ಕೆಜಿಎಫ್
ಕೋಲಾರ
ತಾಲ್ಲೂಕು ಸುದ್ದಿ
ದೇಶ
ನಮ್ಮ ಕೋಲಾರ
ಪ್ರಪಂಚ
ಬಂಗಾರಪೇಟೆ
ಮಾಲೂರು
ಮುಳಬಾಗಿಲು
ರಾಜ್ಯ ಸುದ್ದಿ
ಶ್ರೀನಿವಾಸಪುರ
PLACE YOUR AD HERE AT LOWEST PRICE
ಕೋಲಾರ,ಸೆ.30 : ಜಾಗತಿಕ ತಾಪಮಾನದ ಹಿನ್ನೆಲೆಯಲ್ಲಿ ಒಳ್ಳೆಯ ವಾತಾವರಣ ಸೃಷ್ಟಿಸಬೇಕೆಂದರೆ ನಾವು ಜಾಗೃತರಾಗಿ ಸಮಾಜವನ್ನೂ ಜಾಗೃತಗೊಳಿಸಬೇಕು ಪ್ಲಾಸ್ಟಿಕ್ ಮುಕ್ತ ಜಿಲ್ಲೆಗಾಗಿ ವಿದ್ಯಾರ್ಥಿಗಳು ರಾಯಭಾರಿಗಳಾಗಬೇಕು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಕರೆ ನೀಡಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ರೆಸ್ಟ್ಲೆಸ್ ಡೆವಲಪ್ಮೆಂಟ್ ಮತ್ತು ಗ್ರಾಮ ವಿಕಾಸ ಹೊನ್ನಶೆಟ್ಟಿಹಳ್ಳಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಯಂಗ್ ಇಂಡಿಯಾ ಡೆವಲಪ್ಮೆಂಟ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಪ್ಲಾಸ್ಟಿಕ್ ಮುಕ್ತ ಕೋಲಾರ ಜಿಲ್ಲೆಗಾಗಿ ಯುವ ಸಂಸತ್ತು -2024 ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರೀನ್ ವಾರಿಯರ್ಸ್ ಕೋಲಾರ ಪ್ಲಾಸ್ಟಿಕ್ ಮುಕ್ತ ಕೋಲಾರ ಜಿಲ್ಲೆಗಾಗಿ ಯೂತ್ ಪಾರ್ಲಿಮೆಂಟ್ -2024 ಕಾರ್ಯಕ್ರಮ ಈಗಿನ ಪರಿಸ್ಥಿತಿಗೆ ಅವಶ್ಯವಿದೆ
ನಾವು ನೋಡಿರುವಹಾಗೆ ಪ್ಲಾಸ್ಟಿಕ್ ಮುಕ್ತ ಜಿಲ್ಲೆಗಾಗಿ ಸಾಕಷ್ಟು ಕಾರ್ಯಕ್ರಮಗಳಾಗಿತ್ತಿದೆ, ವಿದ್ಯಾರ್ಥಿಗಳು ಈ ಕಾರ್ಯಕ್ಕೆ ರಾಯಭಾರಿಗಳಾಗಬೇಕು. ಯುವ ಸಮುದಾಯ ಮೊಬೈಲ್ ಹೆಚ್ಚಾಗಿ ಬಳಸುವುದರಿಂದ ಪ್ಲಾಸ್ಟಿಕ್ ಮುಕ್ತ ಹಾಗೂ ಪರಿಸರದ ಬಗ್ಗೆ ರೀಲ್ಸ್ ಮಾಡಿ , ಪ್ಲಾಸ್ಟಿಕ್ ಮುಕ್ತ ಜಿಲ್ಲೆ ಮಾಡಲು ಹೊಸ ಕ್ರಾಂತಿಯನ್ನು ನೀವು ಸೃಷ್ಟಿಸಬಹುದೆಂದರು.
ನಾವು ಎಚ್ಚೆತ್ತುಕೊಳ್ಳದೇ ಹೋದರೆ ಮುಂದೆಯಾಗೋ ಅನಾಹುತಗಳಿಗೆ ನಾವೇ ನೇರ ಹೊಣೆಯಾಗುತ್ತೇವೆ ಮುಂದಿನಪೀಳಿಗೆಗೆ ಒಳ್ಳೆಯ ವಾತಾವರಣ ಸೃಷ್ಟಿಸಬೇಕೆಂದರೆ ನಾವು ಜಾಗೃತರಾಗಿ ಸಮಾಜವನ್ನೂ ಜಾಗೃತಗೊಳಿಸಬೇಕು ಎಂದು ಹೇಳಿದರು. ನಗರೀಕರಣ ನಾಗರಿಕತೆ ಹೆಸರಿನಲ್ಲಿ ಪರಿಸರದ ಮೇಲೆ ದೌರ್ಜನ್ಯ ಎಸಗುತ್ತಿದ್ದೇವೆ ಇದು ನಿಲ್ಲಬೇಕು ನಾವು ಎಚ್ಚೆತ್ತುಕೊಂಡಾಗ ಮಾತ್ರ ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿಸಬಹುದೆಂದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಸತ್ರ ನ್ಯಾಯಾಧೀಶ ಸುನೀಲ್ ಹೊಸಮನಿರವರು ಮಾತನಾಡಿ, ಪ್ಲಾಸ್ಟಿಕ್ ನಮ್ಮ ಸಮಾಜವನ್ನು ರೋಗಗ್ರಸ್ತ ಮಾಡಿದೆ. ಇದು ನಿಲ್ಲಬೇಕೆಂದರೆ ಸಂಪೂರ್ಣವಾಗಿ ಪ್ಲಾಸ್ಟಿಕ್ ನಿಷೇಧವಾಗಬೇಕು. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಜಾಗೃತಿಮೂಡಿಸಬೇಕು.
