• Wed. Sep 18th, 2024

ಶಾಸಕ ಕೊತ್ತೂರು ಮಂಜುನಾಥ್ ಸುಪ್ರೀಂ ಕೋರ್ಟ್ನಲ್ಲಿ ದಾಖಲಾಗಿರುವ ಪ್ರಕರಣದ ವಿರುದ್ದ ತಡೆಯಾಜ್ಞೆ ವಾಪಸ್ ಪಡೆದು ತಾಕತ್ತು ಪ್ರದರ್ಶಿಸಲಿ – ನಗರಸಭಾ ಸದಸ್ಯ ಬಿ.ಎಂ.ಮುಬಾರಕ್ ಸವಾಲ್

PLACE YOUR AD HERE AT LOWEST PRICE

ಶಾಸಕ ಕೊತ್ತೂರು ಮಂಜುನಾಥ್ ಸುಪ್ರೀಂ ಕೋರ್ಟ್ನಲ್ಲಿ ದಾಖಲಾಗಿರುವ ಪ್ರಕರಣದ ವಿರುದ್ದ ತಡೆಯಾಜ್ಞೆ ವಾಪಸ್ ಪಡೆದು ತಾಕತ್ತು ಪ್ರದರ್ಶಿಸಲಿ – ನಗರಸಭಾ ಸದಸ್ಯ ಬಿ.ಎಂ.ಮುಬಾರಕ್ ಸವಾಲ್

ಕೋಲಾರ,ಸೆ. ೪: ನನ್ನ ವಿರುದ್ದ ಚೆಕ್ ಬೋನ್ಸ್ ಹಾಗೂ ೪೨೦ ವಂಚನೆ ಪ್ರಕರಣ ದಾಖಲಾಗಿ ೧೩ ತಿಂಗಳಾಗಿದೆ ನಿಜ, ಇದರ ತನಿಖೆ ವಿಚಾರಣೆಗೆ ನಾನೇನು ತಡೆಯಾಜ್ಞೆ ತಂದಿಲ್ಲ, ಅದನ್ನು ಧೆರ್ಯವಾಗಿ ಎದುರಿಸುವಂತ ತಾಕತ್ತು ನನಗೆ ಇದೆ. ಶಾಸಕ ಕೊತ್ತೊರು ಮಂಜುನಾಥ್ ಮೇಲೆಯೂ ಮೊ. ಸಂಖ್ಯೆ ೧೦೫/೨೦೧೮ ಪ್ರಕರಣ ದಾಖಲಾಗಿದೆ. ಇದು ೪೨೦ ಗಿಂತ ಹೆಚ್ಚಿನ ಗಂಭೀರ ಅರೋಪವಾಗಿದೆ. ಶಾಸಕರು ಇದಕ್ಕೆ ತಡೆಯಾಜ್ಞೆ ತಂದಿರುವುದು ಏತಕ್ಕೆ ? . ಈ ಆರೋಪ ಸುಳ್ಳಾಗಿದ್ದರೆ ತಡೆಯಾಜ್ಞೆ ವಾಪಸ್ ಪಡೆದು ತಾಕತ್ತು ಪ್ರದರ್ಶಿಸಲಿ ಎಂದು ನಗರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಬಿ.ಎಂ.ಮುಬಾರಕ್ ಸವಾಲು ಹಾಕಿದ್ದಾರೆ,

ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ನನ್ನದು ಚೆಕ್ ಬೋನ್ಸ್ ಪ್ರಕರಣ ಅದು ವೈಯುಕ್ತಿಕ ಸಮಸ್ಯೆಯಾಗಿದೆ. ಅದರೆ ಶಾಸಕರು ಚುನಾವಣೆಯ ಆಯೋಗಕ್ಕೆ ಮೀಸಲಾತಿಯ ನಕಲಿ ಪ್ರಮಾಣ ಪತ್ರ ಸಲ್ಲಿಸಿರುವುದು ಇಡೀ ಸಮುದಾಯಕ್ಕೆ ಮಾಡಿದ ವಂಚನೆಯಾಗಿದೆ. ಸರ್ಕಾರಕ್ಕೂ ವಂಚನೆಯಾಗಿದೆ ಸಂವಿಧಾನಕ್ಕೆ ದ್ರೋಹ ಬಗೆದು ಕಾನೂನಿಗೆ ಚಳ್ಳೆ ಹಣ್ಣು ತಿನ್ನಿಸಿದ್ದಾರೆ. ಅವರು ೨ ಬಾರಿ ಶಾಸಕರಾಗಿ ಲಕ್ಷಾಂತರ ಜನರಿಗೆ ವಂಚಿಸಿದ್ದಾರೆ. ಶಾಸಕ ಕೊತ್ತೂರು ಮಂಜುನಾಥ್ ಅವರಿಗೆ ತಾಕತ್ತು ಇದ್ದರೆ ಅವರು ತಂದಿರುವAತ ತಡೆಯಾಜ್ಞೆಯನ್ನು ವಾಪಸ್ ಪಡೆದು ಆರೋಪದ ವಿರುದ್ದ ತನಿಖೆ ಎದುರಿಸಲಿ ಎಂದು ಸವಾಲ್ ಹಾಕಿದರು.

ಭಾರತ ದೇಶದ ಸರ್ವೋಚ್ಚ ನ್ಯಾಯಾಲಯವು ಶಾಸಕರ ಬೋಗಸ್ ಪ್ರಮಾಣ ಪತ್ರದ ವಿರುದ್ದ ೪೨೦ ಎಂದು ನಿರ್ಣಯಿಸಿದೆ. ಇವರ ವಿರುದ್ದ ಯಾರೋ ದಾರಿಯಲ್ಲಿ ಹೋಗುವವರು ಅಧಾರ ರಹಿತವಾದ ದೂರು ನೀಡಿಲ್ಲ. ಜವಾಬ್ದಾರಿಯುತ ಸರ್ಕಾರಿ ಅಧಿಕಾರಿಗಳು ದೂರು ನೀಡಿದ್ದಾರೆ. ಅದಾರ ಸಹಿತ ದೂರನ್ನು ನೀಡಿದ್ದಾರೆ ಎಂದು ತಿಳಿಸಿದರು.

ನಗರಸಭೆ ಪದಾಧಿಕಾರಿಗಳ ಚುನಾವಣೆ ನಸೀರ್ ಅಹ್ಮದ್ ಗೆಲುವು :

