ಕೆಜಿಎಫ್
ಕೋಲಾರ
ತಾಲ್ಲೂಕು ಸುದ್ದಿ
ದೇಶ
ನಮ್ಮ ಕೋಲಾರ
ಪ್ರಪಂಚ
ಬಂಗಾರಪೇಟೆ
ಮಾಲೂರು
ಮುಳಬಾಗಿಲು
ರಾಜಕೀಯ
ರಾಜ್ಯ ಸುದ್ದಿ
ಶ್ರೀನಿವಾಸಪುರ
PLACE YOUR AD HERE AT LOWEST PRICE
ಒಂದು ವರ್ಷದ ಕರುವಿನ ಮೇಲೆ ಸುಂದರಪಾಳ್ಯ ಗ್ರಾಮದ ಆರೋಪಿ ಶಫಿವುಲ್ಲಾ(45) ಅತ್ಯಾಚಾರ ಮಾಡಿ ಪೋಲೀಸರ ಅಥಿತಿಯಾಗಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿ ಜೈಲಿಗೆ ಅಟ್ಟಿರುವ ಘಟನೆ ನಡೆದಿದೆ.
ಸುಂದರಪಾಳ್ಯ ಗ್ರಾಮದಲ್ಲಿ 1 ವರ್ಷದ ಹೆಣ್ನು ಕರುವಿನ ಮೇಲೆ ಅತ್ಯಾಚಾರ ಮಾಡುತ್ತಿದ್ದನ್ನು ಸ್ಥಳೀಯರು ಕಂಡು
ತಕ್ಷಣ ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ಶಫೀವುಲ್ಲಾ ರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದಾರೆ.
ಈ ವೇಳೆ ಭಜರಂಗದಳ, ಆರ್‍ಎಸ್‍ಎಸ್ ಮತ್ತು ಹಿಂದೂಪರ ಸಂಘಟನಾಕಾರರು ಬೇತಮಂಗಲ ಠಾಣೆ ಬಳಿ ಜಮಾಯಿಸಿ ಕಾನೂನಿನ ಅಡಿಯಲ್ಲಿ ಯಾವೆಲ್ಲಾ ಸೆಕ್ಷನ್‍ಗಳು ಇವೆಯೇ ಅದನ್ನೆಲ್ಲಾ ಹಾಕಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಗೋವುಗಳನ್ನು ದೇವರಂತೆ ಪೂಜಿಸುತ್ತೇವೆ. ತಾಯಿಯಂತೆ ಹಾಲು ಕೊಡುವ ದೈವ ಸ್ವರೂಪ ಗೋಮಾತೆಗಳ ಮೇಲೆ ಈ ರೀತಿ ಅತ್ಯಾಚಾರ ಮಾಡಿರುವುದು ಖಂಡನೀಯ, ಮನಷ್ಯರು ಈ ರೀತಿ ಮೂಖ ಪ್ರಾಣಿಗಳಿಗೆ ಮೇವು ನೀಡದೆ, ಹಿಂಸೆ ನೀಡಿ ಹಿನಾಯ ಕೃತ್ಯ ನಡೆಸಿರುವುದು ಇಡೀ ಸಮಾಜ ತಲೆ ತಗ್ಗಿಸುವಂತಾಗಿದೆ.
ಇನ್ನು ಮುಂದೆ ಈ ರೀತಿ ಘಟನೆಗಳು ಮರು ಕಳುಹಿಸದಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಭಜರಂಗದಳದ ತುಳಸೀರಾಮ್, ಬಾಲಚಂದ್ರ, ಓಂ ಸುರೇಶ್, ಸೀನಪ್ಪ, ತುಕಾರಾಮ್ ಪಸ್ಥಿತರಿದ್ದರು.