30 ಸಾವಿರ ಬಿದಿರು ಸಸಿ ನೆಡುವ ಅಭಿಯಾನಕ್ಕೆ ಈಶ್ವರ ಖಂಡ್ರೆ ಚಾಲನೆ
ಬೆಂಗಳೂರು, ಆ 8, 2024: ಬೆಂಗಳೂರಿನಲ್ಲಿ ವಾಹನಗಳಿಂದ ಹೊರಹೊಮ್ಮುವ ಇಂಗಾಲದಿಂದ ಉಂಟಾಗುವ ದುಷ್ಪರಿಣಾಮ ತಗ್ಗಿ ಸಲು ಬಿದಿರು ನೆಡುವ ‘ಬಂಬೂ ಬೆಂಗಳೂರು’ ಅಭಿಯಾನಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮಂಗಳವಾರ ಚಾಲನೆ ನೀಡಿದರು. ದಿ ಗ್ರೀನ್ ಸ್ಕೂಲ್ ಬೆಂಗಳೂರು, ಭಾರತೀಯ ಬಿದಿರು…
ವಯನಾಡು ಭಾರಿ ಭೂಕುಸಿತ: ಸಾವಿನ ಸಂಖ್ಯೆ 30ಕ್ಕೆ ಏರಿಕೆ, ತೀವ್ರಗೊಂಡ ರಕ್ಷಣಾ ಕಾರ್ಯಾಚರಣೆ
ಮಂಗಳವಾರ ಮುಂಜಾನೆ ಕೇರಳದ ಗುಡ್ಡಗಾಡು ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೂವರು ಮಕ್ಕಳು ಸೇರಿದಂತೆ 30 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರಲ್ಲಿ, ಜಿಲ್ಲೆಯ ಚೂರಲ್ಮಲಾ ಪಟ್ಟಣದಲ್ಲಿ ಒಂದು ಮಗು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದರೆ, ನೇಪಾಳಿ ಕುಟುಂಬದ ಒಂದು ವರ್ಷದ…
ಕೋಲಾರ ಜಿಲ್ಲೆಯಲ್ಲಿ ನಿಧಾನ ವಿಷವಾಗುತ್ತಿರುವ ನೀರು !
-ಕೆ.ಎಸ್.ಗಣೇಶ್ ಕೋಲಾರ: ಹಲ್ಲು ಮೂಳೆಗಳ ಸವೆತ, ಕೀಲು ಮೊಣಕಾಲು ನೋವು, ಸವೆತ, ಹೃದಯ ಕಾಯಿಲೆಗಳಿಂದ ಹಠಾತ್ ಮರಣ, ಮೂತ್ರಪಿಂಡ ವೈಫಲ್ಯ, ಚರ್ಮ ವ್ಯಾದಿಗಳು, ನಿಯಂತ್ರಣಕ್ಕೆ ಸಿಗದ ಮಧುಮೇಹ, ಹಾರ್ಮೋನುಗಳಲ್ಲಿ ಏರುಪೇರು, ಥೈರಾಯ್ಡ್, ಸಂತಾನೋತ್ಪತ್ತಿ ಸಮಸ್ಯೆಗಳು, ಕಣ್ಣಿನ ಪೊರೆ, ಜೀರ್ಣಾಂಗ ಸಮಸ್ಯೆ ಹೀಗೆ ಜಿಲ್ಲೆಯ ಜನರು ಅನುಭವಿಸುತ್ತಿರುವ ನಾನಾ ಕಾಯಿಲೆಗಳಿಗೆ ಕುಡಿಯುವ ನೀರೂ ಕಾರಣ ಎಂಬ ಅಚ್ಚರಿಯ ಅಂಶ ಸಂಶೋಧನೆಯಿಂದ ಹೊರ ಬಿದ್ದಿದೆ. ಪ್ಲೋರೈಡ್ ಮಿಶ್ರಿತ ನೀರನ್ನು ನಿರಂತರವಾಗಿ ಸೇವಿಸುತ್ತಿರುವುರಿಂದ ಕೋಲಾರ ಜಿಲ್ಲೆಯ ಜನರು ಎದುರಿಸುತ್ತಿರುವ ಅನಾರೋಗ್ಯ ಸಮಸ್ಯೆಗಳ ಕುರಿತು ಶ್ರೀದೇವರಾಜ್ ಅರಸ್ ವೈದ್ಯಕೀಯ ಮಹಾವಿದ್ಯಾಲಯ ಜೀವ ರಸಾಯನ ಶಾಸ್ತ್ರ ವಿಭಾಗದ ಫ್ಲೋರೋಸಿಸ್ ರೀಸರ್ಚ್ ಅಂಡ್ ರೆಫೆರಲ್ ಲ್ಯಾಬ್ ವೈದ್ಯರು ಮತ್ತು ವಿಜ್ಞಾನಿಗಳನ್ನು ಒಳಗೊಂಡ ತಂಡ ಆಳವಾದ ಸಂಶೋಧನೆ ನಡೆಸುತ್ತಿದೆ. ಫ್ಲೋರೋಸಿಸ್ ಇತಿಹಾಸ: ಅಮೇರಿಕ ರಾಷ್ಟ್ರದ ಕೊಲೊರಾಡೋದಲ್ಲಿ, 1901 ರಲ್ಲಿ ವೈದ್ಯ ಕೆ.ಮೆಕ್ಕೆ ಮಕ್ಕಳ ಹಲ್ಲುಗಳ ಮೇಲೆ ಹಳದಿ ಕಲೆಗಳನ್ನು ಪರೀಕ್ಷಿಸಿ ಇದು ನೀರಿನ ಸರಬರಾಜಿನಲ್ಲಿ ಫ್ಲೋರೈಡ್ ಹೆಚ್ಚಿನ ಸಾಂದ್ರತೆಯೊಂದಿಗೆ ಸಂಬಂಧಿಸಿದೆ ಎಂದು ದೃಡೀಕರಿಸುತ್ತಾರೆ. ಹಲವು ಸಂಶೋಧನೆಗಳು ಮತ್ತು ಪ್ರಯೋಗಗಳಿಂದ ಹಲ್ಲುಗಳು ಹಳದಿಯಾಗಲು ಕಾರಣ ಫ್ಲೋರೈಡ್‌ನ ಅಕ ಸೇವನೆ ಎಂದು ಅರಿವಾಗುತ್ತದೆ. ಹಲ್ಲಿನ ಕೊಳೆತವನ್ನು ರಕ್ಷಿಸುವಲ್ಲಿ ಫ್ಲೋರೈಡ್ ಪ್ರಮುಖ ಪಾತ್ರವಹಿಸುತ್ತದೆ ಇಂಗ್ಲೆಂಡ್ ಸರ್ಕಾರವು 1970 ರ ದಶಕದಲ್ಲಿ ನೀರಿನ ಡೀಫ್ಲೋರೈಡೀಕರಣ ತಂತ್ರವನ್ನು ಪ್ರಾರಂಭಿಸಿತು, ಅಲ್ಲಿ ಫ್ಲೋರೈಡ್ ಅಲ್ಲದ ಪ್ರದೇಶಗಳಿಗೆ ಸರಬರಾಜು ಮಾಡುವ ಕುಡಿಯುವ ನೀರಿಗೆ ಕಡಿಮೆ ಪ್ರಮಾಣದಲ್ಲಿ ಫ್ಲೋರೈಡ್ ಅನ್ನು ಬೆರಸಲಾಗುತ್ತಿತ್ತು. ನಂತರ ದಂತ ವೈದ್ಯರು ಸಾಮಾನ್ಯ ಟೂತ್‌ಪೇಸ್ಟ್‌ನಲ್ಲಿ ಫ್ಲೋರೈಡ್ ಅನ್ನು ಸೂಕ್ತ ಪ್ರಮಾಣದಲ್ಲಿ ಸೇರಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿದರು. ಭಾರತದಲ್ಲಿ, 20 ನೇ ಶತಮಾನದವರೆಗೆ ಜನರು ಕುಡಿಯುವ, ಅಡುಗೆ ಮತ್ತು ಇತರ ಉಪಯುಕ್ತತೆಗಳಿಗಾಗಿ ಬಾವಿ ನೀರನ್ನು ಹೆಚ್ಚಾಗಿ ಬಳಸುತ್ತಿದ್ದರು. ಕ್ರಮೇಣ ಕೊಳವೆ ಬಾವಿಗಳಿಗೆ ಅವಲಂಬಿತರಾದರು. ಪ್ರಾರಂಭದಲ್ಲಿ ಇದರಿಂದ ಕಾಲರದಂತ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುವುದು ಎಂದು ವಿಶ್ಲೇಷಿಸಿದರು. ಆದರೆ ಕೊಳವೆ ಬಾವಿಗಳಿಂದ ನೀರಿನ ಮಟ್ಟ ಕೆಳಗೆ ಹೋದಷ್ಟು ಇತರೆ ತೊಂದರೆಗಳು ಪ್ರಾರಂಭವಾದವು. ಅದರಲ್ಲಿ ಫ್ಲೋರೋಸಿಸ್ ಸಹ ಒಂದು. ಫ್ಲೋರೈಡೀಕರಣವು ಸ್ವಾಭಾವಿಕವಾಗಿ ಭೂಮಿಯ ಒಳಪದರದಲ್ಲಿ ಸಂಭವಿಸಿರುವುದರಿಂದ, ಈ ನೀರಿನಲ್ಲಿನ ಫ್ಲೋರೈಡಿನ ನಿರ್ಮೂಲನೆ ಅಸಾಧ್ಯವಾಯಿತು. ಅಪಾಯಕಾರಿ ಮಟ್ಟ ವಿಶ್ವ ಆರೋಗ್ಯ ಸಂಸ್ಥೆಯು ವ್ಯಾಖ್ಯಾನಿಸಿದ ಹಾಗೆ ಕುಡಿಯುವ ನೀರಿನಲ್ಲಿ ಫ್ಲೋರೈಡ್‌ನ ಮಿತಿ 1.5 ಪಿಪಿಎಂ ವರೆಗೂ ಇರಬಹುದು. ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿ, ಗರಿಷ್ಠ ದಾಖಲಾದ ನೀರಿನ ಫ್ಲೋರೈಡ್ ಮಟ್ಟವು 3.38 ಪಿಪಿಎಂಗೂ ಅಧಿಕವಾಗಿದೆ, ಇದನ್ನು ಹೆಚ್ಚುವರಿ ಫ್ಲೋರೈಡ್ ಎಂದು ಪರಿಗಣಿಸಲಾಗುತ್ತದೆ. ಹೀಗೆ ಫ್ಲೋರೈಡ್‌ಗೆ ತುತ್ತಾದ ಜನರು ಫ್ಲೋರೋಸಿಸ್ ಎಂಬ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಬಹು ವಿವಿಧ ಆನಾರೋಗ್ಯ ಸಮಸ್ಯೆಗಳಿಂದ ನರಳುತ್ತಿರುವುದು ಸಂಶೋಧನೆಯಿಂದ ಬಹಿರಂಗವಾಗಿದೆ. ನೀರು – ಆಹಾರ ಫ್ಲೋರೈಡ್ ನೈಸರ್ಗಿಕವಾಗಿ ಫ್ಲೋರಿನ್ ಅನಿಲವಾಗಿ ಪ್ರಕಟವಾಗುತ್ತದೆ.ಇದು ಭೂಮಿಯ ಹೊರಪದರದಲ್ಲಿ 13 ನೇಅಂಶವಾಗಿ ಅತ್ಯಂತ ಹೇರಳವಾಗಿರುತ್ತದೆ. ಇದು ನೀರು, ಆಹಾರ ಮತ್ತು ಪಾನೀಯಗಳಲ್ಲಿ ಕಂಡುಬರುತ್ತದೆ. ಜನರು ಸೇವಿಸುವ ಹೆಚ್ಚಿನ…
ಶಾಲಾ ಮಕ್ಕಳಳಿಗೆ ವಾರದ 6ದಿನ ಮೊಟ್ಟೆ, ಅಜೀಂ ಪ್ರೇಮ್ ಜಿ ಪೌಂಡೇಷನ್ ನಿಂದ ನರವು:ಸಿಎಂ ಸಿದ್ದು ಉದ್ಘಾಟನೆ.