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ದಿನಾಂಕ ೨೭-೮-೨೦೨೪ ರಂದು ನಗರಸಭೆಯ ಅಧ್ಯಕ್ಷ -ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯು ಪಕ್ಷಾತೀತವಾಗಿ ನಡೆದಿದೆ ಹೊರತಾಗಿ ಯಾವುದೇ ಪಕ್ಷಗಳ ಪರವಾಗಿ ನಡೆದಿಲ್ಲ ಎಂದು ಸ್ವಷ್ಟ ಪಡೆಸಿದರು. ಕೊತ್ತೂರು ಮಂಜುನಾಥ್ ಅವರು ಶಾಸಕರಾಗಿ ಆಯ್ಕೆಯಾದ ವಿಧಾನ ಸಭೆ ಸೇರಿದಂತೆ ಲೋಕಸಭೆ, ಟಿ.ಎ.ಪಿ.ಸಿ.ಎಂ.ಎಸ್ ಹಾಗೂ ಪಿ.ಎಲ್.ಡಿ. ಬ್ಯಾಂಕ್ ಹಾಗೂ ನಗರಸಭೆ ೫ ಚುನಾವಣೆಗಳಲ್ಲಿ ವಿಧಾನ ಸಭೆ ಮತ್ತು ನಗರಸಭೆ ಚುನಾವಣೆಯು ಕಾಂಗ್ರೇಸ್ ಪಾಲಾಗಿದೆ. ಉಳಿದಂತೆ ಎಲ್ಲವೂ ಜೆಡಿಎಸ್ ಬಿಜೆಪಿ ಮೈತ್ರಿಯ ಪಾಲಾಗಿದೆ ಎಂದ ಅವರು ವಿಧಾನಸಭೆ ಚುನಾವಣೆಯಲ್ಲಿ ಅವರು ಕೇವಲ ೮ ದಿನಗಳ ಪ್ರಚಾರದಲ್ಲಿ ಗೆದ್ದಿದ್ದು ಅವರ ತಾಕತ್ತಲ್ಲ. ಅಲ್ಪಸಂಖ್ಯಾತರ ಮತಗಳಿಂದ ಅವರು ಗೆದ್ದಿದ್ದು. ಅವರು ಅಲ್ಪಸಂಖ್ಯಾತರನ್ನು ದೂರ ಇಟ್ಟು ತಾಕತ್ತು ತೋರಿಸಲಿ. ಎಂ.ಎಲ್.ಸಿ ನಸೀರ್ ಅಹಮದ್ ಅವರು ಅವರಿಗೆ ಬೆಂಬಲವಾಗಿರದೇ ಹೋಗಿದ್ದರೆ ಅವರ ತಾಕ್ಕತ್ತು ಏನೂ ಇಲ್ಲ ಅನ್ನೋದು ತಿಳಿದಿರಲಿ. ಇಷ್ಟಕ್ಕೂ ಆಲ್ಪಸಂಖ್ಯಾತರಿಗೆ ನಿಮ್ಮ ಕೊಡುಗೆ ಏನು ? ವಿಧಾನ ಸಭಾ ಕ್ಷೇತ್ರದ ಯಾವ ಹಳ್ಳಿ, ಯಾವ ಬಡಾವಣೆ ಎಲ್ಲಿದೆ ಎಂಬುವುದು ಅರಿಯದ ಅವರು ನಸ್ಸೀರ್ ಆಹಮದ್ ಅನಿಲ್ ಕುಮಾರ್ ಅವರನ್ನು ಮುಂದಿಟ್ಟು ಕೊಂಡು ತಾಕತ್ತು ಮಾತನಾಡುತ್ತಿದ್ದಾರೆ ಅವರನ್ನು ಪಕ್ಕಕ್ಕೆ ಇಟ್ಟು ತಾಕತ್ತು ತೋರಿಸಲಿ ಆಗಾ ಒಪ್ಪಿ ಕೊಳ್ಳುತ್ತೇನೆಂದು ಸವಾಲ್ ಹಾಕಿದ ಅವರು ಇದು ಏನಿದ್ದರೂ ನಸ್ಸೀರ್ ಆಹಮದ್ ಅವರ ತಾಕತ್ತು ಅಗಿದೆ ಎಂದು ಹೇಳಿದರು,

