PLACE YOUR AD HERE AT LOWEST PRICE
ಬಂಗಾರಪೇಟೆ:ಪಟ್ಟಣದ ಪಟ್ಟಾಭಿಷೇಕೋದ್ಯಾನವನದಲ್ಲಿ ವಾಲಿಬಾಲ್ ಆಡಲು ನಿರ್ಮಾಣವಾಗಿದ್ದ ಮೈದಾನವನ್ನು ಪುರಸಭೆ ಅಧಿಕಾರಿಗಳು ದಿಡೀರನೆ ತೆರವುಗೊಳಿಸಿ, ಸಸಿಗಳನ್ನು ನೆಟ್ಟಿದ್ದಾರೆ.
ಪಟ್ಟಣದ ಹೃದಯ ಭಾಗದಲ್ಲಿರುವ ಪಟ್ಟಾಭಿಶೇಕೋದ್ಯನವನವನ್ನು ಈ ಹಿಂದೆ ಹಾಜಿ ಇಸ್ಮಾಯಿಲ್ ಶೇಠ್ ಎಂಬುವರು ಸಾರ್ವಜನಿಕರ ಬಳಕೆಗೆಂದು ಉಚಿತವಾಗಿ ದಾನ ನೀಡಿದ್ದರು. ಅಂದು ಮಕ್ಕಳು ಆಟವಾಡಲು,ವೃದ್ದರಿಗೆ ಬೆಳಗ್ಗೆ ಸಂಜೆ ಸಮಯ ಕಳೆಯಲು ಸೂಕ್ತವಾಗಿತ್ತು.
ದಿನಕಳೆದಂತೆ ದಾನವಾಗಿ ನೀಡಿದ್ದ ಜಾಗವನ್ನು ಪುರಸಭೆ ಒಂದು ಕಡೆ ಬಾಲಕಿಯರ ಕಾಲೇಜಿಗೆ ನೀಡಿತು, ಮತ್ತೊಂದು ಕಡೆ ಸಿಟಿಜನ್ ಕ್ಲಬ್, ಲಯನ್ಸ್ ಭನವಕ್ಕೆ ಮತ್ತು ಗ್ರಂಥಾಲಯಕ್ಕೆ ನೀಡಿ, ಅಲ್ಲಿ ಕಟ್ಟಡಗಳು ನಿರ್ಮಾಣವಾಗಿ ಕಾರ್ಯನಿರ್ವಹಿಸುತ್ತಿತ್ತು.
ಮತ್ತೊಂದು ದಿಕ್ಕಿನಲ್ಲಿ ವಾಲಿಬಾಲ್ ಪ್ರಿಯರಿಗೆ ನಿತ್ಯ ಅಭ್ಯಾಸ ಮಾಡಲು ಸುಮಾರು 30ವರ್ಷಗಳಿಂದ ಬಳಸುತ್ತಿದ್ದ ವಾಲಿಬಾಲ್ ಮೈದಾನವನ್ನು ಪುರಸಭೆ ಮುಖ್ಯಾಧಿಕಾರಿ ಚಲಪತಿ ಮತ್ತು ಸಿಬ್ಬಂದಿ ನ್ಯಾಯಾಲಯದ ಆದೇಶದಂತೆ ತೆರವುಗೊಳಿಸಿ ಗಿಡಗಳನ್ನು ನೆಟ್ಟಿದ್ದಾರೆ.
2008ರಲ್ಲಿ ವಕೀಲರೊಬ್ಬರು ಸಾರ್ವಜನಿಕರ ಬಳಕೆಗೆ ದಾನಿಯೊಬ್ಬರು ನೀಡಿದ್ದ ಪಾರ್ಕ್ ಜಾಗದಲ್ಲಿ ಪುರಸಭೆ ಅನ್ಯ ಚಟುವಟಿಕೆಗಳಿಗೆ ಅವಕಾಶ ನೀಡಿದ್ದಾರೆ. ಇದರಿಂದ ಪಾರ್ಕ್‍ನ ಮೂಲ ಉದ್ದೇಶವೇ ಮಾಯವಾಗುವಂತಾಗಿದೆ.
ಪಾರ್ಕ್ ಜಾಗವನ್ನು ಪಾರ್ಕ್‍ಗಾಗಿಯೇ ಮೀಸಲಿರಿಸಿ ಎಂದು ಸಾರ್ವಜನಿಕ ಹಿಸಾಸಕ್ತಿ ಅರ್ಜಿ ಸಲ್ಲಿಸಿದರಿಂದ ಹೈಕೋರ್ಟ್ ಉದ್ಯಾನವನದಲ್ಲಿ ಇತರೇ ಕಟ್ಟಡ ನಿರ್ಮಾಣ ಮಾಡದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿತ್ತು.
ನಿತ್ಯ ಬೆಳಗ್ಗೆ ಸಂಜೆ ವಾಲಿಬಾಲದ್ ಅಭ್ಯಾಸ ಮಾಡುತ್ತಿದ್ದವರಿಗೆ ಈಗ ಪುರಸಭೆ ನಿರ್ಧಾರದಿಂದಾಗಿ ಬೇಸರ ಉಂಟು ಮಾಡಿದೆ. ಹೈಕೋರ್ಟ್ ಆದೇಶವಿದ್ದರೆ 15ವರ್ಷ ಯಾಕೆ ತೆರವಿ ಕಾರ್ಯಕೈಗೊಂಡಿಲ್ಲ ಎಂದು ಆಟಗಾರರು ಅಸಮದಾನ ಹೊರಹಾಕಿದ್ದಾರೆ.