PLACE YOUR AD HERE AT LOWEST PRICE
ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರ ನೇತೃತ್ವದ ಸರ್ಕಾರ ವಾಲ್ಮೀಕಿ ನಿಗಮದಲ್ಲಿ ಮತ್ತು ಮುಡಾದಲ್ಲಿ ಕೋಟ್ಯಾಂತರ ರೂಗಳ ಹಗರಣ ನಡೆಸಿರುವುದು ಬೆಳಕಿಗೆ ಬಂದಿರುವುದರಿಂದ ಈ ಕೂಡಲೆ ಸಿ.ಎಂ.ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಜಿಲ್ಲಾ ಹಿರಿಯ ಮುಖಂಡ ಕೆ.ಚಂದ್ರಾರೆಡ್ಡಿ ಒತ್ತಾಯಿಸಿದರು.
ಬಿಜೆಪಿ ಪಕ್ಷದ ರಾಜಾದ್ಯಕ್ಷ ಬಿ.ಎಸ್.ವಿಜಯೇಂದ್ರರ ನೇತೃತ್ವದಲ್ಲಿ ವಾಲ್ಮೀಕಿ ನಿಗಮದಲ್ಲಿ ಮತ್ತು ಮುಡಾದಲ್ಲಿ ಕೋಟ್ಯಾಂತರ ರೂಗಳ ಹಗರಣ ನಡೆಸಿರುವ ಬ್ರಷ್ಟ ರಾಜ್ಯ ಸರ್ಕಾರದ ವಿರುದ್ಧ ವಿಧಾನಸೌಧ ಮುತ್ತಿಗೆಗೆ ಬಂಗಾರಪೇಟೆ ಕ್ಷೇತ್ರದಿಂದ ಹೊರಟಿದ್ದ ವಾಹನಗಳಿಗೆ ಕೆ.ಸಿ.ಆರ್ ಕಛೇರಿ ಬಳಿ ಚಾಲನೆ ನೀಡಿ ಅವರು ಮಾತನಾಡಿ ಮೇಲಿನಂತೆ ಒತ್ತಾಯಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯರ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಲವಾರು ಹಗರಣಗಳ ಮೂಲಕ ರಾಜ್ಯದ ಜನರ ತೆರಿಗೆ ಹಣ ಕೊಟ್ಯಾತರ ರೂಗಳನ್ನು ಗುಳುಂ ಮಾಡಿರುವ ಬಗ್ಗೆ ವರದಿಯಾಗುತ್ತಿದೆ. ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಾಲ್ಮೀಕಿ ಹಗರಣದಲ್ಲಿ ಸಚಿವ ನಾಗೇಂದ್ರ ಭಾಗಿಯಾಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.
ಬ್ರಷ್ಟಾಚಾರದ್ಲಲಿ ತೊಡಗಿರುವ ರಾಜ್ಯ ಸರ್ಕಾರದ ವಿರುದ್ಧ ಬೆಂಗಳೂರಿನಲ್ಲಿ ಬಿಜೆಪಿಯಿಂದ ನಡೆಯುತ್ತಿರುವ ಪ್ರತಿಭಟನೆಗೆ ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯಿತಿಗಳಿಂದ ತಲಾ 4 ವಾಹನಗಳಲ್ಲಿ ಕಾರ್ಯಕರ್ತರು ಮುಖಂಡರು ಬಾಗವಹಿಸುತ್ತಿದ್ದು, ಸಿ.ಎಂ.ರಾಜೀನಾಮೆ ನೀಡುವ ತನಕ ಹೋರಾಟವನ್ನು ಬಂಗಾರಪೇಟೆಯಲ್ಲೂ ಮುಂದುವರೆಸುತ್ತೇವೆ ಎಂದು ಎಚ್ಚರಿಸಿದರು.
ಈ ಹಗರಣಗಳನ್ನು ಗಮನಿಸಿದರೆ ಜನರ ತೆರಿಗೆ ಹಣವನ್ನು ಗುಳುಂ ಮಾಡಲೆಂದೇ ಈ ಸರ್ಕಾರ ಅಧಿಕಾರಕ್ಕೆ ಬಂದಿರುವಂತೆ ಕಾಣುತ್ತಿದೆ ಎಂದ ಅವರು ಈ ಹಗರಣಗಳು ಬೆಳಕಿಗೆ ಬಂದು ಹಲವರು ಜೈಲಿಗೂ ಹೋಗಿದ್ದಾರೆ. ಇದರ ನೈತಿಕ ಹೊಣೆ ಹೊತ್ತು ಸಿ.ಎಂ.ಸಿದ್ದರಾಮಯ್ಯ ಈ ಕೂಡಲೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ಹಗರಣಗಳು ಮತ್ತು ವೈಫಲ್ಯಗಳ ವಿರುದ್ಧ ಬಿಜೆಪಿ ಪಕ್ಷದ ರಾಜ್ಯಾದ್ಯಕ್ಷರಾದ ಬಿ.ಎಸ್.ವಿಜಯೇಂದ್ರ ಮತ್ತು ವಿರೋದ ಪಕ್ಷದ ನಾಯಕರಾದ ಆರ್.ಅಶೋಕ್ ರ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಇಂದು ಪ್ರತಿಭಟನೆ ನಡೆಯುತ್ತಿದೆ.
ಈ ಪ್ರತಿಭಟನೆಗೆ ರಾಜ್ಯಾದ ಎಲ್ಲಾ ಬಾಗಗಳಿಂದ ಸಾವಿರಾರು ಕಾರ್ಯಕರ್ತರು ಬೆಂಗಳೂರಿಗೆ ಬಂದು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ಬ್ರಷ್ಟ ಸರ್ಕಾರವನ್ನು ಕಿತ್ತೊಗೆಯುವ ತನಕ ನಮ್ಮ ಹೋರಾಟ ಮುಂದುವರೆಲಿದ್ದು ಇದಕ್ಕೆ ನಾಡಿನ ಎಲ್ಲ ಜನರು ನಮಗೆ ಬೆಂಬಲವನ್ನು ಸೂಚಿಸುತ್ತಿದ್ದಾರೆ ಎಂದರು.
ಬ್ರಷ್ಟ ಸರ್ಕಾರದ ನೇತೃತ್ವ ವಹಿಸಿರುವ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಿಂದ ಹೊರಟು ವಿಧಾನಸೌಧ ಮುತ್ತಿಗೆ ಹಾಕುವ ಹೋರಾಟಕ್ಕೆ ಬಂಗಾರಪೇಟೆ ಕ್ಷೇತ್ರದಿಂದ ಸುಮಾರು 100 ವಾಹನಗಳಲ್ಲಿ ಕಾರ್ಯಕರ್ತು ಹೊಡುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ವಿ.ಮಹೇಶ್, ಬಿಜೆಪಿ ತಾಲ್ಲೂಕು ಅದ್ಯಕ್ಷ ಸಂಪಂಗಿರೆಡ್ಡಿ ಮೊದಲಾದವರಿದ್ದರು.