ನನಗೂ ಕಾಂಗೇಸ್ ಪಕ್ಷಕ್ಕೂ ಇರುವ ಸಂಬ0ಧವನ್ನು ಕೆ.ಪಿ.ಸಿ.ಸಿ. ಅವರು ತಿಳಿಸ ಬೇಕೆ ಹೊರತು ಶಾಸಕರು ಹೇಳುವುದಕ್ಕೆ ನೈತಿಕತೆಯಿಲ್ಲ, ನನಗೆ ಸಂಬ0ಧವಿಲ್ಲ ಎಂದವರಿಗೆ ವಿಪ್ ಜಾರಿ ಏಕೆ ಮಾಡಿದರೆಂದು ಉಸ್ತುವಾರಿಗಳನ್ನು ಕೇಳಬೇಕಾಗಿತ್ತು, ಕಾಂಗ್ರೇಸ್ ಪಕ್ಷದ ಅಧಿಕೃತ ಬೆಂಬಲಿತ ೧೨ ಸದಸ್ಯರ ಸಭೆಯನ್ನು ಚುನಾವಣೆಯ ಮುನ್ನ ಕರೆಯಬೇಕಾಗಿತ್ತು. ಅದರೆ ೧ ಗಂಟೆಗೆ ಚುನಾವಣೆ ನಿಗಧಿಯಾಗಿರುವಾಗ ೧೨ ಗಂಟೆಗೆ ವಿಪ್ ಜಾರಿ ಮಾಡಿದರೆ ಹೇಗೆಂದು ಪ್ರಶ್ನಿಸಿದ ಅವರು ಪಕ್ಷದ ಬೆಂಬಲಿತ ನಗರಸಭೆ ಸದಸ್ಯರ ಸಭೆಯನ್ನು ಕಾಂಗ್ರೇಸ್ ಕಚೇರಿಯಲ್ಲಿ ಕರೆಯ ಬೇಕಾಗಿತ್ತು ಹೊರತಾಗಿ ಅವರ ಗೆಸ್ಟ್ ಹೌಸ್‌ನಲ್ಲಿ ಅಲ್ಲ ಎಂದು ಪ್ರಶ್ನೆಯೊಂದಕ್ಕೆ ಖಡಕ್ ಉತ್ತರ ನೀಡಿದರು,

ಶಾಸಕರ ಅವಧಿಯಲ್ಲಿ ಮುಳಬಾಗಿಲಿನಲ್ಲಿ ನಡೆದಿರುವ ಅಸಹಜ ಸಾವುಗಳ ಕುರಿತು ತನಿಖೆ ಮಾಡಲು ಸರ್ಕಾರಕ್ಕೆ ಮನವಿ ಮಾಡುತ್ತೇನೆ :

ನಾನು ೪೦-೫೦ ಕುಟುಂಬಗಳನ್ನು ಹಾಳು ಮಾಡಿದ್ದೇನೆಂದು ಆರೋಪಿಸಿರುವ ಅವರು ಅಧಿಕೃತವಾದ ದಾಖಲೆಗಳಿದ್ದರೆ ಹಾಖರು ಪಡೆಸಲಿ, ಆದರೆ, ಅವರು ಶಾಸಕರಾಗಿದ್ದ ಅವಧಿಯಿಂದ ಈವರೆಗೂ ಮುಳಬಾಗಿಲಿನಲ್ಲಿ ನಡೆದಿರುವ ಅಸಹಜ ಸಾವುಗಳ ಕುರಿತು ತನಿಖೆ ಮಾಡಲು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದರು. ನಾನು ಲೋಕಲ್ ನನ್ನ ಮೇಲೆ ಎರಡು ಪ್ರಕರಣಗಳು ದಾಖಲಾಗಿದೆ ಅದನ್ನು ನಾನೇನು ಬಚ್ಚಿಟ್ಟು ಮಾತನಾಡುವುದಿಲ್ಲ ನನ್ನದು ಏನಿದ್ದರೂ ಪಾರದರ್ಶಕ ನನಗೆ ಯಾವೂದೇ ರೀತಿ ಬಾಡಿ ವಾರೆಂಟ್ ಜಾರಿಯಾಗಿಲ್ಲ. ಆದರೆ ಮುಳಬಾಗಿಲಿನಲ್ಲಿ ಆಗಿರವ ಅಸಹಜವಾದ ಸಾವುಗಳು ಏನಿದೆ ಎಂದು ಮುಳಬಾಗಿಲು ಕ್ಷೇತ್ರದ ಬೀದಿ.ಬೀದಿ, ಗಲ್ಲಿ ಗಲ್ಲಿಗಳಲ್ಲಿ ಜನರೇ ಹೇಳುತ್ತಾರೆ ಎಂದು ಹೇಳಿದರು,

