PLACE YOUR AD HERE AT LOWEST PRICE
ಶ್ರಾವಣಮಾಸದ ಕೊನೆಯ ಶನಿವಾರ ಪ್ರಯುಕ್ತ ಗಾಂಧೀನಗರ ಶ್ರೀ ಆಂಜನೇಯಸ್ವಾಮಿ ಟ್ರಸ್ಟ್ ವತಿಯಿಂದ ಉಚಿತ ಸಾಮೂಹಿಕ ವಿವಾಹ ಹಾಗೂ ಅನ್ನ ಸಂತರ್ಪಣೆ
ಕೋಲಾರ : ನಗರದ ಗಾಂಧಿನಗರದಲ್ಲಿರುವ ಶ್ರೀ ಆಂಜನೇಯ ಸ್ವಾಮಿ ಟ್ರಸ್ಟ್ ವತಿಯಿಂದ, ಪ್ರತಿವರ್ಷದಂತೆ ಶ್ರಾವಣಮಾಸದ ಕೊನೆಯ ಶನಿವಾರ ಉಚಿತ ಸಾಮೂಹಿಕ ವಿವಾಹ ಹಾಗೂ ಇಡೀ ದಿನ ಅನ್ನಸಂತರ್ಪಣೆ ನಡೆಯಿತು.
ಕೊನೆಯ ಶ್ರಾವಣ ಶನಿವಾರದ ಉಚಿತ ಸಾಮೂಹಿಕ ವಿವಾಹಕ್ಕೆ ಮೊದಲೇ ದೇವಾಲಯ ಸೂಚನಾ ಫಲಕದಲ್ಲಿ ಆಸಕ್ತ ಕುಟುಂಬಗಳು ಉಚಿತ ಸಾಮೂಹಿಕ ವಿವಾಹಗಳಿಗೆ ನೋಂದಣಿ ಮಾಡಿಸಿಕೊಳ್ಳಲು ಪ್ರಕಟಣೆ ನೀಡಲಾಗಿತ್ತು, ಈ ಹಿನ್ನಲೆಯಲ್ಲಿ ಎರಡು ಜೋಡಿಗಳು ವಿವಾಹ ಮಾಡಿಕೊಳ್ಳುವ ಬಗ್ಗೆ ನೋಂದಣಿ ಮಾಡಿಸಿದ್ದರು. ಅದರಂತೆ ದೇವಾಲಯದ ಅರಳಿಕಟ್ಟೆ ಮೇಲೆ ಶುಭ ಮುಹೂರ್ತ ಹಿಂದೂ ಸಂಪ್ರದಾಯದAತೆ ಎರಡು ನವ ಜೋಡಿಗಳಿಗೆ ಮದುವೆ ನಡೆಯಿತು.
ಇಲ್ಲಿನ ಅರಳಿಕಟ್ಟೆಯ ಮೇಲೆ ಸಾಂಪ್ರದಾಯದ ಪ್ರಕಾರ ಮದುವೆ ಮಾಡಿಕೊಂಡ ನವ ಜೋಡಿಗಳಿಗೆ ದೇವಸ್ಥಾನಕ್ಕೆ ಆಗಮಿಸಿದ ಭಕ್ತಾದಿಗಳು ಹಾಗೂ ಗಾಂಧಿನಗರದ ಜನತೆ ಅಕ್ಷತೆ ಹಾಕುವ ಮೂಲಕ ನವದಂಪತಿಗಳ ಮದುವೆಗೆ ಸಾಕ್ಷಿಯಾದರು, ಇದೇ ಅರಳಿಕಟ್ಟೆಯ ಮೇಲೆ ಸುಮಾರು ದಶಕಗಳಿಂದ ಸಾವಿರಾರು ಜೋಡಿಗಳು ಮದುವೆ ಮಾಡಿಕೊಳ್ಳುವ ಮೂಲಕ ತಮ್ಮ ಜೀವನ ರೂಪಿಸಿಕೊಂಡಿರುವುದು ಈ ಅರಳಿ ಕಟ್ಟೆಗೆ ಇರುವ ಇತಿಹಾಸ.
ಅರಳಿ ಕಟ್ಟೆಯ ಮೇಲೆ ಪ್ರದಕ್ಷಿಣೆ ಹಾಕಿ ಪೂಜೆ ಮಾಡಿದರೆ ಎಲ್ಲರಗೂ ಒಳ್ಳೆಯದಾಗುತ್ತದೆ ಮತ್ತು ಮಕ್ಕಳಿಲ್ಲದವರಿಗೆ ಮಕ್ಕಳ ಭಾಗ್ಯ ಸಿಗುತ್ತದೆ ಎಂಬು ನಂಬಿಕೆ ಇಲ್ಲಿನ ಜನರಲ್ಲಿ ಇದ್ದು, ಇದನ್ನು ಮುಂದಿನ ಪೀಳೆಗೆಗೆ ಉಳಿಸಿ ಬೆಳೆಸುವ ಸಲುವಾಗಿ ಪ್ರತಿವರ್ಷ ಶ್ರಾವಣ ಮಾಸದ ಕೊನೆಯ ಶನಿವಾರದಂದು ಒಂದು ತಿಂಗಳಲ್ಲಿ ಅರಳೆಕಟ್ಟೆಗೆ ಭಕ್ತಾದಿಗಳು ಪೂಜೆ ಮಾಡಿ ತನ್ನ ಹರಿಕೆಯನ್ನು ಭಕ್ತಿಯಿಂದ ಬೇಡಿಕೊಳ್ಳುವರು, , ಹರಕೆ ಈಡೇರಿದ ನಂತರ ಆಂಜನೇಯ ಸ್ವಾಮಿಗೆ ಪೂಜೆ ಪುನಸ್ಕಾರ, ದೇವರ ಉತ್ಸವ, ಅನ್ನಸಂತರ್ಪಣೆ ಮುಂತಾದ ಆಚರಣೆಗಳು ವಾಡಿಕೆಯಾಗಿ ನಡೆಯುತ್ತಿದೆ.
ಇಂದು ಮದುವೆಯಾಗಿ ಹೊಸ ಜೀವನಕ್ಕೆ ಪಾದಾರ್ಪಣೆ ಮಾಡಿದ ನವದಂಪತಿಗಳಾದ ಅಭಿಲಾಶ್ ಮತ್ತೆ ತೇಜಸ್ವಿನಿ ಟಮಕ,
ಗಾಂಧಿನಗರದ ದೇವರಾಜ್ ಮತ್ತು ಅಮೂಲ್ಯ ಸರಳ ಮದುವೆಯಾಗುವ ಮೂಲಕ ಮಾದರಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಆಂಜನೇಯಸ್ವಾಮಿ ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸ್ ಮೂರ್ತಿ, ಕಾರ್ಯದರ್ಶಿ ಹೆಚ್.ಬಿ.ಗೋಪಾಲ್, ಖಜಂಚಿ ರಾಧಾಕೃಷ್ಣ ರಘು, ಕಿಟ್ಟಣ್ಣ, ಆರ್ ಶ್ರೀನಿವಾಸ್ , ರೌತ್ ಶಂಕ್ರಪ್ಪ, ಮುನಿರಾಜ್, ಬಿ ಎಂ ನಾರಾಯಣಸ್ವಾಮಿ, ಕೃಷ್ಣಮೂರ್ತಿ, ರಾಮಚಂದ್ರ, ಗಂಗೂಲಿ ಭಾಗಿಯಾಗಿದ್ದರು,