• Thu. Sep 28th, 2023

PLACE YOUR AD HERE AT LOWEST PRICE

ಬಂಗಾರಪೇಟೆ:ಶಾಲೆಗೆ ಖಾಯಂ ನುರಿತ ಶಿಕ್ಷಕರು ಬೇಕೆಂದು ಒತ್ತಾಯಿಸಿ ತಾಲ್ಲೂಕಿನ ಕುಂದರಸನಹಳ್ಳಿ ಮಕ್ಕಳು ಗ್ರಾಮಸ್ಥರು ಶಾಲೆಗೆ ಬೀಗ ಜಡಿದು ಅಧಿಕಾರಿಗಳ ಗಮನ ಗ್ರಾಮದ ಕಡೆ ಸೆಳೆದ ಘಟನೆ ನಡೆದಿದೆ.

ತಾಲ್ಲೂಕಿನ ಗಡಿ ಭಾಗಕ್ಕೆ ಹೊಂದಿಕೊಂಡಿರುವ ದೋಣಿಮಡಗು ಗ್ರಾಪಂನ ಕುಂದರಸನಹಳ್ಳಿ ಗ್ರಾಮದಲ್ಲಿ 1 ರಿಂದ 5 ತರಗತಿವರೆಗೂ ಸರ್ಕಾರಿ ಶಾಲೆ ಇದ್ದು, ಸುಮಾರು 32 ಮಕ್ಕಳು ದಾಖಲಾಗಿದ್ದಾರೆ.

ಶಾಲೆ ಆರಂಭಕ್ಕೂ ಹಿಂದಿನ ದಿನ ಪಂಚಾಯಿತಿ ಸದಸ್ಯರು ಮತ್ತು ಗ್ರಾಮಸ್ಥರು ಸೇರಿ ಶಾಲೆಯನ್ನು ಸ್ವಚ್ಚಗೊಳಿಸಿ ಮಕ್ಕಳ ದಾಖಲಾತಿಗೆ ಎಲ್ಲಾ ವ್ಯವಸ್ಥೆಯನ್ನು ಮಾಡಲಾಗಿತ್ತು.

ಶಾಲೆ ಆರಂಭದ ದಿನ ಶಿಕ್ಷಕರು ಬಂದು ಗ್ರಾಮಸ್ಥರ ಜೊತೆ ಸೇರಿ ಮಕ್ಕಳನ್ನು ಸ್ವಾಗತಿಸಿ ಹೋದರು. ಮರು ದಿನ ಖಾಯಂ ನುರಿತ ಶಿಕ್ಷಕಿಯನ್ನು ಬೇರೆ ಶಾಲೆಗೆ ನಿಯೋಜನೆ ಮಾಡಿ ಅತಿಥಿ ಶಿಕ್ಷಕರನ್ನು ಶಾಲೆಗೆ ಅಧಿಕಾರಿಗಳು ನಿಯೋಜನೆ ಮಾಡಿದ್ದಾರೆ.

ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಮತ್ತು ಮಕ್ಕಳು ಶಾಲೆಗೆ ಬೀಗ ಜಡಿದು ಶಾಲೆಯ ಖಾಯಂ ಶಿಕ್ಷಕಿ ಶಾಂತಮ್ಮ ಎಂಬುವವರನ್ನೇ ಮರಳಿ ನಿಯೋಜನೆ ಮಾಡಬೇಕೆಂದು ಒತ್ತಾಯ ಮಾಡಿದರು.

ದೋಣಿಮಡಗು ಶಾಲೆಯಲ್ಲಿ ನಲಿಕಲಿಗೆ ತರಬೇತಿ ಪಡೆದ ಶಿಕ್ಷಕರು ಇಲ್ಲದ ಕಾರಣ ಕುಂದರಸನಹಳ್ಳಿ ಶಾಲೆಯ ಶಿಕ್ಷಕಿಯನ್ನು ದೋಣಿಮಡಗು ಶಾಲೆಗೆ ನಿಯೋಜನೆ ಮಾಡಲಾಗಿತ್ತು. ಕುಂದರಸನಹಳ್ಳಿ ಶಾಲೆಗೆ ಮತ್ತೊಬ್ಬ ಖಾಯಂ ಶಿಕ್ಷಕಿಯ ಜೊತೆಗೆ ಒಬ್ಬ ಅತಿಥಿ ಶಿಕ್ಷಕಿಯನ್ನು ನಿಯೋಜನೆ ಮಾಡಲಾಗಿದೆ.

ಈ ಹಿಂದೆ ಇದ್ದ ಶಿಕ್ಷಕಿಯನ್ನು ಮರಳಿ ಕುಂದರಸನಹಳ್ಳಿ ಶಾಲೆಗೆ ನಿಯೋಜನೆ ಮಾಡಬೇಕೆಂದು ಗ್ರಾಮಸ್ಥರು ಪಟ್ಟು ಹಿಡಿದು ಶಾಲೆಗೆ ಬೀಗ ಹಾಕಿದರು. ದೋಣಿಮಡಗು ಗ್ರಾಮದಲ್ಲಿ ತರಬೇತಿ ಪಡೆದ ಶಿಕ್ಷಕರು ಇಲ್ಲದ ಕಾರಣ ಕುಂದರಸನಹಳ್ಳಿ ಶಾಲೆಯ ಶಿಕ್ಷಕಿಯನ್ನು ಅಲ್ಲಿಗೆ ಕಳುಹಿಸಲಾಗಿತ್ತು.

ಕುಂದರಸನಹಳ್ಳಿ ಶಾಲೆಗೆ ಒಬ್ಬ ಖಾಯಂ ಮತ್ತು ಒಬ್ಬ ಅತಿಥಿ ಶಿಕ್ಷಕರನ್ನು ನಿಯೋಜನೆ ಮಾಡಲಾಗಿದೆ. ಗ್ರಾಮಸ್ಥರು ಹಿಂದೆ ಇದ್ದ ಶಾಂತಮ್ಮ ಎಂಬ ಶಿಕ್ಷಕಿಯನ್ನು ನಿಯೋಜನೆ ಮಾಡಬೇಕು ಎಂದು ಪಟ್ಟು ಹಿಡಿದಿರುವ ಕಾರಣ ಮಂಗಳವಾರದಿಂದ ಅದೇ ಶಿಕ್ಷಕಿಯನ್ನು ಕಳುಹಿಸಲಾಗುತ್ತದೆಂದು ಬಿಇಒ ಸುಕನ್ಯ ತಿಳಿಸಿದರು.

Leave a Reply

Your email address will not be published. Required fields are marked *

You missed

error: Content is protected !!