PLACE YOUR AD HERE AT LOWEST PRICE
ತಾಲಿಬಾನ್ ಏಜೆಂಟ್ ಎಂದಿದ್ದಕ್ಕೆ, ಶಾಸಕ ಕೊತ್ತೂರು ಮಂಜುನಾಥ್ ಗೆ “ಒಂದು ರೂಪಾಯಿ” ಮಾನನಷ್ಟ ಮೊಕದ್ದಮ್ಮೆ ನೊಟೀಸ್ ಜಾರಿಯಾಗಿದೆ :
ಈ ಹಿಂದಿನ ಚುನಾವಣೆಗಳಲ್ಲಿ ಶಾಸಕ ಕೊತ್ತೂರು ಮಂಜುನಾಥ್ ಬಿಜೆಪಿ ಅಭ್ಯರ್ಥಿಗಳಿಗೆ ಪ್ರಚಾರ ಮಾಡಿದ್ದರು ಅದ್ದರಿಂದ ನಾನು ಅವರನ್ನು ಬಿಜೆಪಿ ಏಜೆಂಟ್ ಎಂದು ದೂರಿದ್ದೇನೆ ಹಾಗೂ ನಾನು ಶಾಸಕರನ್ನು ಆರ್.ಎಸ್.ಎಸ್ ಏಜೆಂಟ್ ಎಂದಿರುವುದು ನಿಜ. ಅದನ್ನು ಅವರು ಮಾದ್ಯಮಗಳ ಮುಂದೆ ಹೇಳಿಕೆ ನೀಡಿ ಒಪ್ಪಿಕೊಂಡಿದ್ದಾರೆ. ಆದರೆ ನನ್ನನ್ನು ತಾಲಿಬಾನ್ ಏಜೆಂಟ್ ಎಂದು ಆರೋಪಿಸಿದ್ದಾರೆ. ಇದರ ವಿರುದ್ದ ನಾನು ನ್ಯಾಯಾಲಯದಲ್ಲಿ ೧ ರೂಗಳ ಮಾನನಷ್ಟ ಮೊಕದ್ದಮ್ಮೆ ದಾಖಲು ಮಾಡಿ ವಕೀಲರಿಂದ ನೋಟಿಸ್ ಜಾರಿ ಮಾಡಿಸಿದ್ದೇನೆ. ಅವರು ಕ್ಷಮೆ ಕೇಳಿ ಒಂದು ರೂಪಾಯಿ ದಂಡ ಕಟ್ಟಿದರೆ ದೂರು ವಾಪಸ್ಸು ಪಡೆಯುವೆ ಇಲ್ಲವಾದರೆ ಅವರು, ಕಾನೂನು ಹೋರಾಟಕ್ಕೆ ಸಿದ್ದರಾಗಲಿ ಎಂದರು.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ನಾನು ವಿದ್ಯಾರ್ಥಿ ದೆಸೆಯಿಂದಲೂ ಸ್ವಾಮಿ ವಿವೇಕನಂದ, ಮದರ್ ತೇರೇಸಾ ಇಂಥಹ ಮಹನೀಯರ ಆದರ್ಶಗಳನ್ನು ಮುಂದಿಟ್ಟು ಸಂಘಟನೆ ಮತ್ತು ಹೋರಾಟ ಮಾಡಿಕೊಂಡು ಬೆಳೆದವನು. ನಾನು ಕನಿಷ್ಟ ನೂರು ಮಂದಿ ಆಲ್ಪಸಂಖ್ಯಾತರೂ ಇಲ್ಲದ ವಾರ್ಡ್ನಿಂದ ನಗರಸಭೆಗೆ ಸ್ವರ್ಧಿಸಿ ಜಾತ್ಯಾತೀತವಾಗಿ ಬಹುಮತಗಳಿಂದ ಆಯ್ಕೆಯಾಗಿದ್ದೇನೆ. ನನ್ನನ್ನು ತಾಲಿಬಾನ್ ಏಜೆಂಟ್ ಎಂದಿರುವುದು ಹಾಸ್ಯಸ್ಪದವಾಗಿದೆ, ರಾಜ್ಯದ ಆಡಳಿತಾರೂಢ ಸರ್ಕಾರದ ಭಾಗವಾಗಿರುವ ಅವರ ಮಾತುಗಳಿಗೆ ಮೌಲ್ಯ ಇರಬೇಕು. ಬಾಲಿಷಾ ಹೇಳಿಕೆಗಳನ್ನು ನೀಡಿ ಅಪಹಾಸ್ಯಕ್ಕೆ ಒಳಗಾಗಬಾರದು ಎಂದು ಕಿವಿಮಾತು ಹೇಳಿದರು,
ಕೋಲಾರ ಕ್ಷೇತ್ರದಲ್ಲಿ ಆಯ್ಕೆಯಾಗಿರುವ ಶಾಸಕರಿಗೆ ನಗರದಲ್ಲಿರುವ ಏರಿಯಾಗಳ ಹೆಸರುಗಳೇ ಗೊತ್ತಿಲ್ಲ, ಯಾವ ಬಡಾವಣೆ ಎಲ್ಲಿದೆ ಎಂಬುದನ್ನೂ ಅವರಿಗೆ ಪಕ್ಕದಲ್ಲಿರುವವರು ತಿಳಿಸಬೇಕು. ಅವರಿಂದ ಕ್ಷೇತ್ರಕ್ಕೆ ಏನೂ ಕೊಡುಗೆ ಇಲ್ಲ, ಅವರು ಮಾಡುವ ಕೆಲಸಗಳು ತುಂಬಾ ಇದ್ದಾವೆ, ನಗರದಲ್ಲಿ ಅಭಿವೃದ್ದಿ ಕೆಲಸಗಳು ತುಂಬಾ ಆಗಬೇಕಿದೆ. ಅವರು ಅವುಗಳ ಕಡೆ ಗಮನ ಕೊಡುವುದನ್ನು ಬಿಟ್ಟು ನನ್ನಂತಹ ಸಣ್ಣ ಲೋಕಲ್ ಬಗ್ಗೆ ಮಾತನಾಡುತ್ತಿದ್ದಾರೆ. ನಾನು ಬಡ ಕುಟುಂಬದಿ0ದ ಬಂದಿರುವ ಒಬ್ಬ ಮದ್ಯಮ ವರ್ಗದವನು ಮಾನ್ಯ ಶಾಸಕರು ದೊಡ್ಡ ವ್ಯಕ್ತಿಗಳು ಅವರು ಘನತಗೆ ತಕ್ಕಂತೆ ನಡೆದುಕೊಳ್ಳಲಿ ಎಂದು ಕಿವಿ ಮಾತಾಡಿದರು.
ಮುಂದಿನ ಎಪಿಸೋಡ್ ಎಂ.ಎಲ್.ಸಿ. ಅನಿಲ್ ಕುಮಾರ್ ದು:
ಎಂ.ಎಲ್.ಸಿ. ಅನಿಲ್ ಕುಮಾರ್ ನನ್ನ ಬಗ್ಗೆ ಬಾಯಿಗೆ ಬಂದ0ತೆ ಮಾತನಾಡಿದ್ದಾರೆ, ಅವರ ಅಕ್ರಮಗಳ ದಾಖಲೆಗಳು ಲೋಡ್ ಗಟ್ಟಲೆ ಇದೆ. ಮುಂದಿನ ಎಪಿಸೋಡ್‌ನಲ್ಲಿ ಅನಿಲ್ ಕುಮಾರ್ ಅವ್ಯವಹಾರಗಳ ಕುರಿತು ಡಾಕ್ಯುಮೆಂಟ್ ಇಟ್ಟುಕೊಂಡು ಪ್ರತ್ಯೇಕವಾಗಿ ಮಾತನಾಡುತ್ತೇನೆ. ದಾಖಲೆಗಳಿಲ್ಲದೆ ನಾನು ಏನೂ ಮಾತನಾಡುವುದಿಲ್ಲ.
– ಬಿ.ಎಂ.ಮುಬಾರಕ್, ನಗರಸಭಾ ಮಾಜಿ ಆಧ್ಯಕ್ಷರು ಹಾಗೂ ಹಾಲಿ ಸದಸ್ಯರು.