• Thu. Oct 24th, 2024

PLACE YOUR AD HERE AT LOWEST PRICE

ಕೋಲಾರ : ಭೋವಿ ಸಮುದಾಯದ  ನಿಗಮದ ಅಧ್ಯಕ್ಷ ರವಿ ಕುಮಾರ್ ಅವರನ್ನು ನಿಂದಿಸಿರುವ ಶಾಸಕ ಕೊತ್ತೂರು ಮಂಜುನಾಥ್ ಭಾಷೆ ಮತ್ತು ಪದ ಬಳಕೆ ಖಂಡನೀಯ, ಕೂಡಲೇ ಅವರು ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು  ಭೋವಿ  ಯುವ ವೇದಿಕೆ ಜಿಲ್ಲಾಧ್ಯಕ್ಷ ಎಲ್ ಜಿ ಮುನಿರಾಜು ಆಗ್ರಹಿಸಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕ ಕೊತ್ತೂರು ಮಂಜುನಾಥ್ ಇತ್ತೀಚೆಗೆ ಅವರ ಕಚೇರಿಯಲ್ಲಿ ಅಧಿಕಾರಿಗಳ ಮತ್ತು ಸಾರ್ವಜನಿಕರ ಮುಂದೆ ಬಾಯಿಗೆ ಬಂದಂತೆ ಭೋವಿ ಸಮುದಾಯ ನಿಗಮದ ಅಧ್ಯಕ್ಷರನ್ನು ಅವಹೇಳನವಾಗಿ ಮಾತನಾಡಿರುವ ಹೇಳಿಕೆ ಸಮುದಾಯಕ್ಕೆ ಘಾಸಿಯನ್ನು ಉಂಟು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು, ಈ ಕೂಡಲೇ ಶಾಸಕ ಕೊತ್ತೂರು ಮಂಜುನಾಥ್ ಸಾರ್ವಜನಿಕವಾಗಿ ಸಮುದಾಯಕ್ಕೆ ಕ್ಷಮಾಪಣೆಯನ್ನು  ಕೋರಬೇಕು  ಎಂದು ಒತ್ತಾಯಿಸಿದರು.
ಒಂದು ವೇಳೆ ಶಾಸಕ ಕೊತ್ತೂರು ಮಂಜುನಾಥ್ ಸಾರ್ವಜನಿಕವಾಗಿ  ಬೇಷರತ್ತಾಗಿ ಕ್ಷಮೆಯಾಚಿಸದೆ, ಹೋದರೆ, ಬೋವಿ ಯುವ ವೇದಿಕೆ ವತಿಯಿಂದ  ಜಿಲ್ಲಾ ಮತ್ತು ರಾಜ್ಯದ್ಯಂತ  ಕೋಲಾರ ಶಾಸಕ ಕೊತ್ತೂರು ಮಂಜುನಾಥ್  ನಡೆಯ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಂಡು,  ದೊಡ್ಡ ಪ್ರಮಾಣದಲ್ಲಿ ಹೋರಾಟಗಳನ್ನು ನಡೆಸುವ  ಎಚ್ಚರಿಕೆಯನ್ನು  ನೀಡಿದರು.
 ಭೋವಿ ಸಮುದಾಯದ  ನಿಗಮದ ಸೌಲಭ್ಯಗಳ ವಿತರಣೆಯಲ್ಲಿ ನಿಗಮದ ಅಧ್ಯಕ್ಷರ ಪಾತ್ರವಿಲ್ಲ, ಆದರೂ ಸಹ ಭೋವಿ ಸಮುದಾಯ ನಿಗಮದ ಅಧ್ಯಕ್ಷರನ್ನು ನಿಂದಿಸುವ ಕೆಲಸ ಯಾಕೆ, ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು, ಅದನ್ನು ಬಿಟ್ಟು  ನಿಗಮದ ಅಧ್ಯಕ್ಷರ ಮೇಲೆ ಅವಹೇಳನ ಪದ ಬಳಕೆ ಎಷ್ಟರ ಮಟ್ಟಿಗೆ  ಸರಿಯಾಗಿದೆ ಎನ್ನುವುದನ್ನು  ಯೋಚಿಸಬೇಕು ಎಂದರು.
ಬೋವಿ ಸಮಾಜ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಹಿಂದ ನಾಯಕ ಸಿದ್ದರಾಮಯ್ಯ ಅವರ ಕೈ ಬಲಪಡಿಸಲು ಮಾಜಿ ವಿಧಾನಸಭಾ ಅಧ್ಯಕ್ಷ ರಮೇಶ್ ಕುಮಾರ್, ಸಿ.ಎಂ.ಮುನಿಯಪ್ಪ, ಮುಂತಾದ ನಾಯಕರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಪಕ್ಷದ ಕೈ ಬಲಪಡಿಸಿದೆ, ಈಗ ಈ ರೀತಿಯ ಅವಹೇಳನ ಮಾಡುವ ಪದಗಳು ಗೌರವ ತರುವುದಿಲ್ಲ, ಅಧಿಕಾರಿಗಳು ತಪ್ಪು ಮಾಡಿದ್ರೆ ಅವರ ಮೇಲೆ ಕ್ರಮ ಜರುಗಿಸಲಿ, ಆದರೆ, ನಿಗಮದ ಅಧ್ಯಕ್ಷರನ್ನು ನಿಂದಿಸುವ ಔಚಿತ್ಯ ಏನಿದೆ. ಹಾಗಾಗಿ ಮಾನ್ಯ ಶಾಸಕರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
 ಈ ಸಂದರ್ಭದಲ್ಲಿ ಭೋವಿ  ಯುವ ವೇದಿಕೆ ಮುಖಂಡರಾದ ಶ್ರೀನಾಥ್, ಕಾಶಿನಾಥ್, ಶಿವಕುಮಾರ್, ವೆಂಕಟೇಶ್, ಸುನಿಲ್ ಇದ್ದರು.

Related Post

ಚನ್ನಪಟ್ಟಣ ಉಪ ಚುನಾವಣೆ: ಕಾಂಗ್ರೆಸ್‌ನಿಂದ ನಾಮಪತ್ರ ಸಲ್ಲಿಸಿದ ಯೋಗೇಶ್ವರ್, ಎನ್‌ಡಿಎ ಅಭ್ಯರ್ಥಿಯಾಗಿ ನಿಖಿಲ್
ಕಂದಾಯ ಸುಧಾರಣೆಗಳ ಅಧ್ಯಯನಕ್ಕೆ ಮಿಜೋರಾಂ ಸಚಿವ ಬಿ.ಲಾಲ್‌ಚಿಂಸೋವ ಉತ್ಸುಕತೆ
ಗ್ರಾಮ ಆಡಳಿತ ಅಧಿಕಾರಿ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆವ್ಯವಸ್ಥಿತವಾಗಿ ನಡೆಸಲು ಕ್ರಮ ವಹಿಸಿ- ಅಪರ ಜಿಲ್ಲಾಧಿಕಾರಿ ಮಂಗಳ

Leave a Reply

Your email address will not be published. Required fields are marked *

You missed

error: Content is protected !!