• Wed. Sep 18th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ಪುರಸಭೆ ವ್ಯಾಪ್ತಿಗೆ ಬರುವಂತ ಪಟ್ಟಾಭಿಷೇಕೋದ್ಯಾನವನದಲ್ಲಿ ಇತ್ತೀಚಿಗೆ ನ್ಯಾಯಾಲಯದ ಆದೇಶದ ಮೇರೆಗೆ ತೆರವುಗೊಳಿಸಿದ ವಾಲಿಬಾಲ್ ಆಟದ ಮೈದಾನದಲ್ಲಿ ಉದ್ಯಾನವನ್ನು ಅಭಿವೃದ್ಧಿಗೊಳಿಸಿ ಎಂದು ದಲಿತ ಸಂಘರ್ಷ ಸಮಿತಿಗಳ ಐಕ್ಯತಾ ಹೋರಾಟ  ಸಮಿತಿಯ ಮುಖಂಡ ಕಲಾವಿದ ಯಲ್ಲಪ್ಪ ಆಗ್ರಹ ಪಡಿಸಿದರು.

ಅವರು ಪಟ್ಟಣದ ಪುರಸಭೆ ಮುಖ್ಯ ಅಧಿಕಾರಿಗಳಾದ ಜಿ. ಚಲಪತಿರಿಗೆ ಉದ್ಯಾನವನದ ಉನ್ನತೀಕರಣಕ್ಕೆ ಸಂಬಂಧಪಟ್ಟಂತೆ ಮನವಿ ಪತ್ರ ನೀಡಿ ಮಾತನಾಡಿ, ಗಿಡಗಳನ್ನು ನೆಡುವುದರ ಜೊತೆಯಲ್ಲಿ ವಾಕಿಂಗ್ ಟ್ರ್ಯಾಕ್ ಮತ್ತು ಹೆಚ್ಚುವರಿಯಾಗಿ ವ್ಯಾಯಾಮಕ್ಕೆ ಬೇಕಾಗಿರುವ ಸಲಕರಣೆಗಳನ್ನು ಶೀಘ್ರದಲ್ಲಿ ಅಳವಡಿಸಬೇಕು.

ಪಟ್ಟಾಭಿಷೇಕೋದ್ಯಾನವನವನ್ನು ಸರ್ ಹಾಜಿ ಇಸ್ಮಾಯಿಲ್ ಸೆಠ್ ರವರು ಜನರ ಶ್ರೇಯೋಭಿವೃದ್ಧಿಗಾಗಿ ಉದ್ಯಾನವನ ನಿರ್ಮಿಸಲು ದಾನವಾಗಿ ನೀಡಿರುತ್ತಾರೆ. ತದನಂತರ ಈ ಸ್ಥಳದಲ್ಲಿ ಕೆಲವರು ವಾಲಿಬಾಲ್ ಆಟ ಆಡಲು ಕ್ರೀಡಾಂಗಣ ನಿರ್ಮಿಸಿಕೊಂಡಿದ್ದರಿಂದ ಉದ್ಯಾನವನಕ್ಕೆ ಧಕ್ಕೆ ಉಂಟಾಗಿತ್ತು.

ಪಟ್ಟಣದ ಸದರಿ ಸ್ಥಳದಲ್ಲಿ ಅನೇಕ ವಯೋವೃದ್ಧರು, ಮಹಿಳೆಯರು ವಾಯುವಿಹಾರ, ವ್ಯಾಯಾಮ ಹಾಗೂ ಯೋಗಾಸನಗಳನ್ನು  ಮಾಡುತ್ತಿದ್ದು ಶಾಸಕ ಎಸ್. ಎನ್. ನಾರಾಯಣಸ್ವಾಮಿ ಉದ್ಯಾನವನದ ಅಭಿವೃದ್ಧಿಗೆ ಅನುದಾನವನ್ನು ತಂದು ವಾಕಿಂಗ್ ಟ್ರ್ಯಾಕ್, ವ್ಯಾಯಾಮ ಸಲಕರಣೆಗಳನ್ನು ನಿರ್ಮಿಸಿ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದರು.

