• Wed. Oct 30th, 2024

PLACE YOUR AD HERE AT LOWEST PRICE

ವಿವಿಧ ಬೇಡಿಕೆಗಳ ಈಡೇರಿಕೆಗಾಗಿ  ಸಮತಾ ಸಂಘರ್ಷ ಸಮಿತಿ ಆಗ್ರಹ 
ಕೋಲಾರ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾ ಸಮತಾ ಸಂಘರ್ಷ ಸಮಿತಿ  ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ನಗರ ಹೊರವಲಯದ ಜಿಲ್ಲಾಡಳಿತ ಭವನದ ಎದುರು ಸೋಮವಾರ ಸಮತಾ ಸಂಘರ್ಷ ಸಮಿತಿ ಕಾರ್ಯಕರ್ತರು ಜಮಾವಣೆಗೊಂಡು ಹೋರಾಟ ನಡೆಸಿದರು.
ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮುಖಂಡರು, ದಲಿತರ ಮೇಲಿನ ದೌರ್ಜನ್ಯಗಳು ಇಂದಿಗೂ ಕಡಿಮೆಯಾಗಿಲ್ಲ. ಸದಾ ಯಾವುದಾದರು ಒಂದು ರೀತಿಯಲ್ಲಿ ದೌರ್ಜನ್ಯಗಳು ನಡೆಯುತ್ತಲೆ ಇದೆ. ಸರ್ಕಾರ ಹೊಸ ಹೊಸ ಕಾನೂನುಗಳು ಜಾರಿಗೆ ತಂದರೂ ಅಟ್ರಾಸಿಟಿ ಪ್ರಕರಣಗಳಲ್ಲಿ ಯಾವುದೇ ಇಳಿಕೆಯಿಲ್ಲ. ಇದು ಹೀಗೆಯೇ ಮುಂದುವರೆದರೆ ದಲಿತರ ಉದ್ದಾರ ಆಗುವುದು ಹೇಗೆ. ದಲಿತ ಜನಾಂಗಕ್ಕೆ ಸೇರಿದ ಜಮೀನುಗಳನ್ನು ಬಲಡ್ಯಾರು ಕಸಿದು ಕೊಳ್ಳುತ್ತಿದ್ದಾರೆ. ದಲಿತರ ಭೂಮಿ ದಲಿತರಿಗೆ ಸೇರುವುದು ಯಾವಾಗ ಎಂದರು.
ದಲಿತ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರಗಳು ನಿರಂತರವಾಗಿವೆ. ಈಗಾಗಲೇ ಅಂತಹ ಪ್ರಕರಣದಲ್ಲಿ ದಾಖಲಾಗಿರುವ ಕೈದಿಗಳಿಗೆ ಕಠಿಣ ಶಿಕ್ಷೆ ನೀಡಬೇಕು. ಹಳ್ಳಿಗಳಲ್ಲಿ ದಲಿತರಿಗೆ ಸ್ಮಶಾನವಿಲ್ಲ. ಇರುವ ಸರ್ಕಾರಿ ಭೂಮಿಗಳು ಒತ್ತುವರಿಗಳಾಗಿವೆ. ಇವುಗಳ ತೆರವು ಯಾವಾಗ ಎಂದು ಪ್ರಶ್ನೆ ಮಾಡಿದರು. ದಲಿತರ ಕಾಲೋನಿಗಳಿಗೆ ಸರಿಯಾದ ರಸ್ತೆಗಳಲ್ಲಿ ಮಣ್ಣಿನ ರಸ್ತೆಗಳೇ ತುಂಬಿಕೊಂಡಿವೆ ಇವುಗಳ ಬದಲಾವಣೆ ಆಗಬೇಕಿದೆ.  ಆದ್ದರಿಂದ ಈ ಕೆಳಕಂಡ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ., 
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕಿನ ಹೊದಲಿ ಗ್ರಾಮದ ಯಶೋದಮ್ಮನ ಮೇಲೆ ಅದೇ ಗ್ರಾಮದ ಸವರ್ಣೀಯ ನಾಗೇಂದ್ರ ಹಾಗೂ ಶಶಿ ಎಂಬುವವರು ಮಾನಭಂಗಕ್ಕೆ ಯತ್ನಿಸಿದ್ದು, ದೂರು ನೀಡಿದ್ದರೂ ಇದುವರೆಗೂ ಆರೋಪಿಗಳನ್ನು ಬಂಧಿಸಿಲ್ಲ, ಕೂಡಲೇ ಅವರನ್ನು ಬಂಧಿಸಬೇಕು. ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕಿನ ಟೇಕಲ್ ಹೋಬಳಿ ಬನಹಳ್ಳಿ ಗ್ರಾಮದ ಸತೀಶ್ ಅದೇ ಗ್ರಾಮದ ದಲಿತ ಸಮುದಾಯದ ಸಾದಪ್ಪನವರಿಗೆ ಜೀವ ಬೆದರಿಕೆ ಹಾಕಿದ್ದು, ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ, ಸಾದಪ್ಪನವರ ಕುಟುಂಬಕ್ಕೆ ರಕ್ಷಣೆ ನೀಡಬೇಕು.