ನನ್ನನ್ನು ಯಾವ ಪ್ರಕರಣದಲ್ಲೂ ಬಚ್ಚಿಟ್ಟು ರಕ್ಷಣೆ ನೀಡಿ ಊಟ ಹಾಕಿದ್ದೇನೆಂದು ಹೇಳಿರುವುದೆಲ್ಲಾ ಸತ್ಯಕ್ಕೆ ದೂರವಾದ ವಿಷಯಗಳು ಎಂದು ಅವರು ನಾನು ಸುಪ್ರೀಂ ಕೋರ್ಟ್ನಲ್ಲಿ ಅಹಜ ಸಾವುಗಳ ಬಗ್ಗೆ ಪರಿಶೀಲನೆ ನಡೆಸಲು ದಾವೆ ಹೂಡುತ್ತೇನೆ ಆಗಾ ಸತ್ಯಂಶಗಳು ಹೊರಗೆ ಬರುತ್ತದೆ ಯಾರು ವಂಚಕರು, ಯಾರು ತಾಲಿಬಾನ್, ಯಾರು ಅನ್ಯಾಯ ಮಾಡಿದ್ದಾರೆ ಎಂಬ ಬಂಡವಾಳ ಬಟಬಯಲಾಗಲಿದೆ ಎಂದು ತಿಳಿಸಿದರು, ತಾಲಿಬಾನ್ ಮತ್ತು ಕಿತ್ತೋದೋನು ಎಂಬ ಪದ ಬಳಿಸಿರುವುದಕ್ಕೆ ಬಹಿರಂಗ ಕ್ಷೆಮೆಯಾಚಿಸ ಬೇಕು, ನಾನು ಶಾಸಕರ ವಿರುದ್ದ ಪ್ರಕರಣ ದಾಖಲು ಮಾಡಿರುವುದು ದುಡ್ಡಿಗಲ್ಲ, ಹಾಗಾಗಿಯೇ ೧ ರೂ ಮಾನ ನಷ್ಟ ಪರಿಹಾರಕ್ಕೆ ಪ್ರಕರಣ ದಾಖಲು ಮಾಡಿದ್ದೇನೆಂದು ಹೇಳಿದರು,

ಗೌರವಾನ್ಸವಿತ ಪ್ರಾಂಶುಪಾಲರನ್ನು ಅಸಭ್ಯ ಪದಗಳಿಂದ ನಿಂದಿಸಿರುವುದು ಶಾಸಕರಿಗೆ ಗೌರವಕ್ಕೆ ತಕ್ಕದ್ದಲ್ಲ :

ಸೋಮವಾರ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಗಂಗಾಧರ್ ಅವರನ್ನು ವಿದ್ಯಾರ್ಥಿಗಳ ಮತ್ತು ಶಿಕ್ಷಣ ಸಚಿವರ ಸಮ್ಮುಖದಲ್ಲಿ ನಡೆದ ಚರ್ಚೆಯೊಂದರಲ್ಲಿ ಕಿತ್ತೋಗುತ್ತೆ ಎಂಬ ಪದ ಬಳಕೆ ಮಾಡಿರುವುದು ಎಷ್ಟು ಮಾತ್ರ ಸರಿ ? ಅವರ ಸ್ಥಾನಮಾನಗಳೇನು ಇವರ ಸ್ಥಾನಮಾನಗಳೇನು. ನಿವೃತ್ತ ಅಂಚಿನಲ್ಲಿರುವ ಪ್ರಾಂಶುಪಾಲರಿಗೆ, ಗುರುವಿನ ಸ್ಥಾನದಲ್ಲಿ ಲಕ್ಷಾಂತರ ಮಕ್ಕಳಿಗೆ ಪಾಠ ಮಾಡಿದವರಿಗೆ ಇವರು ಬಳಿಸಿದ ಪದಕ್ಕೆ ಯಾವ ಶಿಕ್ಷೆ ನೀಡಿದರೂ ಕಡಿಮೆಯೇ. ನಮಗೂ ಸಹ ಕಾಲೇಜಿನಲ್ಲಿ ಗುರುಗಳಾಗಿದ್ದ ಪ್ರಾಂಶುಪಾಲರ ಬಗ್ಗೆ ನಮಗೆಲ್ಲಾ ಅಪರವಾದ ಗೌರವಿದೆ ಎಂದು ನೆನಪಿಸಿದರು.