“ಬಡವರ ಮಕ್ಕಳಿಗೂ ಉತ್ತಮ ಶಿಕ್ಷಣಕ್ಕಾಗಿ ಅವಕಾಶಗಳನ್ನು ಸೃಷ್ಟಿಸುವುದು ನಮ್ಮ ಆಶಯ. ಈ ಕಾರಣಕ್ಕೇ ಸಮವಸ್ತ್ರ, ಶೂ, ಸಾಕ್ಸ್ ಕೊಡುವ ಜೊತೆಗೆ ಹೆಚ್ಚೆಚ್ಚು ವಸತಿ ಶಾಲೆಗಳನ್ನು ತೆರೆಯುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಅಜೀಂಪ್ರೇಮ್ ಜಿ ಫೌಂಡೇಷನ್ ಸಹಭಾಗಿತ್ವದಲ್ಲಿ ಸರ್ಕಾರಿ, ಅನುದಾನಿತ ಪ್ರಾಥಮಿಕ…
FACT CHECK:ಪಪ್ಪಾಯಿ ಎಲೆಯ ರಸವು ಡೆಂಗ್ಯೂ ಖಾಯಿಲೆ ಗುಣಪಡಿಸುತ್ತದೆ ಎಂಬುವುದು ಸುಳ್ಳು.
“ತುರ್ತು ಮಾಹಿತಿ. ಪಪ್ಪಾಯಿ ಎಲೆಯ ರಸವು ಜೇನು ತುಪ್ಪದೊಂದಿಗೆ ಪವಾಡದಂತೆ ಕೆಲಸ ಮಾಡುತ್ತದೆ. ಪ್ಲೆಟ್ಲೆಟ್ ಎಣಿಕೆ 12 ಗಂಟೆಗಳಲ್ಲಿ 68,000 ದಿಂದ 200,000 ದವರೆಗೆ ಏರುತ್ತದೆ. ಮಾನವೀಯತೆಯ ಸೇವೆ ಮಾಡಲು ಈ ಸಂದೇಶವನ್ನು ಇತರರೊಂದಿಗೆ ಹಂಚಿಕೊಳ್ಳಿ.. ಭಾರತದಾದ್ಯಂತ ಡೆಂಗ್ಯೂ ಜ್ವರ ವಿಪರೀತವಾಗಿ…
ನೇರಳೆಯಿಂದ ಲಾಭ ಗಳಿಸುತ್ತಿರುವ ಬಿಎಂಟಿಸಿ ಕಂಡೆಕ್ಟರ್.
ಕೋಲಾರ:ವಿವಿಧ ಬಗೆಯ ಕೃಷಿ ಪ್ರಯೋಗದಲ್ಲಿ ಕೋಲಾರದ ಜಿಲ್ಲೆಯದು ಎತ್ತಿದ ಕೈ. ಬಹುಪಾಲು ಮಳೆಯಾಧಾರಿತ ಕೃಷಿಯನ್ನೇ ನೆಚ್ಚಿಕೊಂಡಿರುವ ಇಲ್ಲಿನ ರೈತರು ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭ ಗಳಿಸುವ ಕೃಷಿಯ ಬಗ್ಗೆ ಚಿಂತನೆ ಮಾಡಿ ಕಾರ್ಯಗತಗೊಳಿಸುತ್ತಾರೆ. ಅಂತಹ ಯಶೋಗಾಥೆಗೆ ಕೋಲಾರ ತಾಲೂಕಿನ ಅರಹಳ್ಳಿ ಗ್ರಾಮದ…
ರಾಜ್ಯದಲ್ಲಿ ಕಲರ್ ಕಾಟನ್ ಕ್ಯಾಂಡಿ ನಿಷೇಧ:ನಿಯಮ ಉಲ್ಲಂಘಿಸಿದರೆ ಕಠಿಣ ಶಿಕ್ಷೆ.
