PLACE YOUR AD HERE AT LOWEST PRICE
ಬಂಗಾರಪೇಟೆ:ತಾಲೂಕಿನ ಸಕ್ಕನಹಳ್ಳಿ ಗ್ರಾಮದಲ್ಲಿ ಆಸ್ತಿ ವಿವಾದದ ಹಿನ್ನೆಲೆ ವೆಂಕಟೇಶಪ್ಪ ತನ್ನ ಸಹೋದರ ನಾರಾಯಣಪ್ಪನ ಮಗನಾದ ಶಿವಕುಮಾರ್ ಎಂಬುವರ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ನಾರಾಯಣಪ್ಪರ ಮಗ ಶಿವಕುಮಾರ್ ಬಿಎಂಟಿಸಿ ಸಂಸ್ಥೆಯಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದು ದೇಶಿಹಳ್ಳಿ ಗ್ರಾಮದಲ್ಲಿ ವಾಸವಾಗಿರುತ್ತಾರೆ. ಎಂದಿನಂತೆ ಸಕ್ಕನಹಳ್ಳಿ ಗ್ರಾಮದ ತಮ್ಮ ತೋಟದ ಬಳಿ ಹೋದಾಗ ದೊಡ್ಡಪ್ಪನಾದ ವೆಂಕಟೇಶಪ್ಪ ತಮ್ಮ ಜಮೀನನ್ನು ಸ್ವಚ್ಛಗೊಳಿಸಿ ಶಿವಕುಮಾರ್ ಜಮೀನಿನ ಪಕ್ಕದಲ್ಲಿ ಕಸವನ್ನು ಹಾಕಿರುತ್ತಾರೆ.
ಇದನ್ನು ಪ್ರಶ್ನೆಮಾಡಿದ ಕಾರಣಕ್ಕಾಗಿ ಕುಪಿತಗೊಂಡ ವೆಂಕಟೇಶಪ್ಪ ಶಿವಕುಮಾರ್ ಮತ್ತು ಅವರ ಕುಟುಂಬದವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಮಚ್ಚಿನಿಂದ ಹಲ್ಲೆ ನಡೆಸಿರುತ್ತಾರೆ ಎಂದು ಶಿವಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಹಲ್ಲೆ ಮಾಡಿದ ವೆಂಕಟೇಶಪ್ಪ ಈ ಹಿಂದೆಯೂ ಸಹ ಹಲವು ಭಾರಿ ಹಲ್ಲೆ ನಡೆಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ತನ್ನ ಅಳಿಯ ರವಿಕುಮಾರ್ ಮಲವಳ್ಳಿಯಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದು “ನೀನು ಕೇವಲ ಬಿಎಂಟಿಸಿ ಚಾಲಕ ನಿನ್ನ ಕೈಯಲಿ ಏನು ಮಾಡಲು ಸಾಧ್ಯವಿಲ್ಲ ನನ್ನ ರಕ್ಷಣೆಗೆ ಅಳಿಯ ನಿಲ್ಲುತ್ತಾರೆ” ಎಂದು ಅಧಿಕಾರಿಯ ಹೆಸರನ್ನು ದುರುಪಯೋಗ ಪಡಿಸಿಕೊಂಡು ದರ್ಪದಿಂದ ಬೆದರಿಕೆ ಹಾಕಿರುತ್ತಾರೆ ಎಂದು ಶಿವಕುಮಾರ್ ಆರೋಪಿಸಿದ್ದಾರೆ.
ಮಚ್ಚಿನಿಂದ ಹಲ್ಲೆ ನಡೆಸಿದ ವೆಂಕಟೇಶಪ್ಪ ಸಹ ಶಿವಕುಮಾರ್ ಕುಟುಂಬದಿಂದ ತನ್ನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ದೂರಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.