• Tue. Oct 22nd, 2024

PLACE YOUR AD HERE AT LOWEST PRICE

ಕೋಲಾರ: ಮುಡಾ ಅಧ್ಯಕ್ಷ ಮರೀಗೌಡ ರಾಜೀನಾಮೆ ನೀಡಿದ್ದಾರೆ. ಆದರೆ,‌ ರಾಜೀನಾಮೆ ನೀಡಲು ಸಿದ್ದರಾಮಯ್ಯ ಭಂಡತನ ಪ್ರದರ್ಶಿಸುತ್ತಿದ್ದಾರೆ, ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಆಗ್ರಹಿಸಿದರು. 
ನಗರ ಹೊರವಲಯದ ಬಿಜೆಪಿ ‌ಕಚೇರಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ‌ಮಾತನಾಡಿ,  ಮುಡಾದಲ್ಲಿ 5 ಸಾವಿರ ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ. ಮುಡಾ ಕಚೇರಿಯಲ್ಲಿ ಇ.ಡಿ ದಾಳಿ ನಡೆದಿದ್ದು, ಸರಿಯಾಗಿ ದಾಖಲೆ‌ ನೀಡುತ್ತಿಲ್ಲ. ತನಿಖೆಗೆ ಅಡ್ಡಿಪಡಿಸುತ್ತಿರುವ ಮುಖ್ಯಮಂತ್ರಿ ‌ಅಧಿಕಾರದಲ್ಲಿ ಇರಬಾರದು  ರಾಜ್ಯ ಸರ್ಕಾರದ ಎಲ್ಲ ನಿಗಮಗಳಲ್ಲಿ ಹಗರಣ ನಡೆದಿದ್ದು ತನಿಖೆ ನಡೆಸಬೇಕು. ಮುಡಾ ಹಗರಣವನ್ನು ‌ ಸಿಬಿಐಗೆ ವಹಿಸಬೇಕು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
‘ಭ್ರಷ್ಟ ಕಾಂಗ್ರೆಸ್ ಸರ್ಕಾರ ಇದು. ಕೇಂದ್ರ ಸರ್ಕಾರ ಇ.ಡಿ, ಸಿಬಿಐ ಯನ್ನು ದುರ್ಬಳಕೆ ‌ಮಾಡುತ್ತಿದೆ ಎಂಬುದಾಗಿ ಸಚಿವರು ಟೀಕಿಸುತ್ತಿದ್ದಾರೆ. ಈ ರೀತಿ ಸಿದ್ದರಾಮಯ್ಯ ಹೇಳಿಸುತ್ತಿದ್ದಾರೆ’ ಎಂದು ಆರೋಪಿಸಿದರು. ‘ಮುಡಾ ನಿವೇಶನನಕ್ಕೂ ತಮಗೂ ಸಂಬಂಧ ಇಲ್ಲವೆಂದ ಸಿದ್ದರಾಮಯ್ಯ 65  ಕೋಟಿ ರೂಪಾಯಿ ಕೊಟ್ಟರೆ ಬಿಟ್ಟುಕೊಡುವುದಾಗಿ ಹೇಳಿದ್ದು ಏಕೆ, ದಾಖಲೆಗಳನ್ನು ವೈಟ್ನರ್ ಹಾಕಿ ತಿದ್ದುಪಡಿ ಮಾಡಿದ್ದು ಯಾರು’  ಎಂದು ಪ್ರಶ್ನಿಸಿದರು. ‘ಪ್ರಾಸಿಕ್ಯೂಷನ್ ಅನುಮತಿ ನೀಡಿದ ರಾಜ್ಯಪಾಲರ ಕ್ರಮ ಸರಿ‌ ಇದೆ ಎಂದು ನ್ಯಾಯಾಲಯ ಕೂಡ ಹೇಳಿದೆ. ಭ್ರಷ್ಟಾಚಾರ ಮಾಡಿಲ್ಲ ಎನ್ನುವುದಾದರೆ ನಿವೇಶನ ಏಕೆ ವಾಪಸ್ ಮಾಡಿದ್ದೀರಿ’ ಎಂದು‌ ಕೇಳಿದರು.
‘ಇದು ಇಂಡಿಯನ್‌ ನ್ಯಾಷನಲ್‌ ಕರಪ್ಷನ್ ಪಾರ್ಟಿ. 60 ವರ್ಷ ದಾಳಿ ಮಾಡಿದ್ದರಲ್ಲಿ ಕಾಂಗ್ರೆಸ್ ಪಾತ್ರವಿತ್ತೇ’ ಎಂದು ತಿರುಗೇಟು ನೀಡಿದರು.’ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರರುವ ಹಗರಣದ ಹಿಂದಿನ ರೂವಾರಿ ಯಾರು? 187 ಕೋಟಿ ಅಲ್ಲ; 87 ಕೋಟಿ ಎಂದು ಮುಖ್ಯಮಂತ್ರಿ ವಿಧಾನಸಭೆ‌ ಅಧಿವೇಶನದಲ್ಲಿ ಹೇಳಲಿಲ್ಲವೇ’ ಎಂದರು. 
ಜಿಲ್ಲಾ ಬಿಜೆಪಿ ವಕ್ತಾರ ಎಸ್. ಬಿ, ಮುನಿವೆಂಕಟಪ್ಪ, ಕುಡಾ ಮಾಜಿ ಅಧ್ಯಕ್ಷ ವಿಜಯಕುಮಾರ್, ಮಾದ್ಯಮ ಸಹ ಸಂಚಾಲಕ ಕೆಂಬೋಡಿ ನಾರಾಯಣಸ್ವಾಮಿ ಇದ್ದರು.
ಬಾಕ್ಸ್ ಸುದ್ದಿ :
ನಸೀರ್ ಅಹ್ಮದ್ ದೊಡ್ಡ ವ್ಯಕ್ತಿ ‌ಅಲ್ಲ. ಔಟ್ ಡೇಟೆಡ್ ಎಂದು ಹೇಳಿದ್ದಾರೆ. “ನಾನು ನಿಮ್ಮಂತೆ ನಾಮಿನೇಟೆಡ್‌ ಅಲ್ಲ. ನನಗೆ ಏಳು ಲಕ್ಷ ‌ಜನ ಮತ ಹಾಕಿದ್ದಾರೆ. ಕೋಲಾರಕ್ಕೆ ನಿಮ್ಮ ಕೊಡುಗೆ‌ ಏನು? ಕಾನೂನು ಬಾಹಿರವಾಗಿ ರೈಲ್ವೆ ಇಲಾಖೆ ಜಾಗದಲ್ಲಿ ಗಾರ್ಮೆಂಟ್ಸ್ ಫ್ಯಾಕ್ಟರಿ ಕಟ್ಟಿದ್ದೀರಿ. ಅಮಾನತ್ ಬ್ಯಾಂಕ್ ನಲ್ಲಿ ಎಷ್ಟು ಕೋಟಿ ಗುಳುಂ ಮಾಡಿದ್ದೀರಾ, ಕೋಲಾರ ಜನತೆಗೆ ಎಷ್ಟು ಕೋಟಿ ಮೋಸ ಮಾಡಿದ್ದೀರಿ ಎಲ್ಲಾ ದಾಖಲೆಗಳು ನನ್ನ ಬಳಿ ಇದೆ. 
ನಿಮ್ಮ ಬಗ್ಗೆ ಹೇಳುವುದಕ್ಕೆ ಬಹಳ ಇದೆ, ೨೦೨೮ಕ್ಕೆ‌ ನೋಡೋಣ. ಯಾರು ಔಟ್ ಡೇಟೆಡ್ ಎಂಬುದು ಗೊತ್ತಾಗುತ್ತದೆ. ಸ್ವಜನಪಕ್ಷಪಾತಿ ನೀವು. ಕೋಲಾರದ‌ ಮುಸ್ಲಿಮರ ಬಡಾವಣೆಗೆ ಬೀದಿದೀಪ‌ ಕೊಡುವ ಯೋಗ್ಯತೆ ಇಲ್ಲ. ಮುಂದಿನ ದಿನಗಳಲ್ಲಿ ತಮ್ಮ ಬಗ್ಗೆ ಹೇಳುತ್ತೇನೆ’ 
ಎಸ್. ಮುನಿಸ್ವಾಮಿ, ಮಾಜಿ ಸಂಸದರು, ಕೋಲಾರ.

