• Sat. Jul 27th, 2024

ರಾಜ್ಯ ಸುದ್ದಿ

  • Home
  • ಕೋಲಾರ ಜಿಲ್ಲೆಯಲ್ಲಿ ನಿಧಾನ ವಿಷವಾಗುತ್ತಿರುವ ನೀರು !

ಕೋಲಾರ ಜಿಲ್ಲೆಯಲ್ಲಿ ನಿಧಾನ ವಿಷವಾಗುತ್ತಿರುವ ನೀರು !

-ಕೆ.ಎಸ್.ಗಣೇಶ್ ಕೋಲಾರ: ಹಲ್ಲು ಮೂಳೆಗಳ ಸವೆತ, ಕೀಲು ಮೊಣಕಾಲು ನೋವು, ಸವೆತ, ಹೃದಯ ಕಾಯಿಲೆಗಳಿಂದ ಹಠಾತ್ ಮರಣ, ಮೂತ್ರಪಿಂಡ ವೈಫಲ್ಯ, ಚರ್ಮ ವ್ಯಾದಿಗಳು, ನಿಯಂತ್ರಣಕ್ಕೆ ಸಿಗದ ಮಧುಮೇಹ, ಹಾರ್ಮೋನುಗಳಲ್ಲಿ ಏರುಪೇರು, ಥೈರಾಯ್ಡ್, ಸಂತಾನೋತ್ಪತ್ತಿ ಸಮಸ್ಯೆಗಳು, ಕಣ್ಣಿನ ಪೊರೆ, ಜೀರ್ಣಾಂಗ ಸಮಸ್ಯೆ ಹೀಗೆ ಜಿಲ್ಲೆಯ ಜನರು ಅನುಭವಿಸುತ್ತಿರುವ ನಾನಾ ಕಾಯಿಲೆಗಳಿಗೆ ಕುಡಿಯುವ ನೀರೂ ಕಾರಣ ಎಂಬ ಅಚ್ಚರಿಯ ಅಂಶ ಸಂಶೋಧನೆಯಿಂದ ಹೊರ ಬಿದ್ದಿದೆ. ಪ್ಲೋರೈಡ್  ಮಿಶ್ರಿತ ನೀರನ್ನು ನಿರಂತರವಾಗಿ ಸೇವಿಸುತ್ತಿರುವುರಿಂದ ಕೋಲಾರ ಜಿಲ್ಲೆಯ ಜನರು ಎದುರಿಸುತ್ತಿರುವ ಅನಾರೋಗ್ಯ ಸಮಸ್ಯೆಗಳ ಕುರಿತು ಶ್ರೀದೇವರಾಜ್ ಅರಸ್ ವೈದ್ಯಕೀಯ ಮಹಾವಿದ್ಯಾಲಯ ಜೀವ ರಸಾಯನ ಶಾಸ್ತ್ರ ವಿಭಾಗದ ಫ್ಲೋರೋಸಿಸ್ ರೀಸರ್ಚ್ ಅಂಡ್ ರೆಫೆರಲ್ ಲ್ಯಾಬ್  ವೈದ್ಯರು ಮತ್ತು ವಿಜ್ಞಾನಿಗಳನ್ನು ಒಳಗೊಂಡ ತಂಡ ಆಳವಾದ ಸಂಶೋಧನೆ ನಡೆಸುತ್ತಿದೆ. ಫ್ಲೋರೋಸಿಸ್ ಇತಿಹಾಸ: ಅಮೇರಿಕ ರಾಷ್ಟ್ರದ ಕೊಲೊರಾಡೋದಲ್ಲಿ, 1901 ರಲ್ಲಿ ವೈದ್ಯ ಕೆ.