• Thu. Sep 28th, 2023

PLACE YOUR AD HERE AT LOWEST PRICE

ಕೋಲಾರ ನಗರದ ಮೆಥೋಡಿಸ್ಟ್ ಚರ್ಚ್ನಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಅಡ್ಡಿ ಪಡಿಸಿ ಶಾಂತಿ ಭಂಗ ಮಾಡುವ ಪ್ರಾಂಕ್ಲಿನ್ ಡಿಸೋಜ ಅವರನ್ನು ಕಾನೂನು ರೀತಿಯಲ್ಲಿ ಕ್ರಮ ಕೈಗೊಂಡು ನಮಗೆ ನ್ಯಾಯ ಕೊಡಿಸುವಂತೆ ಕ್ರೈಸ್ತ ಸಮುದಾಯದ ಮುಖಂಡರು ಬುಧವಾರ ನಗರದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸುವ ಮೂಲಕ ಆಗ್ರಹಿಸಿದ್ದಾರೆ.

ಈಗಾಗಲೇ ಫ್ರಾಂಕ್ಲಿನ್ ಡಿಸೋಜ ಅವರ ಮೇಲೆ ಸಾಕಷ್ಟು ಪ್ರಕರಣಗಳು ದಾಖಲಾಗಿದ್ದು ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುತ್ತಾ ಇರುವ ವ್ಯಕ್ತಿಯಾಗಿದ್ದು ಚರ್ಚ್ನಲ್ಲಿ ನಡೆಯುವ ಪ್ರತಿಯೊಂದು ಕಾರ್ಯ ಚಟುವಟಿಕೆಗಳಿಗೆ ಅಡ್ಡಿ ಪಡಿಸಿದ್ದಾರೆ ಜೊತೆಗೆ ಆಡಳಿತ ಮಂಡಳಿಯ ಸದಸ್ಯರನ್ನು ವಜಾ ಮಾಡತ್ತೇನೆ ಎಂದು ಧಮ್ಕಿ ಹಾಕಿದ್ದಾನೆ ಸರ್ವಾಧಿಕಾರಿ ಧೋರಣೆಯಿಂದ ತುಂಬಾ ತೊಂದರೆ ಹಾಗೂ ಕಿರುಕುಳ ನೀಡುವ ವ್ಯಕ್ತಿಯನ್ನು ಕೂಡಲೇ ಬಂಧಿಸಿ ಶಾಂತಿ ಕಾಪಾಡುವಂತೆ ಒತ್ತಾಯಿಸಿದರು.

ಮೆಥೋಡಿಸ್ಟ್ ಚರ್ಚ್ ಮೊದಲಿನಿಂದಲೂ ಶಾಂತಿ ಹಾಗೂ ನೆಮ್ಮದಿಯ ಸಂಕೇತವಾಗಿದ್ದು ಇಂತ ಚರ್ಚ್ ನಲ್ಲಿ ಅಶಾಂತಿ ತರುವ ಫ್ರಾಂಕ್ಲಿನ್ ಡಿಸೋಜ ಅವರನ್ನು ಕಾನೂನು ರೀತಿಯಲ್ಲಿ ಕ್ರಮ ಕೈಗೊಂಡು ಮುಂದೆ ನಡೆಯವ ಪ್ರತಿಯೊಂದು ಕಾರ್ಯಕ್ರಮಗಳಿಗೆ ರಕ್ಷಣೆ ಕೊಡುವಂತೆ ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕ್ರೈಸ್ತ ಮುಖಂಡರಾದ ಟಿ.ಎಸ್ ಸುಧೀರ್‌ಕುಮಾರ್, ವಿಶ್ವಾಸ್, ದೇವಕುಮಾರ್, ಬಾಬು, ನಿರ್ಮಲ್ ಕುಮಾರ್, ಮುಂತಾದವರು ಇದ್ದರು.

Leave a Reply

Your email address will not be published. Required fields are marked *

error: Content is protected !!