• Wed. Oct 30th, 2024

Month: July 2024

  • Home
  • 6  ಮಕ್ಕಳಿಗೆ ಅಂಗಾಂಗ ದಾನ:ಮಗಳ ಸಾವಿನಲ್ಲೂ ಸಾರ್ಥಕತೆ ಮೆರೆದ ಪೊಷಕರು

6  ಮಕ್ಕಳಿಗೆ ಅಂಗಾಂಗ ದಾನ:ಮಗಳ ಸಾವಿನಲ್ಲೂ ಸಾರ್ಥಕತೆ ಮೆರೆದ ಪೊಷಕರು

ತುಮಕೂರು: ಮಗಳ ಸಾವಿನ ದುಃಖದಲ್ಲೂ ಸಹ ಆಕೆಯ ಅಂಗಾಂಗ ದಾನ‌ ಮಾಡುವ ಮೂಲಕ ಪೋಷಕರು ಸಾರ್ಥಕತೆಯನ್ನ ಮೆರೆದ ಘಟನೆ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ನಡೆದಿದೆ. ತಿಪಟೂರು ನಗರದ ಹಳೆ ಪಾಳ್ಯ‌ ನಿವಾಸಿ ವಸಂತಕುಮಾರ್ ಮತ್ತು ದಿವ್ಯಾ ದಂಪತಿಯ 12 ವರ್ಷದ ಮಗಳು…

ಕಾಲಿಗೆ ಸರಪಳಿ ಬಿಗಿದ ಸ್ಥಿತಿಯಲ್ಲಿ ವಿದೇಶಿ ಮಹಿಳೆ ಕಾಡಿನಲ್ಲಿ ಪತ್ತೆ;ಜೇಬಿನಲ್ಲಿ ಯುಎಸ್ ಪಾಸ್‌ಪೋರ್ಟ್

ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯ ಅರಣ್ಯದಲ್ಲಿ 50 ವರ್ಷದ ಮಹಿಳೆಯನ್ನು ಕಬ್ಬಿಣದ ಸರಪಳಿಯಿಂದ ಮರಕ್ಕೆ ಕಟ್ಟಿಹಾಕಿರುವುದು ಪತ್ತೆಯಾಗಿದೆ. “ಆಕೆಯ ಯುಎಸ್ ಪಾಸ್‌ಪೋರ್ಟ್‌ನ ಫೋಟೋಕಾಪಿ ಮತ್ತು ತಮಿಳುನಾಡು ವಿಳಾಸದೊಂದಿಗೆ ಆಧಾರ್ ಕಾರ್ಡ್ ಸೇರಿದಂತೆ ಇತರ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಮುಂಬೈನಿಂದ…

ಯರಗೋಳ, ಅಂತರಗಂಗೆಯಲ್ಲಿ ಸಾಹಸ ಕ್ರೀಡೆ ‘ಜಿಪ್ ಲೈನ್’ ನಿರ್ಮಿಸಲು ಯೋಜನೆ

-ಕೆ.ರಮೇಶ್. ಬಂಗಾರಪೇಟೆ.ಪ್ರವಾಸಿಗರನ್ನು ಹಾಗೂ ಯುವ ಜನತೆಯನ್ನು ಆಕರ್ಷಿಸಲು ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧೆಡೆಯ ಅರಣ್ಯ ಪ್ರದೇಶದಲ್ಲಿ ಇಲಾಖೆಯು ಹಲವಾರು ಯೋಜನೆಗಳನ್ನು ರೂಪಿಸಿದ್ದು ತಾಲೂಕಿನ ಯರಗೋಳ ಬಳಿ ವೃಕ್ಷೋದ್ಯಾನದಲ್ಲಿ ಹಾಗೂ ಕೋಲಾರದ ಅಂತರಗಂಗೆ ಬೆಟ್ಟದಲ್ಲಿ ಜಿಪ್ ಲೈನ್ ನಿರ್ಮಿಸಲು ಮುಂದಾಗಿದೆ. ಜಿಲ್ಲಾಡಳಿತ ಹಾಗೂ…

ಪ್ಯಾರಿಸ್ ಒಲಿಂಪಿಕ್ಸ್:ಶೂಟಿಂಗ್ ಪದಕ ಗೆದ್ದ ಮೊದಲ ಭಾರತೀಯ ಮಹಿಳೆ ಮನು ಭಾಕರ್

ಪ್ಯಾರಿಸ್‌ನಲ್ಲಿ ಒಲಿಂಪಿಕ್ಸ್‌ನ ಶೂಟಿಂಗ್ ವಿಭಾಗದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಮನು ಭಾಕರ್ ಇತಿಹಾಸವನ್ನು ಬರೆದಿದ್ದಾರೆ. ಹರಿಯಾಣದ 22 ವರ್ಷ ವಯಸ್ಸಿನ ಅವರು 10 ಮೀಟರ್ ಏರ್‌ನಲ್ಲಿ ಮೂರನೇ ಸ್ಥಾನವನ್ನು ಗಳಿಸಿದ ನಂತರ ಕ್ರೀಡಾಕೂಟದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಮಹಿಳಾ…

ಬೆಮೆಲ್ ಕಾರ್ಖಾನೆಯಲ್ಲಿ ಉಪವಾಸ ಸತ್ಯಾಗ್ರಹ:ಸ್ಥಳಕ್ಕೆ ಸಂಸದ ಮಲ್ಲೇಶ್‌ಬಾಬು

KGF,ಕೆಜಿಎಫ್:ಬೆಮೆಲ್ ಕಾರ್ಖಾನೆಯಲ್ಲಿ ದಿನಗೂಲಿ ನೌಕರರನ್ನು ಕಡೆಗಣಿಸಿ ದಕ್ಷಿಣ ಬಾರತದ ಕಾರ್ಮಿರನ್ನು ನೇಮಕ ಮಾಡಿಕೊಂಡಿರುವ ಹಿನ್ನಲೆಯಲ್ಲಿ ಸ್ಥಳೀಯವಾಗಿ ಬೆಮೆಲ್ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 2500 ಕಾರ್ಮಿಕರು ಟೂಲ್‌ಡೌನ್ ಮಾಡಿ ಬೆಮೆಲ್ ಕಾರ್ಖಾನೆಯಲ್ಲಿ ಉಪವಾಸ ಸತ್ಯಾಗ್ರಹವನ್ನು ಶನಿವಾರ ಆರಂಭಿಸಿದ್ದರು, ದಿನಗೂಲಿ ನೌಕರರನ್ನು ಖಾಯಂಗೊಳಿಸುವವರಿಗೆ ಉಪವಾಸ ಸತ್ಯಾಗ್ರಹವನ್ನು…

ಕೋಲಾರ ಜಿಲ್ಲೆಯಲ್ಲಿ ನಿಧಾನ ವಿಷವಾಗುತ್ತಿರುವ ನೀರು !

