನೀಡುತ್ತೇವೆ, ಶೂ ಗಳನ್ನು ಸಹ ನೀಡುತ್ತಿದ್ದೇವೆ.

ಈ ವರ್ಷದಿಂದ ಸೈಕಲ್ ಸಹ ನೀಡುತ್ತೇವೆ, ಇಷ್ಟೆಲ್ಲಾ ಅನುಕೂಲ ಮಾಡಿದರೂ ಸಹ ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲಾತಿ ಮಾಡುತ್ತೀರಿ ಎಂದು ಬೇಸರ ವ್ಯಕ್ತಪಡಿಸಿದರು.

ಈ ವೇಳೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು  ಸನ್ಮಾನಿಸಿ ಅಭಿನಂದನೆ ಸಲ್ಲಿಸಿ ಆದರ್ಶ ಶಾಲೆಯ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ವಿತರಣೆ ಮಾಡಿದರು

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯ, ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶಂಕರಪ್ಪ,ಅಪ್ಪಯ್ಯಗೌಡ, ಆಂಜನೇಯಗೌಡ, ಎಲ್ ರಾಜಪ್ಪ, ಆದರ್ಶ ಶಾಲೆಯ ಮುಖ್ಯೋಪಾಧ್ಯಾಯರಾದ ಶಶಿಕಲಾ, ಪೊಲೀಸ್ ಇನ್ಸ್ಪೆಕ್ಟರ್ ಮಹೇಶ್ ಮೊದಲಾದವರು ಇದ್ದರು.

Leave a Reply

Your email address will not be published. Required fields are marked *

error: Content is protected !!