Related Post

ನಾವು ಆಸೆಗಳಿಗೆ ಮಿತಿಯಿಲ್ಲದೆ ಬದುಕುತ್ತೇವೆ,ಸಮಾಜಕ್ಕೆ ಒಂದಷ್ಟು ಕೊಡುಗೆಯಾಗಿ ನೀಡಿದಾಗ ನಮ್ಮ ಜನ್ಮ ಸಾರ್ಥಕವಾಗುತ್ತದೆ: ಶಿಕ್ಷಕ ಕೆ.ಹೆಚ್.ಸಂಪತ್ ಕುಮಾರ್
ಮಹರ್ಷಿ ವಾಲ್ಮೀಕಿ ಜೀವನ ಚರಿತ್ರೆ ಪ್ರತಿಯೊಬ್ಬರೂ ತಿಳಿದುಕೊಳ್ಳುವ ಅಗತ್ಯವಿದೆ: ನರಸಿಂಹಯ್ಯ 
ಒಂದು ವರ್ಗಕ್ಕೆ ಸೀಮಿತವಲ್ಲದ ವಾಲ್ಮೀಕಿ, ಎಲ್ಲಾ ಸಮುದಾಯಗಳಿಗೆ ಆದರ್ಶ: ಬೈರತಿ ಸುರೇಶ್

Leave a Reply

Your email address will not be published. Required fields are marked *

You missed

error: Content is protected !!