ಕೆಜಿಎಫ್
ಕೋಲಾರ
ತಾಲ್ಲೂಕು ಸುದ್ದಿ
ದೇಶ
ನಮ್ಮ ಕೋಲಾರ
ಪ್ರಪಂಚ
ಬಂಗಾರಪೇಟೆ
ಮಾಲೂರು
ಮುಳಬಾಗಿಲು
ರಾಜಕೀಯ
ರಾಜ್ಯ ಸುದ್ದಿ
ಶ್ರೀನಿವಾಸಪುರ
PLACE YOUR AD HERE AT LOWEST PRICE
ಗಾಂಧೀವನದಲ್ಲೇ ಕನ್ನಡ ರಾಜ್ಯೋತ್ಸವ ಅದ್ದೂರಿ ಆಚರಣೆಗೆ ಕನ್ನಡ ಪರ ಸಂಘನೆಗಳ ಒಕ್ಕೂರಲಿನ ತೀರ್ಮಾನ
ಕೋಲಾರ,ಅ.೦೯: ಸುಮಾರು ೫೧ ವರ್ಷಗಳಿಂದ ನಾಡಹಬ್ಬ ಕನ್ನಡ ರಾಜ್ಯೋತ್ಸವ ಆಚರಿಸಿಕೊಂಡು ಬರುತ್ತಿರುವ ಶ್ರೀ ಭುವನೇಶ್ವರಿ ಕನ್ನಡ ಸಂಘ ಜಿಲ್ಲಾ ಕೇಂದ್ರದಲ್ಲಿ ದಸರಾ ಹಬ್ಬದಂತೆ ಆಚರಿಸಿಕೊಂಡು ಬರುತ್ತಿದ್ದು, ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವವನ್ನು ಗಾಂಧಿವನದಲ್ಲೇ ಜಿಲ್ಲಾಡಳಿತ ಹಾಗೂ ಸಮಸ್ತ ಕನ್ನಡಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು, ಜನಪರ ಸಂಘಟನೆಗಳು ಸೇರಿದಂತೆ ಎಲ್ಲಾ ಸಮುದಾಯ ಯುವಕ ಸಂಘಟನೆಗಳ ಸಹಕಾರದಲ್ಲಿ ಅದ್ದೂರಿಯಾಗಿ ಆಚರಿಸಲು ಒಕ್ಕೊರಲಿನ ತೀರ್ಮಾನದಿಂದ ನಿರ್ಣಯ ತೆಗೆದುಕೊಳ್ಳಲಾಯಿತು.
ನಗರದ ಪತ್ರಕರ್ತರ ಭವನದಲ್ಲಿ ಬುಧವಾರ ಶ್ರೀ ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ಕೆ.ಆರ್.ತ್ಯಾಗರಾಜ ರವರ ಅಧ್ಯಕ್ಷತೆಯಲ್ಲಿ ಕನ್ನಡ ರಾಜ್ಯೋತ್ಸವ-೨೦೨೪ರ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಕನ್ನಡ ಪರ ಸಂಘಟನೆಗಳ ಮನವಿಯನ್ನು ಮುಂದಿನ ವಾರ ನಡೆಯುವ ಜಿಲ್ಲಾಡಳಿತ ನಡೆಸುವ ಸಭೆಯಲ್ಲಿ ಮಂಡಿಸಲು ಹಾಗೂ ಒಂದು ವೇಳೆ ನಮ್ಮ ಮನವಿಯನ್ನು ಜಿಲ್ಲಾಧಿಕಾರಿಗಳು ತಿರಸ್ಕರಿಸಿದರೆ ಆ ಸಭೆಯನ್ನು ಬಹಿಷ್ಕಾರ ಮಾಡಲು ಸಭೆಯಲ್ಲಿ ಸರ್ವಾನುಮತದ ತೀರ್ಮಾನ ಕೈಗೊಂಡಿತು.
ಜಿಲ್ಲಾ ಕೇಂದ್ರದಲ್ಲಿ ನಡೆಯುವ ರಾಜ್ಯೋತ್ಸವಕ್ಕೆ ಹಿಂದಿನ ಗತವೈಭವವನ್ನು ಮರಳಿ ಎಲ್ಲಾ ಕನ್ನಡ ಪರ ಸಂಘಟನೆಗಳು ಒಟ್ಟಾಗಿ ಒಂದೇ ವೇದಿಕೆಯಲ್ಲಿ ರಾಜ್ಯೋತ್ಸವ ಆಚರಣೆ ಮಾಡುವುದು, ಸರ್ಕಾರದ ಪ್ರತಿ ಹಳ್ಳಿ, ನಗರಸಭೆ ವ್ಯಾಪ್ತಿಯ ಎಲ್ಲಾ ವಾರ್ಡ್ಗಳು ಹಾಗೂ ಎಲ್ಲಾ ಗ್ರಾಮ ಪಂಚಾಯತಿಗಳಿoದ ಮತ್ತು ಜಿಲ್ಲಾ ಮಟ್ಟದ ಇಲಾಖೆಗಳಿಂದ ಒಂದೊoದು ಸ್ತಬ್ಧ ಚಿತ್ರ,ಪಲ್ಲಕ್ಕಿಗಳನ್ನು ತರುವಂತೆ ಮನವಿ ಮಾಡಲು ಸಭೆ ಅಂಗೀಕರಿಸಿತು.