ಕೋಲಾರ ತಾಲ್ಲೂಕಿನ ಕಸಬಾ ಹೋಬಳಿ ಅಮ್ಮೇರಹಳ್ಳಿ ಗ್ರಾಮದ ಸರ್ವೆ ನಂಬರ್ 145ರಲ್ಲಿ 5.27 ಗುಂಟೆ ಸರ್ಕಾರಿ ಜಮೀನು ಒತ್ತುವರಿ ಆಗಿದ್ದು, ಕೂಡಲೇ ತೆರವುಗೊಳಿಸಿ ಸದರಿ ಜಮೀನಿನಲ್ಲಿ  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸ್ಮಶಾನ ಹಾಗೂ ನಿವೇಶನ ರಹಿತ ಕುಟುಂಬಗಳಿಗೆ ನಿವೇಶನ ನೀಡುವುದು. ಬೆಗ್ಲಿಹೊಸಹಳ್ಳಿ ಗ್ರಾಮದ ಸರ್ವೆ.ನಂ. 93/3 ವರೆಗಿನ ರಸ್ತೆ ಒತ್ತುವರಿ ತೆರವುಗೊಳಿಸಬೇಕು. 
 ಮತ್ತಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.
ನಮ್ಮ ಸಮಸ್ಯೆಗಳಿಗೆ ಜಿಲ್ಲಾಡಳಿತ ಸ್ಪಂಧಿಸದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿ, ಜಿಲ್ಲಾಧಿಕಾರಿ ಆಕ್ರಂ ಪಾಷಾ ಅವರಿಗೆ ಎಲ್ಲಾ ಮುಖಂಡರು ಸೇರಿ ಮನವಿ ನೀಡಿದರು. ಐತರಾಸನಹಳ್ಳಿ ಸಂಜೀವಪ್ಪ ಮತ್ತು ಸಂಗಡಿಗರು ಕ್ರಾಂತಿ ಗೀತೆಗಳು ಹಾಡಿದರು.
ಈ ಸಂದರ್ಭದಲ್ಲಿ ಸಂಘದ ಗೌರವ ಅಧ್ಯಕ್ಷರಾದ ಅಂಬೇಡ್ಕರ್ ನಗರ ಮುನಿಯಪ್ಪ, ಅಧ್ಯಕ್ಷರಾದ ಮಲ್ಲಸಂದ್ರ ನಾಗರಾಜ್, ಉಪಾಧ್ಯಕ್ಷರಾದ ಬೀರಮಾನಹಳ್ಳಿ ವಿಜಯ್ ಕುಮಾರ್, ಕಾರ್ಯದರ್ಶಿ ಕೆಂಬೋಡಿ ರವೀಂದ್ರ ಕುಮಾರ್, ಖಜಾಂಚಿ ಅಬ್ಬಣಿ ನಾಗರಾಜ್, ಸದಸ್ಯರುಗಳಾದ, ಅಮೆರಹಳ್ಳಿ ರವಿ,  ಬೀರಮಾನಹಳ್ಳಿ ಅಂಜಿನಪ್ಪ, ಸೀಪೂರು ದೇವರಾಜ್, ಪಾಡಿಗಾನಹಳ್ಳಿ ರಾಮಾಂಜಿನಪ್ಪ, ಕೋಟಿಗಾನಹಳ್ಳಿ ರೆಡ್ಡಪ್ಪ, ಕೂಟೇರಿ ವೆಂಕಟಸ್ವಾಮಿ, ನಡುಪಲ್ಲಿ ವೆಂಕಟೇಶ್, ಹೊನ್ನೇನಹಳ್ಳಿ ಮಂಜುನಾಥ್, ಭಟ್ರಹಳ್ಳಿ ಬಾಬು, ತೆರ್ನಹಳ್ಳಿ ರಮೇಶ್ ಕಿಲ್ಲರ್  ಸೇರಿದಂತೆ ಇತರರು ಇದ್ದರು.

Related Post

ದೇವನಹಳ್ಳಿಯಿಂದ ಹೊಸೂರು ವರಗೆ 3190 ಕೋಟಿ ವೆಚ್ಚದ ರಸ್ತೆ ಕಾಮಗಾರಿಗೆ ಅನುಮೋದನೆ: ಕೊತ್ತೂರು ಮಂಜುನಾಥ್
ಚನ್ನಪಟ್ಟಣ ಉಪ ಚುನಾವಣೆ: ಕಾಂಗ್ರೆಸ್‌ನಿಂದ ನಾಮಪತ್ರ ಸಲ್ಲಿಸಿದ ಯೋಗೇಶ್ವರ್, ಎನ್‌ಡಿಎ ಅಭ್ಯರ್ಥಿಯಾಗಿ ನಿಖಿಲ್
ಕಂದಾಯ ಸುಧಾರಣೆಗಳ ಅಧ್ಯಯನಕ್ಕೆ ಮಿಜೋರಾಂ ಸಚಿವ ಬಿ.ಲಾಲ್‌ಚಿಂಸೋವ ಉತ್ಸುಕತೆ

Leave a Reply

Your email address will not be published. Required fields are marked *

You missed

error: Content is protected !!