• Thu. Sep 28th, 2023

PLACE YOUR AD HERE AT LOWEST PRICE

ಕೋಲಾರ ನಗರದ ಅಂತರಗಂಗಾ ಬುದ್ದಿ ಮಾಂದ್ಯ ವಿಕಲಚೇತನರ ಶಾಲೆಯ ಮಕ್ಕಳಿಗೆ ಮತ್ತು ವಯೋವೃದ್ಧರಿಗೆ ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆ ಹಾಗೂ ಟೈಟಾನ್ ಕಂಪನಿಯ ಸಹಯೋಗದೊಂದಿಗೆ ನನ್ನ ಕಣ್ಣು ಯೋಜನೆಯಡಿಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.

ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆ ಹಾಗೂ ಟೈಟಾನ್ ಕಂಪನಿಯ ಸಹಯೋಗದೊಂದಿಗೆ *ನನ್ನ ಕಣ್ಣು* ಯೋಜನೆಯಡಿಯಲ್ಲಿ ಬುದ್ದಿ ಮಾಂದ್ಯ ಮಕ್ಕಳ ಜೊತೆಗೆ ವಯೋವೃದ್ದರು ಸೇರಿ 100ಜನರಿಗೆ ಶಂಕರ ಕಣ್ಣಿನ ಆಸ್ಪತ್ರೆಯ ವೈದ್ಯಧಿಕಾರಿಗಳಾದ ಸುದರ್ಶಣಿ, ದಿವ್ಯಾ, ಶಾಹೂ ಹಾಗೂ ಅಂಬಿಕಾ ರವರು ನೇತ್ರ ತಪಾಸಣೆ ನಡೆಸಿದರು.

ನೇತ್ರ ತಪಾಸಣಾ ಶಿಬಿರದ ವೇಳೆ ಮಾತನಾಡಿದ ಶಂಕರ ಕಣ್ಣಿನ ಆಸ್ಪತ್ರೆಯ ನನ್ನ ಕಣ್ಣು ಕ್ಯಾಂಪ್ ಮುಖ್ಯಸ್ಥರಾದ ಚಂದ್ರಪ್ಪ ರವರು ಮನುಷ್ಯನ ಅವಯವಗಳಲ್ಲಿ ಕಣ್ಣು ಒಂದಾಗಿದ್ದು ಕಣ್ಣೇ ವ್ಯಕ್ತಿಯ ವಿಕಾಸನಕ್ಕೆ ದಾರಿ ದೀಪವಾಗಿದೆ. ಕಣ್ಣನ್ನು ಹೆಚ್ಚಿನ ಸಂರಕ್ಷಣೆ ಮಾಡಿ ಜಾಗೃಕತೆಯಿಂದ ರಕ್ಷಿಕೊಳ್ಳಬೇಕೆಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಅಂತರಗಂಗಾ ವಿದ್ಯಾ ಸಂಸ್ಥೆಯ ಶಂಕರ್ ರವರು ಮಾತನಾಡಿ ಕಣ್ಣಿನ ಬೇನೆಯಿಂದ ಬಳಲುವ ಅನೇಕ ರೋಗಿಗಳು ಕಡು ಬಡವರಿದ್ದು ಅಂತವರಿಗೆ ಉಚಿತ ಚಿಕಿತ್ಸೆ ಏರ್ಪಡಿಸಿರುವ ಸಂಸ್ಥೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ರಕ್ತ ದಾನದಿಂದ ಜೀವದಾನ ಮಾಡಬಹುದು. ಮರಣ ನಂತರ ನೇತ್ರದಾನ ದಿಂದ ಅಂಧರಿಗೆ ದೃಷ್ಟಿದಾನ ಮಾಡಬಹುದು ಆದರೆ ನೇತ್ರದಾನ ಮಹಾದಾನವಾಗಿದ್ದು ಸಾರ್ವಜನಿಕರ ಸ್ಪಂದನೆ ಅಗತ್ಯ. ನೇತ್ರದಾನದ ಬಗ್ಗೆ ಜನರಲ್ಲಿ ತಪ್ಪು ತಿಳುವಳಿಕೆ ಇದೆ, ಸತ್ತವರನ್ನು ಕಣ್ಣು ಸಮೇತ ಮಣ್ಣಲ್ಲಿ ಹೂಳುವುದರಿಂದ ಅಂಧರ ಬಾಳಿಗೆ ಬೆಳಕಾಗುವ ಕಣ್ಣುಗಳು ಮಣ್ಣಲ್ಲಿ ಹೂತು ಹೋಗುತ್ತವೆ ಇದು ತಪ್ಪು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಕಣ್ಣು ತಪಾಸಣೆ ಮಾಡಿಸಿಕೊಂಡವರಲ್ಲಿ ಕನ್ನಡಕ ಅಗತ್ಯವಿರುವವರಿಗೆ ಕೆಲವೇ ದಿನಗಳಲ್ಲಿ ಉಚಿತವಾಗಿ ವಿತರಣೆ ಮಾಡಲಾಗುವುದು ಹಾಗೂ ಹೆಚ್ಚಿನ ಚಿಕಿತ್ಸೆ ಹಾಗೂ ಶಸ್ತ್ರ ಚಿಕಿತ್ಸೆಗೆ ಒಳಪಟ್ಟವರನ್ನು ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆಗೆ ಕರೆತರಲು ಮನವಿ ಮಾಡಿದರು ಉಚಿತವಾಗಿಯೇ ಚಿಕಿತ್ಸೆ ನೀಡಲಾಗುವುದು ಕ್ಯಾಂಪ್ ಮುಖ್ಯಸ್ಥರಾದ ಚಂದ್ರಪ್ಪ ರವರು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಅಂತರಗಂಗಾ ವಿದ್ಯಾ ಸಂಸ್ಥೆಯ ಶಂಕರ್, ಪ್ರಜ್ಞಾ ಶಂಕರ್, ಬೆಂಗಳೂರಿನ ಶಂಕರ್ ಕಣ್ಣಿನ ಆಸ್ಪತ್ರೆಯ ಕ್ಯಾಂಪ್ ಮುಖ್ಯಸ್ಥ ಚಂದ್ರಪ್ಪ, ವೈದ್ಯಧಿಕಾರಿಗಳಾದ ಸುದರ್ಶಣಿ, ದಿವ್ಯಾ, ಶಾಹೂ, ಅಂಬಿಕಾ, ಆಸ್ಪತ್ರೆ ಸಿಬ್ಬಂದಿಗಳಾದ ಸಂತೋಷ್, ಅಭಿಜಿತ್ ಹಾಗೂ ಅಂತರಗಂಗಾ ವಿದ್ಯಾ ಸಂಸ್ಥೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!