ದಿನಕಳದಂತೆ ಈ ಉದ್ಯಾನವನಕ್ಕೆ ಆಗಮಿಸುವ ಸಾರ್ವಜನಿಕರ ಸಂಖ್ಯೆ ಪ್ರಮಾಣದಲ್ಲಿ  ಗಣನೀಯ ಪ್ರಮಾಣದಲ್ಲಿ ಹೆಚ್ಚಾಯಿತು. ಇದರಿಂದ ಸ್ಥಳಾವಕಾಶ ಕೊರತೆ ಉಂಟಾದ್ದರಿಂದ ಇದರ ಜೊತೆಗೆ ವಾಲಿಬಾಲ್  ಆಟಗಾರರು ಆಡುವ ಉತ್ಸಾಹದಿಂದ ಕಿರುಚಾಟ ಮಾಡುತ್ತಿದ್ದರು.

ಕೆಲವೊಮ್ಮೆ ಚೆಂಡು ಸಾರ್ವಜನಿಕರ ಮೇಲೆ ಬಿದ್ದ ನಿದರ್ಶನಗಳು ಇವೆ ಇದರೊಟ್ಟಿಗೆ ಧ್ಯಾನ ಮತ್ತು  ಯೋಗಾಸನ ಮಾಡುವವರಿಗೆ ವಾಯುವಿಹಾರಿಗಳಿಗೆ ಕಿರಿಕಿರಿ ಉಂಟಾಗುತ್ತಿತ್ತು. ಪುರಸಭೆ ಅಧಿಕಾರಿಗಳು ನ್ಯಾಯಾಲಯದ ಆದೇಶದಂತೆ ತೆರವುಗೊಳಿಸಿದ ಸ್ಥಳದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ವಾಯುವಿಹಾರಿಗಳಿಗೆ ಟ್ರ್ಯಾಕ್ ಮತ್ತು ವ್ಯಾಯಾಮ ಸಲಕರಣೆಗಳನ್ನು ಅಳವಡಿಸಬೇಕೆಂದು ಮನವಿ ಮಾಡಿಕೊಂಡರು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಪುರಸಭೆ ಮುಖ್ಯಾಧಿಕಾರಿ ಜಿ. ಎನ್. ಚಲಪತಿ ಮನವಿ ಸ್ವೀಕರಿಸಿ ಮಾತನಾಡಿ, ಸದರಿ ಸ್ಥಳ ಪುರಸಭೆ ಸ್ವತಾಗಿದ್ದು ಶಾಸಕರು ಉದ್ಯಾನವನದ ಅಭಿವೃದ್ಧಿಗೆ ಸರ್ಕಾರದಿಂದ 25 ಲಕ್ಷ ರೂಗಳ ಅನುದಾನವನ್ನು ಮಂಜೂರು ಮಾಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಹಾಗೂ ನ್ಯಾಯಾಲಯದ ಆದೇಶಕ್ಕೆ ಬದ್ಧರಾಗಿ ಪರಿಸರ ದಿನಾಚರಣೆ ದಿನದಂದು ಗಿಡಗಳನ್ನು ನೆಡಲಾಗಿತ್ತು ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ರಾತ್ರೋರಾತ್ರಿ ಗಿಡಗಳನ್ನು ಕತ್ತರಿಸುವುದರ ಮೂಲಕ ತಮ್ಮ ವಿಕೃತ ಮನೋಭಾವನೆಯನ್ನು ಮೆರೆದಿದ್ದಾರೆ.

ಪ್ರಕೃತಿ ತಾಯಿಯಾದರೆ ಗಿಡಗಳು ಮಗುವಿಗೆ ಸಮಾನ ಆದ್ದರಿಂದ ಪರಿಸರವನ್ನು ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಆಗಿರುತ್ತದೆ. ಆದರೆ ಇಂತಹ ನೀಚ ಕೃತ್ಯ ಎಸೆಗಿರುವವರಿಗೆ ಒಳ್ಳೆಯದಾಗಲಿ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಸಿ, ಜೆ, ನಾಗರಾಜು, ಕರ್ನಾಟಕ ರಿಪಬ್ಲಿಕನ್ ಸೇನಾ ಜಿಲ್ಲಾಧ್ಯಕ್ಷರಾದ ಚಿಕ್ಕನಾರಾಯಣ, ಮುಖಂಡರಾದ ಅಣ್ಣಾದೊರೈ, ಜಿ,ವಿ,ಕ, ರಾಮಚಂದ್ರ, ಇನ್ನೂ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *

You missed

error: Content is protected !!