PLACE YOUR AD HERE AT LOWEST PRICE
೨ ರಂದು ಬೆಂಗಳೂರು ಉತ್ತರ ವಿವಿ ನಾಲ್ಕನೇ ಘಟಿಕೋತ್ಸವ,
ಜಾನಪದ ಕಲಾವಿದ ಬಿ.ವಿ.ವೆಂಕಟಗಿರಿಯಪ್ಪ, ವಾಸ್ತುಶಿಲ್ಪಿ ಪ್ರೊ.ಕೆ.ಎಸ್.ಅನಂತಕೃಷ್ಣ
ವೈದ್ಯಕೀಯ ಹಾಗೂ ಸಮಾಜಸೇವಾ ಕ್ಷೇತ್ರಕ್ಕೆ ಡಿ.ಎ. ಕಲ್ಪಜಾ ಸೇರಿ ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಘೋಷಣೆ
ಕೋಲಾರ, ಆಗಸ್ಟ್ ೩೧ : ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ನಾಲ್ಕನೇ ಘಟಿಕೋತ್ಸವ ಸೆ. ೨ರಂದು ಬೆಳಗ್ಗೆ ೧೧ ಗಂಟೆಗೆ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ೭೫ರ ಬಳಿಯ ನಂದಿನಿ ಪ್ಯಾಲೇಸ್‌ನಲ್ಲಿ ನಡೆಯಲಿದ್ದು, ಸ್ನಾತಕೋತ್ತರ ಪದವಿಯ ವಿವಿಧ ವಿಭಾಗಗಳಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ ೪೪ ವಿದ್ಯಾರ್ಥಿಗಳಿಗೆ ಕುಲಾಧಿಪತಿಗಳಾಗಿರುವ ಘನತೆವೆತ್ತ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪದವಿ ಪ್ರದಾನ ಮಾಡುವರು ಎಂದು ಬೆಂಗಳೂರು ಉತ್ತರ ವಿ.ವಿಯ ಉಪಕುಲಪತಿ ಡಾ.ನಿರಂಜನ ವಾನಳ್ಳಿ ತಿಳಿಸಿದರು.
ವಿವಿಯ ನಾಲ್ಕನೇ ಘಟಿಕೋತ್ಸವದ ಹಿನ್ನೆಲೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಕುಲಾಧಿಪತಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು, ಘಟಿಕೋತ್ಸವ ಭಾಷಣವನ್ನು ಬೆಂಗಳೂರು ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಪಕರಾದ ಡಾ. ಕೆ. ಈರೇಶಿ ಮಾಡಲಿದ್ದಾರೆ ಎಂದು ತಿಳಿಸಿದರು. ಉತ್ತರ ವಿವಿ ೨೦೧೮-೧೯ರಲ್ಲಿ ಆರಂಭವಾದ ನಂತರ ನಡೆಯುತ್ತಿರುವ ನಾಲ್ಕನೇ ಘಟಿಕೋತ್ಸವವಾಗಿದೆ ಎಂದು ತಿಳಿಸಿದರು.
೪೪ ಮಂದಿಗೆ ಚಿನ್ನದ ಪದಕ:
ಬೆಂ.ಉ.ವಿ.ವಿಯಲ್ಲಿ ಒಟ್ಟು ೩೧ ಕೋರ್ಸ್ಗಳಿದ್ದು, ಅದರಲ್ಲಿ ಈ ವರ್ಷ ವಿವಿಧ ಪದವಿಗಳಲ್ಲಿ ೪೪ ಮಂದಿ ಪ್ರಥಮ ರ‍್ಯಾಂಕ್ ಗಳಿಸಿದ ವಿದ್ಯಾರ್ಥಿಗಳಿಗೆ ಚಿನ್ನದ ಪದಕ, ಪದವಿಯನ್ನು ರಾಜ್ಯಪಾಲರು ಪ್ರದಾನ ಮಾಡುವರು ಎಂದು ತಿಳಿಸಿದರು.ಈಗಾಗಲೇ ಮಾತೃಸಂಸ್ಥೆಯಾದ ಬೆಂಗಳೂರು ವಿವಿ ನಡೆಸಿರುವ ಘಟಿಕೋತ್ಸವಗಳ ಮಾದರಿಯನ್ನೇ ಆದರ್ಶವಾಗಿಟ್ಟುಕೊಂಡು ಇಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.
