PLACE YOUR AD HERE AT LOWEST PRICE
ಅಲ್ ಅಹ್ಮದೀಯಾ ಎ.1. ಹ್ಯೂಮನ್ ರೈಟ್ಸ್ ವೆಲ್ಫೇರ್ ಟ್ರಸ್ಟ್ ವತಿಯಿಂದ ಉಚಿತ ಸಾಮೂಹಿಕ ವಿವಾಹಗಳು
ಕೋಲಾರ.ಸೆ.22 : ನಗರ ಹೊರವಲಯದ ತೇರಹಳ್ಳಿ ರಸ್ತೆಯ ಸುಲ್ತಾನ್ ತಿಪ್ಪಸಂದ್ರದ ಉದ್ಮಾನ್ ನಗರದಲ್ಲಿರುವ ಅಲ್ ಅಹ್ಮದೀಯಾ ಎ.1.ಹ್ಯೂಮನ್ ರೈಟ್ಸ್ ವೆಲ್ಫೇರ್ ಟ್ರಸ್ಟ್ ನ ಅಧ್ಯಕ್ಷ ಸಯ್ಯದ್ ರಿಜ್ವಾನ್ ನೇತೃತ್ವದಲ್ಲಿ ಉಚಿತ ಸಾಮೂಹಿಕ ವಿವಾಹಗಳನ್ನು ನಡೆಸಲಾಯಿತು.
11 ಜನ ನವ ವಿವಾಹಿತರು ಈ ಸಂಧರ್ಭದಲ್ಲಿ ತಮ್ಮ ನೂತನ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ಎಲ್ಲಾ ಜೋಡಿಗಳಿಗೆ ಟ್ರಸ್ಟ್ ವತಿಯಿಂದ ವರ ಮತ್ತು ವಧುರವರುಗಳಿಗೆ ಹೊಸ ಬಟ್ಟೆಯೊಂದಿಗೆ ಸಂಸಾರ ನಡೆಸಲು ಅಗತ್ಯವಾದ ಗ್ಯಾಸ್ ಸ್ಟವೌ,ವಾಶಿಂಗ್ ಮಿಷಿನ್,ಮಿಕ್ಸೀ,ಕುಕ್ಕರ್,ಮಂಚ,ಬೀರು,ಹಾಸಿಗೆ ,ತಲೆ ದಿಂಬು,ರಗ್ಗು,ಪಾತ್ರೆಗಳು ಸೇರಿಂದಂತೆ ಅಗತ್ಯ ವಸ್ತುಗಳನ್ನು ನೀಡಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಕಮಿಟಿಯ ಅಧ್ಯಕ್ಷ ಸಯ್ಯದ್ ರಿಜ್ವಾನ್ ಕಳೆದ ಹತ್ತು ವರ್ಷಗಳಿಂದ ಕಮಿಟಿ ಸಾಮಾಜಿಕ ಕೆಲಸಗಳನ್ನು ಮಾಡುತ್ತಾ ಬರುತ್ತಿದ್ದು,ಕಳೆದ ಐದು ವರ್ಷಗಳಿಂದ ಸತತವಾಗಿ ಉಚಿತ ಸಾಮೂಹಿಕ ವಿವಾಹಗಳನ್ನು ನಡೆಸುತ್ತಾ ಬರುತ್ತಿದ್ದು,ಈ ಬಾರಿ ಹನ್ನೊಂದು ಮದುವೆಗಳನ್ನು ಮಾಡಲಾಗಿದೆ.ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಉಚಿತ ಸಾಮೂಹಿಕ ವಿವಾಹಗಳನ್ನು ನಡೆಸುವುದರೊಂದಿಗೆ ಸಮಾಜ ಸೇವೆ ಮಾಡಲಾಗುವುದೆಂದು ತಿಳಿಸಿದರು.
ಉಚಿತ ಸಾಮೂಹಿಕ ಮದುವೆಗಳ ಎಲ್ಲಾ ಕಾರ್ಯ ಕಲಾಪಗಳನ್ನು ಮೌಲಿಗಳಾದ ಅಲಿ ಹುಸೇನ್ ಸಾಹೇಬ್,ಮಹಮ್ಮದ್ ಸೈಯದ್ ಉರ್ ರಹಮಾನ್ ಸಾಹೇಬ್,ಸದ್ದಾಂ ಹುಸೇನ್ ಸಾಹೇಬ್,ಸಿರಾಜ್ ಸಾಹೇಬ್ ರವರುಗಳು ನಡೆಸಿಕೊಟ್ಟರು.
ವಕೀಲ ದಿವಾಕರ್ ಹಾಗೂ ಎಂ.ಇಮ್ರಾನ್ ರವರುಗಳು ಮಾತನಾಡಿ ಸಯ್ಯದ್ ರಿಜ್ವಾನ್ ಹಾಗೂ ಅವರ ತಂಡ ಉತ್ತಮ ಸಮಾಜ ಸೇವಾ ಕಾರ್ಯಗಳನ್ನು ಹಲವು ವರ್ಷಗಳಿಂದ ನಡೆಸುತ್ತಾ ಬರುತ್ತಿದ್ದು,ಬಡವರಿಗೆ ಅನುಕೂಲ ಆಗಲೆಂದು ಸಾಮೂಹಿಕ ವಿವಾಹಗಳನ್ನು ಮಾಡುತ್ತಿರುವು ಶ್ಲಾಘನೀಯ,ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸೇವೆ ಹಾಗೂ ಮದುವೆಗಳನ್ನು ಮಾಡುವ ಶಕ್ತಿಯನ್ನು ದೇವರು ನೀಡಲಿ ಎಂದು ಶುಭ ಕೋರಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅಂಜುಮಾನ್ ಇಸ್ಲಾಮಿಯಾ ಉಪಾಧ್ಯಕ್ಷ, ಟ್ರಾಕ್ಟರ್ ಮುಸ್ತಫಾ, ನಗರ ಸಭೆ ಮಾಜಿ ಸದಸ್ಯ ಸಲ್ಲಾವುದ್ದೀನ್ ಬಾಬು,ಮಸ್ತಾನ್,ಅಕ್ರಂ,ತನ್ನು,ಅಪ್ರೂಷಪಾಷ, ಏಜಾಜ್ ಪಾಷ , ಮಹಮ್ಮದ್ ರಫೀ,ಪರಮೇಶ್,ಶಂಕರ, ಸಾಧೀಕ್,ಅನ್ನು,ಅಲೀಂ,ಮನ್ಸೂರ್ ಮುಂತಾದವರು ಭಾಗವಹಿಸಿದ್ದರು.
ಈ ಸಂಧರ್ಭದಲ್ಲಿ ಟ್ರಸ್ಟ್ ನಕಾರ್ಯದರ್ಶಿ ನಯಾಜ್ ಪಾಷ,ನವಾಜ್, ಶಬೀರ್, ಮೌಲ, ಜಿಯಾವುಲ್ಲಾ, ಸಮೀರ್ , ಶಭೀರ್, ಟ್ರಸ್ಟ್ ನ ಸದಸ್ಯರು ಹಾಗೂ ವಧುಗಳ ಮತ್ತು ವರರ ಕುಟುಂಬಸ್ಥರು ಹಾಗೂ ಅಪಾರ ಸಂಖ್ಯೆಯ ಮಹಿಳೆಯರು ಉಪಸ್ಥಿತರಿದ್ದರು