ಕೇವಲ ಒಂದು ದಿನದ ಕನ್ನಡ ರಾಜ್ಯೋತ್ಸವ ಆಚರಣೆಗೆ ಕನ್ನಡ ಪರ ಸಂಘಟನೆಗಳು ಸೀಮಿತವಾಗದೆ ಪ್ರತಿ ತಿಂಗಳು ಒಂದು ಕನ್ನಡ ಕಾರ್ಯಕ್ರಮ ನಡೆಸಲು ಸಭೆಯಲ್ಲಿ ಸಲಹೆ ನೀಡಿದರು.ಇದೇ ಸಂದರ್ಭದಲ್ಲಿ ಶ್ರೀ ಭುವನೇಶ್ವರಿ ಕನ್ನಡ ಸಂಘದ ಕಳೆದ ಸಾಲಿನ ಜಮಾ ಖರ್ಚಿನ ಮಂಡನೆ ಮಾಡಲಾಯಿತು.
ಸಭೆಯಲ್ಲಿ ಶ್ರೀ ಭುವನೇಶ್ವರಿ ಕನ್ನಡ ಸಂಘದ ಗೌರವ ಅಧ್ಯಕ್ಷ ಅ.ಕೃ.ಸೋಮಶೇಖರ್, ಅಂಚೆ ಅಶ್ವತ್, ಶಿ.ನಾ.ಪ್ರಕಾಶ್(ಮಾಮಿ), ಕೋ.ನಾ.ಪ್ರಭಾಕರ್, ನಾ.ಮಂಜುನಾಥ್, ಸುಲೇಮಾನ್ ಖಾನ್, ನಗರ ಸಭೆ ಸದಸ್ಯ ಮುರಳಿಗೌಡ, ನಗರಸಭೆ ಮಾಜಿ ಸದಸ್ಯರುಗಳಾದ ಅಪ್ರೋಜ್ ಪಾಷ, ಮೋಹನ್ ಪ್ರಸಾದ್, ಕರ್ನಾಟಕ ಸಿಂಹಸೇನೆ ರಾಜ್ಯಾಧ್ಯಕ್ಷ ಜಯದೇವ ಪ್ರಸನ್ನ, ರವೀಂದ್ರನಾಥ್, ಕರವೇ ಜಿಲ್ಲಾಧ್ಯಕ್ಷ ಚೆಂಬೆ ರಾಜೇಶ್, ಚನ್ನವೀರಯ್ಯ, ಕರವೇ.ಕ.ಸಾ. ಜಿಲ್ಲಾಧ್ಯಕ್ಷ ಶೇಷಾದ್ರಿ, ಶಾಂತಿ ಸೌಹಾರ್ದ ಸಮಿತಿ ಕಾರ್ಯದರ್ಶಿ ಎಂ.ಇಮ್ರಾನ್, ಕರ್ನಾಟಕ ರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಎನ್.ಕೆ.ವೆಂಕಟೇಶ್, ಸಿ.ವಿ.ನಾಗರಾಜ್, ಮಾನವ ಹಕ್ಕುಗಳ ಗಲ್ ಪೇಟೆ ಸಂತೋಷ, ಮುನಿಕೃಷ್ಣ, ರೋಟರಿ ಸೆಂಟ್ರಲ್ ಅಧ್ಯಕ್ಷ ಫೈರ್ ರಮೇಶ್, ಕೆ.ಟಿ. ಶ್ರೀನಿವಾಸ್, ಕೊಂಡರಾಜನಹಳ್ಳಿ ಜಗದೀಶ್, ವಿ.ಸುಬ್ರಮಣಿ, ಎಂ.ನAದೀಶ್, ಜಯ ಕರ್ನಾಟಕ ಕೆ.ಎಂ. ಗೋವಿಂದರಾಜು ಮತ್ತು ರಮೇಶ ಬಾಬು, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ನಾರಾಯಣಪ್ಪ, ಪಲ್ಗುಣ, ಸ್ಕಂದ ನವೀನ್, ಕಠಾರಿಪಾಳ್ಯ ಅಮರ್, ಬಾಲು, ಕಿಶೋರ್, ಕಮಲಾಕ್ಷ, ನರಸಾಪುರ ಲಕ್ಷ್ಮಿಪತಿ, ಚೌಡೇಶ್ವರಿನಗರ ಗೋವಿಂದರಾಜು, ಮಾಸ್ತಿ ಬಡಾವಣೆಯ ಭರತ್, ಗರುಡನಹಳ್ಳಿ ಚಲಪತಿ, ಕುರುಬರಪೇಟೆ ಚಂದ್ರಶೇಖರ, ಕೆ.ವಿ.ಮಹೇಶ್, ಅರೋಗ್ಯನಾಥನ್, ತೊರದೇವಂಡಹಳ್ಳಿ ನಾಗರಾಜ್, ಕಿಲಾರಿಪೇಟೆ ನಾಗ, ಗಂಗಮ್ಮನಪಾಳ್ಯ ಚಂದ್ರ, ಅಂಜನ್ ಗೌಡ, ಕೆಲುಕೋಟೆ ಅಂಜಿನಪ್ಪ, ಕನಕೇಶ್, ಆನಂದ್, ಪ್ರಸನ್ನ, ಗಡ್ಡಂ ಚಿನ್ನಹಳ್ಳಿ ರಾಮಮೂರ್ತಿ ನಾಯ್ಡು ಸೇರಿದಂತೆ ಹಲವಾರು ಮುಖಂಡರುಗಳು ಭಾಗವಹಿಸಿದ್ದರು.