PLACE YOUR AD HERE AT LOWEST PRICE
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಅವರ ಫೋಟೋವೊಂದು ವೈರಲ್ ಆಗಿದೆ.
ಪರಪ್ಪನ ಅಗ್ರಹಾರದಲ್ಲಿ ಕೊಲೆ ಪ್ರಕರಣದಲ್ಲಿ ಬಂಧನವಾಗಿರುವ ನಟ ದರ್ಶನ್ ಜೈಲಿನ ಸ್ಪೆಷೆಲ್ ಬ್ಯಾರೆಕ್‌ನ ಹೊರಗಡೆ ಕೂತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎರಡು ದಿನಗಳ ಹಿಂದಷ್ಟೇ ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರ ಜೈಲಿಗೆ ದಾಳಿ ನಡೆಸಿದ್ದರು. ಆದರೆ ಇದೀಗ ಜೈಲಿನ
ಒಳಗಡೆಯಿಂದಲೇ ದರ್ಶನ್ ಸೇರಿ ಕೈದಿಗಳ ಫೋಟೋ ವೈರಲ್ ಆಗಿರುವುದು ಜೈಲಿನ ನಿಯಮಗಳ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದೆ.
ದರ್ಶನ್, 11ನೇ ಆರೋ ಪಿ ನಾಗರಾಜ್, ರೌಡಿಶೀಟರ್ ವಿಲ್ಸನ್ ನಾಗರಾಜ್ ಹಾಗೂ ಇನ್ನೊಬ್ಬರ ಜೊತೆ ಜೈಲಿನ ವಿಡಿಯೋ ಕಾನ್ಫೆರೆನ್ಸ್ ಹಾಲ್‌ನ ಹಿಂಭಾಗದ ಸ್ಥಳದಲ್ಲಿ ಕೂತಿದ್ದಾರೆ. ದರ್ಶನ್ ಖುರ್ಚಿ ಮೇಲೆ ಕೂತು ಕೈಯಲ್ಲಿ ಸಿಗರೇಟ್ ಹಿಡಿದು, ಮತ್ತೊಂದು ಕೈಯಲ್ಲಿ ಕಾಫಿ ಕಪ್ ಹಿಡಿದುಕೊಂಡಿರುವುದು ಫೋಟೋದಲ್ಲಿ ಕಂಡುಬಂದಿದೆ.
ಜೈಲಿನ ಒಳಗಡೆ ಕಟ್ಟುನಿಟ್ಟಿನ ನಿಯಮಗಳಿರುವುದರಿಂದ ದರ್ಶನ್ ಅವರ ಫೋಟೋ ತೆಗದು ಸೋರಿಕೆ ಮಾಡಿದ್ದು ಯಾರು ಎನ್ನುವ ಪ್ರಶ್ನೆ ಕಾಡಿದೆ. ಕೈದಿಯೊಬ್ಬರು ದೂರದಿಂದ ಫೋಟೋ ತೆಗೆದು ಅದನ್ನು ಹಂಚಿದ್ದಾರೆ ಎಂದು ಹೇಳಲಾಗುತ್ತಿದೆ.
ಜೈಲಿನಲ್ಲಿ ನಗುಮುಖದಿಂದ ಇರುವ ದರ್ಶನ್, ಐಷಾರಾಮಿ ಜೀವನದ ಸೌಲಭ್ಯ ಸಿಗುತ್ತಿದೆಯೇ? ಎನ್ನುವ ಅನುಮಾನ ಶುರುವಾಗಿದೆ.
ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.