• Wed. Apr 24th, 2024

ತನ್ನ ಮನೆ ಮುಂದಿನ ಬ್ಯಾರಿಕೆಟ್ ತೆರವುಗೊಳಿಸ್ದಕ್ಕಾಗಿ ತಲಘಟ್ಟ ಪುರ ಪೊಲೀಸ್ ಠಾಣೆ ಮುಂದೆ ಅರೇ ಬೆತ್ತಲೆ ಯಾಗಿ ಧರಣಿ ಕುಳಿತ ಖ್ಯಾತ ಸಾಹಿತಿ,ಚಿಂತನೆಗಾರ ಪುಸ್ತಕ ಮನೆ ಹರಿಹರ ಪ್ರಿಯಾ

PLACE YOUR AD HERE AT LOWEST PRICE

ಕರ್ನಾಟಕವನ್ನು ಆಳಲು ಹೊಣೆಹೊತ್ತ ಶಾಸಕಾಂಗ,ಕಾರ್ಯಾಂಗ,ನ್ಯಾಯಾಂಗ,ಮಾಧ್ಯಮಗಳ ಬಂಧುಗಳೇ,ನಾನು ಕೇಳುತ್ತಿರುವ ಪ್ರಶ್ನೆಗೆ ಉತ್ತರ ಕೊಡುವವರು ಯಾರು? ಹಕ್ಕು,ಹಕ್ಕು ಎಂದು ಕಕ್ಕುತ್ತಿರುವ ಅನಾಗರೀಕರಿಗೆ ಪ್ರಜಾಪ್ರಭುತ್ವದ ಜವಾಬ್ದಾರಿಯೂ ಇದೆ ಎಂದು ತಿಳಿಯ ಹೇಳುವವರು ಯಾರು? ಕಳೆದ 30 ವರುಷಗಳಿಂದ ಸ್ವಂತ ದುಡಿಮೆಯಿಂದ ನಮ್ಮ ಕುಟುಂಬ ಕನಕಪುರರಸ್ತೆಯ ವಾಜರಹಳ್ಳಿಯ ಬಿ ಸಿ ಸಿ ಎಚ್ ಎಸ್ ಲೇಔಟ್ ನಲ್ಲಿ40 ×60=ರ ನಿವೇಶನಕೊಂಡು ಬದುಕಲು ಬಂದೆವು.

ಅಲ್ಲಿಂದ ಈಗಳಿಗೆಯವರೆಗೂ ಭಯ, ಭಯದಿಂದಲೇ ಬದುಕಬೇಕಾಗಿದೆ. ಇದೀಗ ಪಕ್ಕಕ್ಕೆ ಬಂದಿರುವ ಜೈ ಶಕ್ತಿ ಅಪಾರ್ಟ್ಮೆಂಟ್ ನ ವಿವಿಧ ರಾಜ್ಯದ ವಿವಿಧ ಭಾಷೆಯ ವಿವಿಧ ಮನೋವಿಕಾರದ ಜನಗಳು, ರಸ್ತೆಯೇ ಪಾರ್ಕ್ ಎನ್ನುವಂತೆ, ಪ್ಲೇ ಗ್ರೌಂಡ್ ಎನ್ನುವಂತೆ, ಪಾರ್ಕಿಂಗ್ ಪ್ಲೇಸ್ ಅಂತೆ ಬಳಸಿ, ಹಗಲು ಇರಳು ನಮ್ಮ ಕುಟುಂಬದ ನೆಮ್ಮದಿಭಂಗ ಹಾಗೂ ದೂಂಡಾವೃತ್ತಿ ಮಾಡಿ ಜೀಶಭಯ ಉಂಟು ಮಾಡುವುದರಿಂದ ರಕ್ಷಣೆ ಕೊಡುವವರು ಯಾರು? ನಮ್ಮ ಎಂ ಪಿ, ಎಂ ಎಲ್ ಎ ಗಳು ದಿವ್ಯನಿರ್ಲಕ್ಷದಿಂದ ಇದ್ದಾರೆ. ಪೋಲೀಸ್ ಠಾಣೆಗಳು, ಎ ಸಿ ಪಿ, ಡಿ ಸಿ ಪಿ ,ಕಮೀಷನರ್ ಗಳಿಗೆ ಮುಟ್ಟಿಸುವಷ್ಟು ದೊಡ್ಡ ಮನುಷ್ಯರು ನಾವಲ್ಲ.ಇದಕ್ಕೇ ಪ್ರಜಾಪ್ರಭುತ್ವ ಎನ್ನುತ್ತಾರೆಯೇ? ಬಟ್ಟೆ ಅಲ್ಲ ಎದೆ ಸೀಳಿಕೊಂಡರೂ ಈಜನ ತುಟಿಪಿಟಕ್ ಎನ್ನದೆಯೇ ಹಾಯಾಗಿಯೇ ಇದ್ದಾರಲ್ಲಾ ಮುಂದೇನು?

ಸೂಕ್ತ ಕ್ರಮ ಕೈಗೊಳ್ಳುವವರು ಯಾರು? ನನಗಲ್ಲ, ನನ್ನ ಕುಟುಂಬಕ್ಕಲ್ಲ ಈ ಅನಾಗರಿಕರನ್ನು ಬಂದುಬಸ್ತ್ ನಲ್ಲಿ ಇಡುವವರು ಯಾರು ???????

ಪುಸ್ತಕಮನೆ ಹರಿಹರಪ್ರಿಯ,
ಹಿರಿಯ ನಾಗರಿಗ,ಸಾಹಿತಿ 9845867184

Related Post

ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ
ತಳಸಮುದಾಯವರು ಇಂದಿನ ಸುಳ್ಳುಗಳ ಜೊತೆಗೆ ಟ್ಯಾಗ್ ಆಗುತ್ತಿರುವುದು ದುರಂತ – ಎಲ್.ಎನ್.ಮುಕು0ದರಾಜ್
ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ರವರಿಗೆ ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತ ರಂಗ ಬೆಂಬಲ : ಡಾ.ಎಂ. ಚಂದ್ರಶೇಖರ್

Leave a Reply

Your email address will not be published. Required fields are marked *

You missed

error: Content is protected !!