PLACE YOUR AD HERE AT LOWEST PRICE
ಹಿಂದುಳಿದ ಸಮುದಾಯಗಳು ಸಂಘಟಿತರಾಗಿ ಸುಭದ್ರ ರಾಜ್ಯ ಕಟ್ಟಲು ಮುಂದಾಗಿ – ವರ್ತೂರ್ ಪ್ರಕಾಶ್
ಕೋಲಾರ; ಹಿಂದುಳಿದ ವರ್ಗಗಳು ಸಂಘಟಿತರಾಗುವ ಮೂಲಕ ಸುಭದ್ರ ಸಮಾಜವನ್ನು ಕಟ್ಟಬೇಕು ಎಂದು ಮಾಜಿ ಸಚಿವ ಹಾಗೂ ಅಹಿಂದ ಮುಖಂಡ ಆರ್. ವರ್ತೂರ್ ಪ್ರಕಾಶ್ ಕರೆ ನೀಡಿದರು.
ನಗರದ ಕಾರಂಜಿಕಟ್ಟೆ ಬಡಾವಣೆಯಲ್ಲಿ ನಿರ್ಮಾಣವಾಗಿರುವ ಶ್ರೀ ಧರ್ಮರಾಯಸ್ವಾಮಿ ಸಮುದಾಯ ಭವನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಹಿಂದುಳಿದ ಸಮುದಾಯಗಳು ಬಿಡಿಬಿಡಿಯಾಗಿ ಇದ್ದರೆ ಏನೂ ಸಾಧಿಸಲು ಸಾಧ್ಯವಿಲ್ಲ, ಸಾಧನೆಗೆ ಒಗ್ಗಟ್ಟು ಮುಖ್ಯವಾದ ಅಸ್ತರ ಇನ್ನು ಮುಂದಿನ ದಿನಗಳಲ್ಲಾದರೂ ಹಿಂದುಳಿದ ವರ್ಗಗಳು ಸಂಘಟಿತರಾಗುವ ಮೂಲಕ ಅಭಿವೃದ್ಧಿ ಸಾಧಿಸುವುದರೊಂದಿಗೆ ರಾಜ್ಯವನ್ನು ಸುಭದ್ರವಾಗಿ ಕಟ್ಟಬೇಕು ಎಂದರು.
ಇಂದು ಉದ್ಘಾಟನೆಗೊಂಡ ಸಮುದಾಯ ಭವನದ ಆಧಾಯದ ಮೂಲಕ ತಿಗಳರ ಮಕ್ಕಳಿಗೆ ಹಾಸ್ಟೆಲ್ ಕಟ್ಟಿ ಉಚಿತವಾಗಿ ಊಟ-ತಿಂಡಿ, ವಸತಿ ನೀಡಬೇಕೆಂದು ಸಲಹೆ ನೀಡಿದರಲ್ಲದೆ ವಸತಿ ನಿಲಯ ನಿರ್ಮಾಣಕ್ಕೆ ೧೦ ಲಕ್ಷ ರೂ. ದೇಣಿಗೆ ನೀಡುವುದಾಗಿ ಭರವಸೆ ನೀಡಿದರು.
ಸಮಾಜ ಸೇವಕ ಎ.ಶ್ರೀನಿವಾಸ್ ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ ಸಮುದಾಯ ಮುಖಂಡರಿಗೆ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡುವ ಮೂಲಕ ಗೌರವ ಸನ್ಮಾನವನ್ನು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷೆ ಮಂಗಮ್ಮಮುನಿಸ್ವಾಮಿ, ಮುಖಂಡ ಮಾಲೂರು ಲೋಕೇಶ್, ತಿಗಳ ಸಮುದಾಯದ ಮುಖಂಡ ಎಲ್.ಎ.ಮಂಜುನಾಥ್, ಕಾರಂಜಿಕಟ್ಟೆಯ ಗಾಯಿತ್ರಮ್ಮಗೌಡರ ಶ್ರೀನಿವಾಸ್, ಎನ್.ಫಲ್ಗುಣ, ಮಾಜಿ ಎಂ.ಎಲ್.ಸಿ. ಪಿ.ಆರ್.ರಮೇಶ್, ಯಜಮಾನ ಆನಂದಕುಮಾರ್, ಮಂಜುನಾಥ ದೀಕ್ಷಿತ್, ಪಲ್ಲವಿಮಣಿ, ರಾಜಕೃಷ್ಣಮೂರ್ತಿ, ಬೆಗ್ಲಿಪ್ರಕಾಶ್,ಗೌಡರ ಮುನಿಯಪ್ಪ, ಕೆಎಸ್ಸಾರ್ಟಿಸಿ ಮುನಿಯಪ್ಪ, ನಗರರಸಭೆ ಸದಸ್ಯ ಮಂಜುನಾಥ್, ನಗರಸಭೆ ಸದಸ್ಯೆ ಲಕ್ಷಿöÃದೇವಮ್ಮ, ಮುಖಂಡ ಕುರಿಗಳ ಶ್ರೀನಿವಾಸ್, ಕಾಶಿ ಇದ್ದರು.