ಮೊದಲು ಈ ಕೆಲಸ ಮನೆಯಿಂದಲೇ ಆಗಬೇಕು ಅಂಗಡಿಗೆ ಹೊದಾಗ ವಸ್ತುಗಳನ್ನು ಕೊಳ್ಳಲು ಮತ್ತು ಸಮಾರಂಭಗಳಲ್ಲಿ ದಿನನಿತ್ಯದ ಕೆಲಸಗಳಿಗೆ ಪ್ಲಾಸ್ಟಿಕ್ ಬಳಸುವುದನ್ನು ನಿಲ್ಲಿಸಬೇಕು. ಮನೆಗಳಲ್ಲಿ ಒಲೆ ಉರಿಸೋವಾಗ ನಿಮ್ಮ ತಂದೆ ತಾಯಂದಿರರಿಗೆ ಜಾಗೃತಿ ಮೂಡಿಸಬೇಕು. ಕಾರಣ, ಒಲೆಯ ಉರಿಸುವಾಗ ಪ್ಲಾಸ್ಟಿಕ್ ಬಳಿಸಿ ಒಲೆ ಉರಿಸುತ್ತಾರೆ ಅವರಿಗೆ ಅರಿವಿಲ್ಲದೆಯೇ ಕ್ಯಾನ್ಸರ್ಗೆ ತುತ್ತಾಗುತ್ತಾರೆ ಈ ತರಹದ ಉದಾಹರಣೆಗಳು ಸಾಕಷ್ಟಿದೆ ಎಂದು ತಿಳಿಸಿದರು.
ಮೊದಲು ಗಿಡ ನೆಡುವ ಕೆಲಸವಾಗಬೇಕು. ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಬೇಕು. ಯುವಕರು ತಂಬಾಕು ವ್ಯಸನಿಗಳಾಗಬೇಡಿ ,ಮದ್ಯಪಾನಿಗಳಾಗಬೇಡಿ ಜಾಗೃತರಾಗಿ ನಮ್ಮ ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ ಮತ್ತು ವ್ಯಸನ ಮುಕ್ತ ಜಿಲ್ಲೆಯನ್ನಾಗಿಸೋಣ ಎಂದು ಕರೆ ನೀಡಿದರು.
ಗ್ರಾಮ ವಿಕಾಸ ಸಂಸ್ಥೆ ಮುಖಂಡರಾದ ಎಂ.ವಿ.ಎನ್ ರಾವ್ ಮಾತನಾಡಿ, ಮುಂದಿನ ದಿನಗಳಲ್ಲಿ ಯುವ ಪೀಳಿಗೆ ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಹವಾಮಾನ ಬದಲಾವಣೆಯಿಂದ ಹವಾಮಾನ ಕ್ರಿಯೆಯತ್ತ ತೊಡಗಿಸಿ ಕೊಳ್ಳಬೇಕೆಂದರು.
ಜಾಗತಿಕ ತಾಪಮಾನದ ಕುರಿತು ಬಹಳ ಗಂಭೀರವಾಗಿ ಪರಿಗಣಿಸಿದೆ, ಏಕೆಂದರೆ ಇತ್ತೀಚೆಗೆ ಅಂತರ್ಜಾಲದಲ್ಲಿ ಈ ಬಗ್ಗೆ ಮಾಹಿತಿ ಸಂಗ್ರಹಿಸುವ ಸಂದರ್ಭದಲ್ಲಿ ಮುಂದಿನ 100 ವರ್ಷಗಳ ನಂತರ ಭಾರತದ ಕರಾವಳಿ ಪ್ರದೇಶಗಳೆಲ್ಲಾ ಸುಮಾರು 6 ಮೀಟರ್ ನಷ್ಟು ನೀರಿನಿಂದ ಮುಳುಗಡೆಯಾಗಿ ಇಡೀ ಭಾರತದ ಭೂಪಟ ಈಗಿನ ಆಕಾರ ಕಳೆದುಕೊಂಡು ಕ್ಯಾರೆಟ್ ರೂಪದ ಭೂಪಟವಾಗಿರುವ ಬಗ್ಗೆ ಹವಾಮಾನ ತಜ್ಞರು ವಿಶ್ಲೇಷಿಸಿದ್ದಾರೆ.
