• Thu. Sep 28th, 2023

PLACE YOUR AD HERE AT LOWEST PRICE

By-ಪ್ರೊ.ಚಂದ್ರಶೇಖರ ನೆಂಗಲಿ.  

 [ ರಾಗಿ ಶಾವಿಗೆ + ಕಾಯಿ ಹಾಲು + ಅವರೆಬೇಳೆ ಪಪ್ಪು + ಹುಚ್ಚೆಳ್ಳು ಪುಡಿ + ತುಪ್ಪ ]

ಇದು ನನ್ನ ಬಾಲ್ಯದ ಅಚ್ಚುಮೆಚ್ಚಿನ ಸಿಹಿ ಖಾದ್ಯ. ನಮ್ಮ ಅಜ್ಜಿ ಮಾಡುತ್ತಿದ್ದ ಪಾರಂಪರಿಕ ಕಾಂಬಿನೇಷನ್ ಮೇಲೆ ಕೊಟ್ಟಿದ್ದೇನೆ. ಮೇಲ್ಕಂಡ ಐದೂ ವಸ್ತುಗಳನ್ನು ಕಲಸಿಕೊಂಡು ತಿಂದರೆ ಅದರ ಮಜಾನೇ ಮಜಾ!

ಶಾವಿಗೆ ಮಣೆಯ ಒರಳಿನಲ್ಲಿ ಬೇಯಿಸಿ ತೊಳಸಿದ ರಾಗಿ ಹಿಟ್ಟಿನ ಮುದ್ದೆ ಇಟ್ಟು ನಾನೇ ಒತ್ತುತ್ತಿದ್ದೆನು. ಕೊನೆಯಲ್ಲಿ ಉಳಿದ ಹಿಟ್ಟನ್ನು ನನಗೆ ಹಾಗೇ ತಿನ್ನಲು ಕೊಡುತ್ತಿದ್ದರು. ಏಕೆಂದರೆ ಶಾವಿಗೆ ಒತ್ತಿದವರಿಗೆ ಇದನ್ನು ತಿನ್ನುವುದರಿಂದ ಎದೆನೋವು ಬರುವುದಿಲ್ಲ ಎನ್ನುತ್ತಿದ್ದರು.

ಹೊಸರಾಗಿ ಕೊಯ್ಲಿನ ಸಂದರ್ಭದಲ್ಲಿ ಕೆಂಪುರಾಗಿ ಹಿಟ್ಟು ಬಳಸಿ ಮಾಡುತ್ತಿದ್ದ ಶಾಸ್ತಾಲು ಅಥವಾ ಶಾವಿಗೆ ಎಂದರೆ ನಮಗೆಲ್ಲಾ ತುಂಬಾ ಇಷ್ಟ. ಇದರ ಗಮ್ಮನೆ ಗಂಧ ನನ್ನ ಮನಸ್ಸಿನಲ್ಲಿ ಈಗಲೂ ಉಳಿದುಬಿಟ್ಟಿದೆ.

ಈಗ ನನ್ನ ಮನೆಯಲ್ಲಿ ಶಾವಿಗೆ ಮಣೆಯೂ ಇಲ್ಲ. ಇದನ್ನು ಒತ್ತಿ ತಿನ್ನುವ ಅಭ್ಯಾಸವೂ ಇಲ್ಲ. ಕೆಲವೆಲ್ಲಾ ಚಿತ್ತಭಿತ್ತಿಯ ಸುಮಧುರ ನೆನಪುಗಳಾಗಿ ಉಳಿಯುವುದೇ ಚೆನ್ನ ! ನಾನು ನೋಡದ ತಾಜ್ ಮಹಲ್ ನಿಜದ ತಾಜ್ ಮಹಲ್ ಗಿಂತಲೂ ಮಿನ್ನ (=ಮಿಗಿಲು ) ಎಂಬಂತೆ.

ಪ್ರೊ.ಚಂದ್ರಶೇಖರ ನೆಂಗಲಿ.  

Leave a Reply

Your email address will not be published. Required fields are marked *

error: Content is protected !!