ನಿಮ್ಮನ್ನು ಆಯ್ಕೆ ಮಾಡಿದಂತ ಮತದಾರ ಪ್ರಭುಗಳಿಗೆ ನೀವು ಕೊಡುವ ಗೌರವ ಇದೇನಾ ಎಂದು ಪ್ರಶ್ನಿಸಿದ ಅವರು ಈ ಹಿಂದೆ ಶಾಸಕರು ಭಾಗವಹಿಸಿದ್ದ ತಂಬಾಕು ನಿಷೇಧ ಕಾರ್ಯಕ್ರಮದಲ್ಲಿ ನಾನು ನೇರವಾಗಿ ಶಾಸಕರಿಗೆ ತಂಬಾಕು ( ಗುಟ್ಕಾ, ಪಾನ್ ಪರಾಗ್ ) ಬಳಿಸದಂತೆ ನೇರವಾಗಿ ನನ್ನ ಭಾಷಣದಲ್ಲಿ ಬುದ್ದಿ ಮಾತು ತಿಳಿಸಿದ್ದೇ ಆ ನಂತರ ಮುಳಬಾಗಿಲು ಶಾಸಕರಾಗಿದ್ದ ನಾಗೇಶ್ ಅವರನ್ನು ಹೈಜಾಕ್ ಮಾಡಿ ಬಿಜೆಪಿಗೆ ಸೇರ್ಪಡೆ ಮಾಡಲು ಇಂಪಿರಿಯಲ್ ಹೋಟೆಲ್ ಇದ್ದಾಗ ಅವರನ್ನು ನಾನು ಬೇಟಿ ಮಾಡಿದ್ದು ಹೊರತಾಗಿ ನಾನು ಅವರು ಭೇಟಿಯಾಗಿಲ್ಲ, ವಿಧಾನ ಸಭೆ ಚುನಾವಣೆಯಲ್ಲಿ ನನ್ನ ಮನೆಗೆ ಬಂದಿದ್ದರು ನಂತರದಲ್ಲಿ ನಗರಸಭೆ ಚುನಾವಣೆಯಲ್ಲಿ ಅಷ್ಟೆ ನೋಡಿದ್ದು ಎಂದು ವಿವರಿಸಿದರು.

ಶಾಸಕರ ಮೇಲಿರುವ ಅರೋಪದ ತೀರ್ಪು ೧೨ ರಂದು ಪ್ರಕಟವಾಗಲಿದೆ. ಆ ನಂತರ ಮತ್ತೋಮ್ಮೆ ಮಾದ್ಯಮದವರ ಮುಂದೆ ಬರಬೇಕಾಗಿದೆ ಆಗಾ ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಸಿಗಲಿದೆ ಎಂದ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಮಾಜಿಕವಾಗಿ ಕಾಳಜಿ ಇದ್ದರೆ ಸುಪ್ರೀಂ ಕೋರ್ಟ್ನಲ್ಲಿರು ಪ್ರಕರಣಕ್ಕೆ ತಡೆಯಾಜ್ಷೆ ವಾಪಸ್ ಪಡೆದು ತನಿಖೆ ಎದುರಿಸಿದರೆ ನಿಮ್ಮ ತಾಕತ್ತು ನಾನು ಒಪ್ಪಿಕೊಳ್ಳುತೇನೆಂದು ಪುನರುಚ್ಚಿಸಿದರು,

 

Leave a Reply

Your email address will not be published. Required fields are marked *

You missed

error: Content is protected !!