PLACE YOUR AD HERE AT LOWEST PRICE
ಬಂಗಾರಪೇಟೆ:ಕಾಮಸಮುದ್ರ ಪೊಲೀಸ್ ಠಾಣೆ ಸರಹದ್ದು ಬಲಮಂದೆ ಗ್ರಾಮದ ಮನೆ ಕನ್ನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯಿಂದ ರೂ: 1.15 ಲಕ್ಷ ಮೌಲ್ಯದ ಕಳವು ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಕಾಮಸಮುದ್ರ ವೃತ್ತದ ಪೊಲೀಸರು ಯಶಸ್ವಿಯಾಗಿದ್ದಾರೆ.
ಫೆ. 8 ರಂದು ರಾತ್ರಿ ಬಲಮಂದೆ ಗ್ರಾಮದ ವಾಸಿ ಸೈಯದ್ ನವಾಜ್ ರವರ ಮನೆಯ ಬಾಗಿಲನ್ನು ಒಡೆದು ಒಳನುಗ್ಗಿ ಬೀರುವಿನಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದರ ಬಗ್ಗೆ ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ತನಿಖೆ ನಡೆಸಲಾಗುತ್ತಿತ್ತು.
ಸಿಪಿಐ ಜಿ.ಸಿ. ನಾರಾಯಣಸ್ವಾಮಿ ರವರ ನೇತೃತ್ವದ ಅಪರಾಧ ಪತ್ತೆ ತಂಡವು ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಬಂಗಾರಪೇಟೆ ತಾಲ್ಲೂಕು ವಾಸಿ ಹೇಮಂತ್‌ಕುಮಾರ್ @ ಅಪ್ಪು (೨೧ ವರ್ಷ) ಎಂಬಾತನಿಂದ ಸುಮಾರು ರೂ: 1.15.000/- ಮೌಲ್ಯದ 14 ಗ್ರಾಂ ತೂಕದ ಒಂದು ಜೊತೆ ಚಿನ್ನದ ಓಲೆ ಮತ್ತು 210 ಗ್ರಾಂ ತೂಕದ 3 ಜೊತೆ ಬೆಳ್ಳಿಯ ಕಾಲು ಚೈನುಗಳನ್ನು ವಶಪಡಿಸಿಕೊಂಡು ಕಾನೂನು ಕ್ರಮ ವಹಿಸಿರುತ್ತಾರೆ.
ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಕಾಮಸಮುದ್ರ ಸಿಪಿಐ ಜಿ.ಸಿ. ನಾರಾಯಣಸ್ವಾಮಿ, ಪಿಎಸ್‌ಐ ಕಿರಣ್‌ಕುಮಾರ್, ಎ.ಎಸ್.ಐ ಶ್ರೀನಿವಾಸ್ ಸಿಬ್ಬಂದಿಗಳಾದ ದೇವರಾಜ್, ಅಯ್ಯಚಾರಿ, ಹರೀಶ್, ಚಾಲಕ ಧನಂಜಯ ಪಾಲ್ಗೊಂಡಿದ್ದು, ಇವರ ಉತ್ತಮ ಕೆಲಸವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಅವರು ಪ್ರಶಂಶಿಸಿದ್ದಾರೆ.