PLACE YOUR AD HERE AT LOWEST PRICE
ಕೆಜಿಎಫ್:ಬೇತಮಂಗಲ ಗ್ರಾಮದಲ್ಲಿ ನಿತ್ಯ ಬೀದಿ ಬದಿ ಅಂಗಡಿಗಳು ಹಾಗೂ ಸಂತೆ ಮೈದಾನದಲ್ಲಿ ವ್ಯಾಪಾರ ಮಾಡುವ ಅಂಗಡಿಗಳಿಂದ ಸುಂಕ ವಸೂಲಿಗೆ ಬಹಿರಂಗ ಹರಾಜಿನಲ್ಲಿ 3.92ಲಕ್ಷ ರೂಗಳಿಗೆ ಗುತ್ತಿಗೆ ನೀಡಲಾಗಿದೆ.
ಬೇತಮಂಗಲ ಗ್ರಾಮದ ಗ್ರಾಪಂ ಅವರಣದಲ್ಲಿ ಗ್ರಾಪಂ ಅಧ್ಯಕ್ಷೆ ಮಮತಗಣೇಶ್ ಅಧ್ಯಕ್ಷತೆಯಲ್ಲಿ ನಡೆದ ಬಹಿರಂಗ ಹರಾಜಿನಲ್ಲಿ ಗ್ರಾಪಂ ಸದಸ್ಯರು, ಮುಖಂಡರು ಒಳಗೊಂಡು ಹರಾಜುದಾರರು ಭಾಗವಹಿಸಿ ಹರಾಜು ಕರೆಯಲಾಯಿತ್ತು.
ಗ್ರಾಮದಲ್ಲಿ 2023-24ರವರೆಗೂ ಬೀದಿ ಬದಿ ಅಂಗಡಿಗಳು ಹಾಗೂ ಸಂತೆ ಮೈದಾನದಲ್ಲಿ ಅಂಗಡಿಗಳಿಂದ ಸುಂಕ ವಸೂಲಿ ಮಾಡಲು 1 ವರ್ಷದ ಅವಧಿಗೆ ಶ್ರೀರಾಮ್ ಎಂಬುವವರು 3.92.000ರೂಗಳಿಗೆ ಬಹಿರಂಗ ಹರಾಜಿನಲ್ಲಿ ಗುತ್ತಿಗೆ ಪಡೆದರು.
ಗ್ರಾಮದಲ್ಲಿ ಕುಡಿಯುವ ನೀರು ಸರಬರಾಜು ಮಾಡುವ ಕೊಳವೆ ಬಾವಿಗಳ ನಿರ್ವಹಣೆಗೆ 1 ವರ್ಷದ ಅವಧಿಗೆ 6ಲಕ್ಷಕ್ಕೆ ಗುತ್ತಿಗೆ ನೀಡಲಾಗಿದೆ. ಈ ಬಹಿರಂಗ ಹರಾಜಿನಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಂಜುನಾಥ್, ಕಾರ್ಯದರ್ಶಿ ವೆಂಕಟೇಶ್, ಉಪಾಧ್ಯಕ್ಷ ನಂದೀಶ್, ಗ್ರಾಪಂ ಸದಸ್ಯರು ಇದ್ದರು.