PLACE YOUR AD HERE AT LOWEST PRICE
ಬಂಗಾರಪೇಟೆ:ದಲಿತರ ನಿರಂತರ ಹೋರಾಟದ ಫಲವಾಗಿ 2013ರಲ್ಲಿ ಜಾರಿಗೆ ಬಂದಂತಹ ಎಸ್ ಸಿ ಪಿ ಮತ್ತು ಟಿ ಎಸ್ ಪಿ ಕಾಯ್ದೆಯ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಶ್ರೇಯೋಭಿವೃದ್ಧಿಗೆ ಮೀಸಲಿಟ್ಟ 35 ಸಾವಿರ ಕೋಟಿ ಹಣವನ್ನು ಕಾಂಗ್ರೆಸ್ ಸರ್ಕಾರ ದುರ್ಬಲಕೆ ಮಾಡಿಕೊಂಡಿದೆ, ಇದನ್ನು ಪ್ರಶ್ನಿಸಬೇಕಾದ ಮೀಸಲಾತಿ ಅಡಿಯಲ್ಲಿ ಗೆದ್ದಂತಹ ಶಾಸಕರುಗಳು ಸದನದಲ್ಲಿ ಪ್ರಶ್ನೆ ಮಾಡದೆ ಪಕ್ಷದ ಗುಲಾಮಗಿರಿಯ ಪ್ರತಿರೂಪದಂತೆ ಮೌನ ವಹಿಸಿರುವುದು ಖಂಡನೀಯ, ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಮುಖಂಡ ಮಾವಹಳ್ಳಿ ಶಂಕರ್ ಗುಡಿಗಿದರು.
ಪಟ್ಟಣದಲ್ಲಿ ಶಾಸಕ ಎಸ್ ಎನ್ ನಾರಾಯಣ ಸ್ವಾಮಿ ಮನೆಯ ಮುಂದೆ ಕೋಲಾರ ಜಿಲ್ಲಾ ದಲಿತರ ಪ್ರತಿರೋಧ ಪಡೆ ಮತ್ತು ಬಂಗಾರಪೇಟೆ ಶಾಖೆ ವತಿಯಿಂದ “ಹೊತ್ತಿ ಉರಿಯುತ್ತಿದೆ ನಮ್ಮ ಮನೆ, ಚಲೋ ದಲಿತ ಶಾಸಕರ ಮನೆಗೆ” ಎಂಬ ಶೀರ್ಷಿಕೆಯ ಅಡಿಯಲ್ಲಿ ಹಿರಿಯ ಮುಖಂಡ ಹಾಗೂ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯನವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬಾಬಾ ಸಾಹೇಬ್ ಅಂಬೇಡ್ಕರ್ ರವರ ಅವಿರತ ಪರಿಶ್ರಮ ಮತ್ತು ಹೋರಾಟದ ಪ್ರತಿಫಲವಾಗಿ ಇಂದು ಎಸ್ ಎನ್ ನಾರಾಯಣಸ್ವಾಮಿ ಶಾಸಕರಾಗಿದ್ದಾರೆ. ಆದರೆ ಇಂದು ಪ್ರತಿಭಟನೆಯ ಅರಿವಿದ್ದರೂ ದಲಿತ ಕೂಗನ್ನು ನಿರ್ಲಕ್ಷಿಸಿ ಅವರ ಪಕ್ಷದ ಕಾರ್ಯಕ್ರಮಕ್ಕೆ ಮೈಸೂರಿಗೆ ಹೊರಟಿರುವುದು ಅವರ ಘನತೆಗೆ ತಕ್ಕುದಾದುದಲ್ಲ ಎಂದರು.
ನಂತರ ಕೋಟಗಾನಹಳ್ಳಿ ರಾಮಯ್ಯ ಮಾತನಾಡಿ , ಕಾಂಗ್ರೆಸ್ ಪಕ್ಷ ಕಾನೂನನ್ನು ತಿರುಚಿ ಇದುವರೆಗೂ 39,000 ಕೋಟಿ ಹಣವನ್ನು ನಿರ್ದೇಶಿತ ಉದ್ದೇಶಗಳಿಗೆ ಹೊರತಾಗಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಬಳಸಿರುವುದು ಸಂವಿಧಾನದ ಇಂಗಿತಕ್ಕೆ ಎಸೆದ ಅವಮಾನವಾಗಿದೆ. ಉಳಿದ ಯಾವುದೇ ಸಮುದಾಯದ ನಿಗಮ ಮಂಡಳಿಗಳಿಗೆ ನಿಗದಿಯಾದ ಹಣವನ್ನು ಮುಟ್ಟದೆ ಕೇವಲ ಪರಿಶಿಷ್ಟ ಮೀಸಲು ಹಣ ಬಳಸಿರುವ ನಿಮ್ಮ ಕಾಂಗ್ರೆಸ್ ಸರ್ಕಾರದ ವರ್ತನೆ ಪ್ರಜಾಪ್ರಭುತ್ವದ ದಾಷ್ಠ್ಯಾ ಒಪ್ಪತಕ್ಕದ್ದಲ್ಲಾ , ಈ ಕೂಡಲೇ ಅನ್ಯ ಬಳಕೆ ಮಾಡಿರುವ ಹಿಂದಿನ ಸರ್ಕಾರಗಳ 2 ಲಕ್ಷ 56 ಕೋಟಿ ಹಾಗೂ ಕಾಂಗ್ರೆಸ್ ಸರ್ಕಾರದ 39,000 ಕೋಟಿ ಹಣವನ್ನು ಹಿಂಪಡೆದು ಪ್ರತ್ಯೇಕ ಆಂತರಿಕ ದಲಿತ ಬಜೆಟ್ ಘೋಷಿಸಬೇಕು ಹಾಗೂ ಈ ಹಣದಲ್ಲಿ ಮಕ್ಕಳ ಪ್ರಾಥಮಿಕ ಶಿಕ್ಷಣವನ್ನು ಸ್ಮಾರ್ಟ್ ಎಜುಕೇಶನ್ ಗಾಗಿ ಯೋಜನಾ ಬದ್ಧವಾಗಿ ಬಳಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಸಂಚಾಲಕ ಸುಳಿಕುಂಟೆ ರಮೇಶ್, ಪ್ರೊ.ನೇತ್ರ ಕವಿ, ಮುಖಂಡರಾದ ಕಲಾವಿದ ಯಲ್ಲಪ್ಪ, ಹುಣಸನಹಳ್ಳಿ ವೆಂಕಟೇಶ್, ಕೆ.ಮದಿವಣ್ಣನ್, ಹಾರೋಹಳ್ಳಿ ರವಿ, ಗಾಂಧಿನಗರ ಶ್ರೀರಂಗ, ಸಿ.ಜೆ.ನಾಗರಾಜ್, ದೇಶಹಳ್ಳಿ ಶ್ರೀನಿವಾಸ್, ಪಿ ವಿ ಸಿ ಮಣಿ, ರಘು, ಸಂಗನಹಳ್ಳಿ ರಮೇಶ್, ರವಿ, ಮದಿವಣ್ಣನ್, ನವೀನ್ ಕುಮಾರ್, ಸೂಲಿಕುಂಟೆ ಮುನಿರಾಜು, ಕೀಲುಕೊಪ್ಪ ಮುನಿರಾಜು, ಮೆಹಬೂಬ್, ಇತರರು ಉಪಸ್ಥಿತರಿದ್ದರು.