-ಕೆ.ಎಸ್.ಗಣೇಶ್ ಕೋಲಾರ: ಹಲ್ಲು ಮೂಳೆಗಳ ಸವೆತ, ಕೀಲು ಮೊಣಕಾಲು ನೋವು, ಸವೆತ, ಹೃದಯ ಕಾಯಿಲೆಗಳಿಂದ ಹಠಾತ್ ಮರಣ, ಮೂತ್ರಪಿಂಡ ವೈಫಲ್ಯ, ಚರ್ಮ ವ್ಯಾದಿಗಳು, ನಿಯಂತ್ರಣಕ್ಕೆ ಸಿಗದ ಮಧುಮೇಹ, ಹಾರ್ಮೋನುಗಳಲ್ಲಿ ಏರುಪೇರು, ಥೈರಾಯ್ಡ್, ಸಂತಾನೋತ್ಪತ್ತಿ ಸಮಸ್ಯೆಗಳು, ಕಣ್ಣಿನ ಪೊರೆ, ಜೀರ್ಣಾಂಗ ಸಮಸ್ಯೆ ಹೀಗೆ ಜಿಲ್ಲೆಯ ಜನರು ಅನುಭವಿಸುತ್ತಿರುವ ನಾನಾ ಕಾಯಿಲೆಗಳಿಗೆ ಕುಡಿಯುವ ನೀರೂ ಕಾರಣ ಎಂಬ ಅಚ್ಚರಿಯ ಅಂಶ ಸಂಶೋಧನೆಯಿಂದ ಹೊರ ಬಿದ್ದಿದೆ. ಪ್ಲೋರೈಡ್  ಮಿಶ್ರಿತ ನೀರನ್ನು ನಿರಂತರವಾಗಿ ಸೇವಿಸುತ್ತಿರುವುರಿಂದ ಕೋಲಾರ ಜಿಲ್ಲೆಯ ಜನರು ಎದುರಿಸುತ್ತಿರುವ ಅನಾರೋಗ್ಯ ಸಮಸ್ಯೆಗಳ ಕುರಿತು ಶ್ರೀದೇವರಾಜ್ ಅರಸ್ ವೈದ್ಯಕೀಯ ಮಹಾವಿದ್ಯಾಲಯ ಜೀವ ರಸಾಯನ ಶಾಸ್ತ್ರ ವಿಭಾಗದ ಫ್ಲೋರೋಸಿಸ್ ರೀಸರ್ಚ್ ಅಂಡ್ ರೆಫೆರಲ್ ಲ್ಯಾಬ್  ವೈದ್ಯರು ಮತ್ತು ವಿಜ್ಞಾನಿಗಳನ್ನು ಒಳಗೊಂಡ ತಂಡ ಆಳವಾದ ಸಂಶೋಧನೆ ನಡೆಸುತ್ತಿದೆ. ಫ್ಲೋರೋಸಿಸ್ ಇತಿಹಾಸ: ಅಮೇರಿಕ ರಾಷ್ಟ್ರದ ಕೊಲೊರಾಡೋದಲ್ಲಿ, 1901 ರಲ್ಲಿ ವೈದ್ಯ ಕೆ.ಮೆಕ್ಕೆ ಮಕ್ಕಳ ಹಲ್ಲುಗಳ ಮೇಲೆ ಹಳದಿ ಕಲೆಗಳನ್ನು ಪರೀಕ್ಷಿಸಿ ಇದು ನೀರಿನ ಸರಬರಾಜಿನಲ್ಲಿ ಫ್ಲೋರೈಡ್ ಹೆಚ್ಚಿನ ಸಾಂದ್ರತೆಯೊಂದಿಗೆ ಸಂಬಂಧಿಸಿದೆ ಎಂದು ದೃಡೀಕರಿಸುತ್ತಾರೆ. ಹಲವು ಸಂಶೋಧನೆಗಳು ಮತ್ತು ಪ್ರಯೋಗಗಳಿಂದ ಹಲ್ಲುಗಳು ಹಳದಿಯಾಗಲು ಕಾರಣ ಫ್ಲೋರೈಡ್‌ನ ಅಕ ಸೇವನೆ ಎಂದು ಅರಿವಾಗುತ್ತದೆ. ಹಲ್ಲಿನ ಕೊಳೆತವನ್ನು ರಕ್ಷಿಸುವಲ್ಲಿ ಫ್ಲೋರೈಡ್ ಪ್ರಮುಖ ಪಾತ್ರವಹಿಸುತ್ತದೆ ಇಂಗ್ಲೆಂಡ್ ಸರ್ಕಾರವು 1970 ರ ದಶಕದಲ್ಲಿ ನೀರಿನ ಡೀಫ್ಲೋರೈಡೀಕರಣ ತಂತ್ರವನ್ನು ಪ್ರಾರಂಭಿಸಿತು, ಅಲ್ಲಿ ಫ್ಲೋರೈಡ್ ಅಲ್ಲದ ಪ್ರದೇಶಗಳಿಗೆ ಸರಬರಾಜು ಮಾಡುವ ಕುಡಿಯುವ ನೀರಿಗೆ ಕಡಿಮೆ ಪ್ರಮಾಣದಲ್ಲಿ ಫ್ಲೋರೈಡ್ ಅನ್ನು ಬೆರಸಲಾಗುತ್ತಿತ್ತು. ನಂತರ ದಂತ ವೈದ್ಯರು ಸಾಮಾನ್ಯ ಟೂತ್‌ಪೇಸ್ಟ್‌ನಲ್ಲಿ ಫ್ಲೋರೈಡ್ ಅನ್ನು ಸೂಕ್ತ ಪ್ರಮಾಣದಲ್ಲಿ ಸೇರಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿದರು. ಭಾರತದಲ್ಲಿ, 20 ನೇ ಶತಮಾನದವರೆಗೆ ಜನರು ಕುಡಿಯುವ, ಅಡುಗೆ ಮತ್ತು ಇತರ ಉಪಯುಕ್ತತೆಗಳಿಗಾಗಿ ಬಾವಿ ನೀರನ್ನು ಹೆಚ್ಚಾಗಿ ಬಳಸುತ್ತಿದ್ದರು. ಕ್ರಮೇಣ ಕೊಳವೆ ಬಾವಿಗಳಿಗೆ ಅವಲಂಬಿತರಾದರು. ಪ್ರಾರಂಭದಲ್ಲಿ ಇದರಿಂದ ಕಾಲರದಂತ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುವುದು ಎಂದು ವಿಶ್ಲೇಷಿಸಿದರು. ಆದರೆ ಕೊಳವೆ ಬಾವಿಗಳಿಂದ  ನೀರಿನ ಮಟ್ಟ ಕೆಳಗೆ ಹೋದಷ್ಟು ಇತರೆ ತೊಂದರೆಗಳು ಪ್ರಾರಂಭವಾದವು. ಅದರಲ್ಲಿ ಫ್ಲೋರೋಸಿಸ್ ಸಹ ಒಂದು. ಫ್ಲೋರೈಡೀಕರಣವು ಸ್ವಾಭಾವಿಕವಾಗಿ ಭೂಮಿಯ ಒಳಪದರದಲ್ಲಿ  ಸಂಭವಿಸಿರುವುದರಿಂದ, ಈ ನೀರಿನಲ್ಲಿನ ಫ್ಲೋರೈಡಿನ ನಿರ್ಮೂಲನೆ ಅಸಾಧ್ಯವಾಯಿತು. ಅಪಾಯಕಾರಿ ಮಟ್ಟ ವಿಶ್ವ ಆರೋಗ್ಯ ಸಂಸ್ಥೆಯು ವ್ಯಾಖ್ಯಾನಿಸಿದ ಹಾಗೆ ಕುಡಿಯುವ ನೀರಿನಲ್ಲಿ ಫ್ಲೋರೈಡ್‌ನ ಮಿತಿ 1.5 ಪಿಪಿಎಂ ವರೆಗೂ ಇರಬಹುದು. ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿ, ಗರಿಷ್ಠ ದಾಖಲಾದ ನೀರಿನ ಫ್ಲೋರೈಡ್ ಮಟ್ಟವು 3.38 ಪಿಪಿಎಂಗೂ ಅಧಿಕವಾಗಿದೆ, ಇದನ್ನು ಹೆಚ್ಚುವರಿ ಫ್ಲೋರೈಡ್ ಎಂದು ಪರಿಗಣಿಸಲಾಗುತ್ತದೆ. ಹೀಗೆ ಫ್ಲೋರೈಡ್‌ಗೆ ತುತ್ತಾದ ಜನರು  ಫ್ಲೋರೋಸಿಸ್ ಎಂಬ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಬಹು ವಿವಿಧ ಆನಾರೋಗ್ಯ ಸಮಸ್ಯೆಗಳಿಂದ ನರಳುತ್ತಿರುವುದು ಸಂಶೋಧನೆಯಿಂದ ಬಹಿರಂಗವಾಗಿದೆ. ನೀರು – ಆಹಾರ ಫ್ಲೋರೈಡ್ ನೈಸರ್ಗಿಕವಾಗಿ ಫ್ಲೋರಿನ್ ಅನಿಲವಾಗಿ ಪ್ರಕಟವಾಗುತ್ತದೆ.ಇದು ಭೂಮಿಯ ಹೊರಪದರದಲ್ಲಿ 13 ನೇಅಂಶವಾಗಿ ಅತ್ಯಂತ ಹೇರಳವಾಗಿರುತ್ತದೆ. ಇದು ನೀರು, ಆಹಾರ ಮತ್ತು ಪಾನೀಯಗಳಲ್ಲಿ ಕಂಡುಬರುತ್ತದೆ. ಜನರು ಸೇವಿಸುವ ಹೆಚ್ಚಿನ…