ರಾಜ್ಯದಲ್ಲಿ ಕಲರ್ ಕಾಟನ್ ಕ್ಯಾಂಡಿ ನಿಷೇಧಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಹತ್ವದ ಮಾಹಿತಿಯನ್ನು ನೀಡಿದ್ದು, ತಮಿಳುನಾಡು ಮತ್ತು ಪುದುಚೇರಿ ಬಳಿಕ ಕಾಟನ್ ಕ್ಯಾಂಡಿಯನ್ನು ನಿಷೇಧಿಸಿದ ರಾಜ್ಯಗಳ ಪಟ್ಟಿಗೆ ಕರ್ನಾಟಕವು ಸೇರಿದೆ. ಈ ಕುರಿತು ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ…
ಆರೋಗ್ಯವಂತ ಸಮಾಜದಿಂದ ಸದೃಢ ರಾಜ್ಯ ನಿರ್ಮಾಣ: ದಿನೇಶ್ ಗುಂಡೂರಾವ್ .
ಬಂಗಾರಪೇಟೆ:ಸುಭದ್ರ ಬಲಿಷ್ಠ ರಾಜ್ಯ ನಿರ್ಮಾಣವಾಗಬೇಕಾದರೆ ಅಲ್ಲಿ ಮುಖ್ಯವಾಗಿ ಆರೋಗ್ಯವಂತ ಮಾನವ ಸಂಪನ್ಮೂಲ ಅತ್ಯಗತ್ಯ, ಈ ಹಿನ್ನಲೆಯಲ್ಲಿ ರಾಜ್ಯದ್ಯಂತ ಸುಸಜ್ಜಿತವಾದ ಆಸ್ಪತ್ರೆಗಳ ಸೌಲಭ್ಯಗಳನ್ನು ಒದಗಿಸಿಕೊಡಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಐಸೋಲೇಶನ್…
ಬಹುಪೌಷ್ಠಿಕಾಂಶವುಳ್ಳ ರಾಗಿ ಮಾಲ್ಟ್ ಹೆಲ್ತ್ ಮಿಕ್ಸ್ ವಿತರಿಸಿದ CM ಸಿದ್ದರಾಮಯ್ಯ.
ಬೆಂಗಳೂರು:ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ 2023-24ನೇ ಶೈಕ್ಷಣಿಕ ವರ್ಷದಿಂದ ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲಾ ಮಕ್ಕಳಿಗೆ ಬಹುಪೌಷ್ಠಿಕಾಂಶವುಳ್ಳ ಸಾಯಿ ಶ್ಯೂರ್ ರಾಗಿ ಮಾಲ್ಟ್ ಹೆಲ್ತ್ ಮಿಕ್ಸ್ ವಿತರಿಸುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು. ಈ ವೇಳೆ…
ಮತ್ತೆ ಬಂತು ಕೊರೋನ:ಕೋಲಾರದಲ್ಲಿ ಇಂದು ಮೊದಲ ಕೇಸ್ ಪತ್ತೆ.
ಕೋಲಾರ:27:ಮುಳಬಾಗಿಲು ತಾಲೂಕಿನ ಮೂಲದ ಒಬ್ಬ ವೃದ್ಧೆಯಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ನಿನ್ನೆ ತಪಾಸಣೆಗೆ ಒಳಪಡಿಸಿದ ನಂತರ ಕೊರೋನ ಿರುವುದು ತಿಳಿದುಬಂದಿದೆ. ಜ್ವರ,ಕೆಮ್ಮು ಹಾಗೂ ನೆಗಡಿಯಿಂದ ಬಳಲುತ್ತಿರುವ ವೃದ್ಧೆಗೆ ನಿನ್ನೆ ಕೊರೋನಾ ಟೆಸ್ಟಿಂಗ್ ಮಾಡಲಾಗಿತ್ತು, ಇಂದು ಸೋಂಕು ಇರುವ ಬಗ್ಗೆ ದೃಢಪಟ್ಟಿದೆ. ಕೊರೋನಾ…