ನಮ್ಮ ಮುಂದಿನ ಪೀಳಿಗೆ ಕನಸುಗಳನ್ನು ನೆನಸು ಮಾಡಿಕೊಳ್ಳಲು ಪ್ರಪಂಚವನ್ನು ಉಳಿಸಿಕೊಳ್ಳಲು ಯುವ ಜನತೆಯನ್ನು ಚಿಂತನೆಗೆ ಹಚ್ಚುವ ಕೆಲಸವಾಗಬೇಕು, ಜಾಗತಿಕ ತಾಪಮಾನದ ಕುರಿತು ಹವಾಮಾನ ಕ್ರಿಯೆಯತ್ತ ಸಾಗಲು ಒಂದನೇ ತರಗತಿಯಿಂದಲೇ ಚರ್ಚೆ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ, ಈ ನಿಟ್ಟಿನಲ್ಲಿ ಯುವಶಕ್ತಿಯನ್ನು ಸಜ್ಜುಗೊಳಿಸಲು ಪ್ರತಿ ಆರು ತಿಂಗಳಿಗೊಮ್ಮೆ ಯುವ ಸಂಸತ್ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಅಸ್ಪೃಶ್ಯ ನಿರ್ಮೂಲನ ಸಮಿತಿಯ ಅರಿವು ಶಿವಪ್ಪ ಮಾತನಾಡಿ, ಪ್ಲಾಸ್ಟಿಕ್ ಬಹಳ ದೊಡ್ಡ ಸಮಸ್ಯೆಯಾಗಿದೆ ಪರಿಹಾರದ ಬಗ್ಗೆ ಸವಾಲುಗಳಿದೆ ಇದು ಕೇವಲ ಜಿಲ್ಲೆಯ ಸಮಸ್ಯೆಯಲ್ಲ ವಿಶ್ವವ್ಯಾಪಿ ಹರಡಿರುವ ಸಮಸ್ಯೆ ಈ ನಿಟ್ಟಿನಲ್ಲಿ ಗ್ರೀನ್ವ್ಯಾಲಿ ತಂಡಗಳನ್ನು ರಚಿಸಲಾಗಿದ್ದು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಕಾರ್ಯಗಳಲ್ಲಿ ಕೈಜೋಡಿಸಬೇಕೆಂದರು ಕೇವಲ ನಮ್ಮಜಿಲ್ಲೆಯಲ್ಲೇ ಪ್ರತಿದಿನ ಇಪ್ಪತ್ತು ಲಕ್ಷಕ್ಕೂ ಅಧಿಕ ಪ್ಲಾಸ್ಟಿಕ್ ಬ್ಯಾಗ್ಗಳು ಮನೆ ಸೇರುತ್ತದೆ .
ಕೋಲಾರ ಕ್ಯಾನ್ಸರ್ ಪೀಡಿತ ಜಿಲ್ಲೆಯಾಗಿದೆ ಪ್ಲಾಸ್ಟಿಕ್ ಒಂದಲ್ಲ ಒಂದು ರೀತಿಯಲ್ಲಿ ನಮ್ಮದೇಹವನ್ನು ಸೇರುತ್ತಿದೆ ತಪ್ಪು ಕಲ್ಪನೆಗಳು ವ್ಯಾಪಕವಾಗಿ ನಮ್ಮಲ್ಲಿರುವುದರಿಂದ ಸಮಸ್ಯೆಯಾಗಿದೆ .ಮದುವೆ ಹೋಟೆಲ್ ಸಭೆ-ಸಮಾರಂಭಗಳು ನಡೆಯುವ ವೇಳೆ ಪ್ಲಾಸ್ಟಿಕ್ ನಿಷೇಧವಾದರೆ ಸ್ವಲ್ಪಮಟ್ಟಿಗೆ ಆರೋಗ್ಯದ ಜಾಗೃತಿ ಮೂಡಿಸಬಹುದೆಂದರು
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ, ಡಾಕ್ಟರ್ ಪ್ರಸನ್ನಕುಮಾರಿ, ಜಿಲ್ಲಾ ಮಾಲಿನ್ಯ ನಿಯಂತ್ರಣಾಧಿಕಾರಿ ಡಾಕ್ಟರ್ ಕೆ. ರಾಜು, ಉಪನ್ಯಾಸಕಿ, ಡಾಕ್ಟರ್ ಚೈತ್ರಾ ಮಾತನಾಡಿದರು.
ಈ ಸಂದರ್ಭದಲ್ಲಿ ಯಂಗ್ ಇಂಡಿಯಾ ಫೌಂಡೇಶನ್ ಮುಖ್ಯಸ್ಥ ಹೂವಳ್ಳಿ ನಾಗರಾಜ್, ಉಪನ್ಯಾಸಕ ಕೆ ಸುದೀಪ್, ಕೆ ಶೈಲೇಶ್, ಅಶ್ವಿನಿ ಬಿ , ಅಭಿಲಾಷ್ ಕೃಷ್ಣ, ಶ್ಯಾಮಲಾ ಅದಿತಿ,ಶ ಯುವಶಕ್ತಿ ತೇಜು, ನಂದಿತಾ, ಅನುಷಾ ಮತ್ತು ಕೋಲಾರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಇದ್ದರು.