BSNL ಬಳಕೆದಾರರ ಮಾಹಿತಿ ಸೋರಿಕೆ ಒಪ್ಪಿಕೊಂಡ ಕೇಂದ್ರ ಸರ್ಕಾರ

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಆಪರೇಟರ್ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್‌) ನಲ್ಲಿ ಬಳಕೆದಾರರ ಮಾಹಿತಿ ಸೋರಿಕೆಯಾಗಿರುವುದನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ಅಮರ್ ಸಿಂಗ್ ಕೇಳಿದ ಪ್ರಶ್ನೆಗೆ ಲಿಖಿತವಾಗಿ ಉತ್ತರಿಸಿದ ಕೇಂದ್ರ ಸಂಪರ್ಕ ಖಾತೆ ರಾಜ್ಯ ಸಚಿವ…

‘ಒಂದು ದೇಶ ಒಂದು ಚುನಾವಣೆ, ನೀಟ್‌ ಪರೀಕ್ಷೆ’ ವಿರುದ್ದ ನಿರ್ಣಯ ಅಂಗೀಕರಿಸಿದ ರಾಜ್ಯ ಸರ್ಕಾರ

ನೀಟ್ ಪರೀಕ್ಷೆ ಹಾಗೂ ಕೇಂದ್ರ ಸರ್ಕಾರದ ಒಂದು ದೇಶ, ಒಂದು ಚುನಾವಣೆ ವಿರೋಧಿಸಿ ಕರ್ನಾಟಕ ಸರ್ಕಾರ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ್ದು, ವಿಧಾನಸಭೆ ಮತ್ತು ವಿಧಾನ ಪರಿಷತ್‌ ಅದನ್ನು ಅಂಗೀಕರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಜುಲೈ 22ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ…

Dravida, ಅಭಿವೃದ್ಧಿ ಮತ್ತು ಸಮಾನತೆಗಾಗಿ ದ್ರಾವಿಡ ಚಳುವಳಿ.

ಬೆರಳ ತುದಿಯಲ್ಲಿಯೆ ಎಲ್ಲಾ ಮಾಹಿತಿ ಸಿಗುವಂತಿದ್ದರು ಯುವ ಜನರಿಗೆ ಒಳ್ಳೆಯ ತಿಳುವಳಿಕೆ ತಿಳಿಯಲಡ್ಡಿಯಾಗಿವೆ ಆನ್ ಲೈನ್ ಗೇಮ್ ಗಳು, ಸಾಮಾಜಿಕ ಜಾಲತಾಣಗಳಲ್ಲಿನ ಫೋಟೋ ರೀಲ್ಸ್ ಗಳು. ಇಂತಹ ಸಂದರ್ಭದಲ್ಲಿ ನಾವು ದ್ರಾವಿಡರು ಎಂಬ ಅರಿವು ಮೂಡಿಸಲು ಕಂಡುಕೊಂಡ ಉಪಾಯವೆ ನಾವು Dravida…

ಕೆಜಿಎಫ್ ನಗರಾಭಿವೃದ್ದಿ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರಾಗಿ ಜಿ.ಗೋಪಾಲರೆಡ್ಡಿ ನೇಮಕ

ಕೆಜಿಎಫ್ ನಗರಾಭಿವೃದ್ದಿ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರಾಗಿ ಜಿ.ಗೋಪಾಲರೆಡ್ಡಿ ನೇಮಕ ಕೋಲಾರ,ಜುಲೈ.೨೩ : ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡ ದಾಸರಹೊಸಹಳ್ಳಿಯ ಜಿ.ಗೋಪಾಲರೆಡ್ಡಿ ಅವರನ್ನು ಕರ್ನಾಟಕ ನಗರಾಭಿವೃದ್ದಿ ಪ್ರಾಧಿಕಾರಗಳ ಕಾಯ್ದೆ ೧೯೮೭ರ ಕಲಂ(ಎ)ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ತಕ್ಷಣದಿಂದ ಜಾರಿಗೆ…

You missed

error: Content is protected !!