PLACE YOUR AD HERE AT LOWEST PRICE
ಒಲಂಪಿಕ್ 2024ರಲ್ಲಿ ಕುಸ್ತಿ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದ ‘ವಿನೇಶ್ ಪೂಗಟ್’ ಅವರು ಇದೀಗ ಅನರ್ಹರಾದ ಸುದ್ದಿ ಹೊರ ಬಿದ್ದಿದಿದೆ. ಇದೀಗ ಈ ಕುರಿತು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಸಾಮಾಜಿಕ ಜಾಲತಾಣ ಟ್ವೀಟ್ ಮೂಲಕ ವಿನೇಶ್ ಪೂಗಟ್ ಅವರಿಗೆ ಧೈರ್ಯ ತುಂಬಿದಿದ್ದಾರೆ. ನೀವು ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿ ಎಂದು ಹೆಮ್ಮೆಯ ಮಾತುಗಳನ್ನಾಡಿದ್ದಾರೆ.
ಕುಸ್ತಿಪಟು ವಿನೇಶ್ ಪೋಗಟ್ ನೀವು ಚಾಂಪಿಯನ್‌ಗಳಲ್ಲಿ ಚಾಂಪಿಯನ್. ನೀವು ಭಾರತದ ಹೆಮ್ಮೆ ಮತ್ತು ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿದಾಯಕ ಆಟಗಾರರು ಎಂದು ಪ್ರಧಾನಿ ಬಣ್ಣಿಸಿದ್ದಾರೆ.
ಇಂದು ನೀವು ಫೈನಲ್ ತಲುಪಿ ಚಿನ್ನ ಗೆಲ್ಲಲು ಆಗದಿರಬಹುದು. ಫೈನಲ್‌ಗೆ ನೀವು ಅರ್ಹರಾಗಿರಬಹುದು. ಇಂದಿನ ನಿಮ್ಮ ಹಿನ್ನಡೆ ನೋವು ತಂದಿದೆ. ಪದಗಳು ನಾನು ಅನುಭವಿಸುತ್ತಿರುವ ಹತಾಶೆಯ ಅರ್ಥವನ್ನು ವ್ಯಕ್ತಪಡಿಸಬಹುದು ಎಂದು ನಾನು ಬಯಸುತ್ತೇನೆ ಎಂದಿದ್ದಾರೆ.
ಇದೇ ಸಮಯದಲ್ಲಿ ನೀವು ಎದೆಗುಂದದೇ ಸ್ಥಿರವಾಗಿ ನಿಲ್ಲುತ್ತೀರಿ. ಇಂತಹ ಸವಾಲುಗಳನ್ನು ಯಾವಾಗಲೂ ಎದುರಿಸುತ್ತಲೇ ಬಂದಿದ್ದೀರಿ. ಇದು ನಿಮ್ಮ ಸ್ವಭಾವವು ಹೌದು. ಎದೆಗುಂದೇ ಮತ್ತೆ ನೀವು ಉತ್ತಮ ಪ್ರದರ್ಶನ ನೀಡಬೇಕು. ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಸ್ವತಃ ಪ್ರಧಾನಿ ಮೋದಿಯವರು ವಿನೇಶ್ ಪೋಗಟ್ ಅವರಿಗೆ ಧೈರ್ಯ ತುಂಬಿದ್ದಾರೆ.