ಈ ಬಾರಿ ನಾಟಕ ಹಾಗೂ ಜಾನಪದ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿರುವ ಕೋಲಾರ ಜಿಲ್ಲೆಯ ಬಿ.ವಿ.ವೆಂಕಟಗಿರಿಯಪ್ಪ, ವಾಸ್ತುಶಿಲ್ಪ ಶಿಕ್ಷಣಕ್ಕೆ ನೀಡಿದ ಕೊಡುಗೆಗಾಗಿ ಪ್ರೊ.ಕೆ. ಎಸ್ ಅನಂತಕೃಷ್ಣ ಹಾಗೂ ವೈದ್ಯಕೀಯ ಮತ್ತು ಸಮಾಜಸೇವೆ ಯನ್ನು ಗುರುತಿಸಿ ವೈದೇಹಿ ವೈದ್ಯಕೀಯ ಸಂಸ್ಥೆಯ ಅಧ್ಯಕ್ಷರು ಡಿ. ಎ. ಕಲ್ಪಜಾ ಅವರುಗಳಿಗೆ ಗೌರವ ಡಾಕ್ಟರೆಟ್ ನೀಡಲಾಗುತ್ತಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ ಸ್ನಾತಕ ವಿಭಾಗದಲ್ಲಿ ೨೦೭೮೪, ಸ್ನಾತಕೋತ್ತರ ವಿಭಾಗದಲ್ಲಿ ೩೦೧೭, ಬಿ ಎಡ್ &ಬಿ ಪಿ ಎಡ್ ವಿಭಾಗದಲ್ಲಿ ೧೮೧೩ ಹಾಗೂ ಸ್ವಾಯತ್ತ ಕಾಲೇಜುಗಳ ೩೫೩೮ ವಿದ್ಯಾರ್ಥಿಗಳು ಸೇರಿದಂತೆ ಒಟ್ಟಾರೆ ೨೯೧೫೨ ವಿದ್ಯಾರ್ಥಿಗಳು ವಿವಿಧ ಪದವಿಗಳನ್ನು ಪಡೆಯಲಿದ್ದಾರೆ ಎಂದು ಅವರು ತಿಳಿಸಿದರು.
ಬಂಗಾರದ ಪದಕ ವಿಜೇತರು :
ಸ್ನಾತಕೋತ್ತರ ವಿಭಾಗ : ಎಂ.ಆರ್. ಮಹಾಲಕ್ಷ್ಮಿ ,ವಿನಯ್ ಕುಮಾರ್ ಟಿ.ಎಸ್., ಎಸ್.ಆರ್. ಹರೀಶ್ ಕುಮಾರ್, ಎ.ರಮ್ಯ, ಜಿ.ದಿವ್ಯ, ಎ.ಜಗದೀಶ್, ಎಂ.ಆರ್.ರಮ್ಯ, ಎನ್.ಶಿವಮ್ಮ, ಎಂ.ಐಶರ್ಯ, ಕೆ.ವಿ. ನವೀನ್ ಕುಮಾರ್, ಡಿ.ಕೆ ವಾಣಿಶ್ರೀ, ಸಿ.ಎನ್. ತನುಶ್ರೀ, ಜವೇರಿಯಾ ಮೊಹಮ್ಮದಿ, ಕುದೈ ಬಿ.ನಾರಾಯಣನ್, ಬಿ.ವಿ. ಶ್ರೀಮತಿ, ನಮಿತಾ, ಎಂ.ಗಾಯತ್ರಿ, ಸ್ವರ್ನಿಮ ಭಂದರಿ, ಸ್ನೇಹ ರೋಜೆಲೆನ ಆಂತೋನಿ, ಜಿ.ಅಭಿವ್ ಹರ್ಷಿತ, ಶ್ರೀವಿದ್ಯ ಶ್ರೀಧರ್ಮಮೂರ್ತಿ, ಅರ್ಪ ತಾಜ್, ಅನಿತ ಎಸ್., ಎನ್. ಆಶಾ, ಕೆ.ಬಿ. ಶ್ರೀ ಪೃಥ್ವಿ, ಡಿ.ಧನಲಕ್ಷ್ಮಿ
ಪ್ರವಾಸೋದ್ಯಮ ಮತ್ತು ಪ್ರಮಾಣ ನಿರ್ವಹಣೆ: ಕಾರ್ತಿಕ್.ಎಸ್., ಶಿಕ್ಷಣ ಸ್ನಾತಕೋತ್ತರ: ಕೆ.ಎಸ್. ನಮಿತ ಹಾಗೂ ದೈಹಿಕ ಶಿಕ್ಷಣ ಸ್ನಾತಕೋತ್ತರ: ಸಂದೀಪ್ ಕುಮಾರ್.
ಪದವಿ ವಿಭಾಗ: ಜಿ.ನಾಗಮಣಿ, ಕಸಿರೆಡ್ಡಿ ನಂದಿನಿ, ಸುರಭಿ ಗುಪ್ತ, ಆರ್.ಸಮ್ರಿನ್ ಪಾತಿಮ, ಶ್ರೀರಾಗ್ ನೈರ್, ಡಿ. ಕಾವ್ಯಶ್ರೀ, ಜಿ.ವರ್ಷ, ಕುಮಾರಿ ರಜ್ನಿ, ಶುವಂಗಿ ಸಹ, ಜೆ.ಎಸ್. ನಾಗವೇಣಿ, ಸಬ ಸಹಿರ್, ಮೋನಿಕ ನಾಗರಕೋಟಿ, ಶಾಶ್ವತ ಲಹಿರಿ, ಕೆಬಿಶ ಛಗುಥಿ, ಎಸ್. ನಿತಿನ್ ಈ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ದಿನದಂದು ಘನತೇವೆತ್ತ ರಾಜ್ಯ ಪಾಲರಿಂದ ಬಂಗಾರದ ಫದಕವನ್ನು ಪ್ರಧಾನ ಮಾಡಲಾಗುವುದು ಎಂದು* ಅವರು ತಿಳಿಸಿದರು.
ReplyForward |