ಮೆಕ್ಕೆ ಮಕ್ಕಳ ಹಲ್ಲುಗಳ ಮೇಲೆ ಹಳದಿ ಕಲೆಗಳನ್ನು ಪರೀಕ್ಷಿಸಿ ಇದು ನೀರಿನ ಸರಬರಾಜಿನಲ್ಲಿ ಫ್ಲೋರೈಡ್ ಹೆಚ್ಚಿನ ಸಾಂದ್ರತೆಯೊಂದಿಗೆ ಸಂಬಂಧಿಸಿದೆ ಎಂದು ದೃಡೀಕರಿಸುತ್ತಾರೆ. ಹಲವು ಸಂಶೋಧನೆಗಳು ಮತ್ತು ಪ್ರಯೋಗಗಳಿಂದ ಹಲ್ಲುಗಳು ಹಳದಿಯಾಗಲು ಕಾರಣ ಫ್ಲೋರೈಡ್‌ನ ಅಕ ಸೇವನೆ ಎಂದು ಅರಿವಾಗುತ್ತದೆ. ಹಲ್ಲಿನ ಕೊಳೆತವನ್ನು ರಕ್ಷಿಸುವಲ್ಲಿ ಫ್ಲೋರೈಡ್ ಪ್ರಮುಖ ಪಾತ್ರವಹಿಸುತ್ತದೆ ಇಂಗ್ಲೆಂಡ್ ಸರ್ಕಾರವು 1970 ರ ದಶಕದಲ್ಲಿ ನೀರಿನ ಡೀಫ್ಲೋರೈಡೀಕರಣ ತಂತ್ರವನ್ನು ಪ್ರಾರಂಭಿಸಿತು, ಅಲ್ಲಿ ಫ್ಲೋರೈಡ್ ಅಲ್ಲದ ಪ್ರದೇಶಗಳಿಗೆ ಸರಬರಾಜು ಮಾಡುವ ಕುಡಿಯುವ ನೀರಿಗೆ ಕಡಿಮೆ ಪ್ರಮಾಣದಲ್ಲಿ ಫ್ಲೋರೈಡ್ ಅನ್ನು ಬೆರಸಲಾಗುತ್ತಿತ್ತು. ನಂತರ ದಂತ ವೈದ್ಯರು ಸಾಮಾನ್ಯ ಟೂತ್‌ಪೇಸ್ಟ್‌ನಲ್ಲಿ ಫ್ಲೋರೈಡ್ ಅನ್ನು ಸೂಕ್ತ ಪ್ರಮಾಣದಲ್ಲಿ ಸೇರಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಿದರು. ಭಾರತದಲ್ಲಿ, 20 ನೇ ಶತಮಾನದವರೆಗೆ ಜನರು ಕುಡಿಯುವ, ಅಡುಗೆ ಮತ್ತು ಇತರ ಉಪಯುಕ್ತತೆಗಳಿಗಾಗಿ ಬಾವಿ ನೀರನ್ನು ಹೆಚ್ಚಾಗಿ ಬಳಸುತ್ತಿದ್ದರು. ಕ್ರಮೇಣ ಕೊಳವೆ ಬಾವಿಗಳಿಗೆ ಅವಲಂಬಿತರಾದರು. ಪ್ರಾರಂಭದಲ್ಲಿ ಇದರಿಂದ ಕಾಲರದಂತ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುವುದು ಎಂದು ವಿಶ್ಲೇಷಿಸಿದರು. ಆದರೆ ಕೊಳವೆ ಬಾವಿಗಳಿಂದ  ನೀರಿನ ಮಟ್ಟ ಕೆಳಗೆ ಹೋದಷ್ಟು ಇತರೆ ತೊಂದರೆಗಳು ಪ್ರಾರಂಭವಾದವು. ಅದರಲ್ಲಿ ಫ್ಲೋರೋಸಿಸ್ ಸಹ ಒಂದು. ಫ್ಲೋರೈಡೀಕರಣವು ಸ್ವಾಭಾವಿಕವಾಗಿ ಭೂಮಿಯ ಒಳಪದರದಲ್ಲಿ  ಸಂಭವಿಸಿರುವುದರಿಂದ, ಈ ನೀರಿನಲ್ಲಿನ ಫ್ಲೋರೈಡಿನ ನಿರ್ಮೂಲನೆ ಅಸಾಧ್ಯವಾಯಿತು. ಅಪಾಯಕಾರಿ ಮಟ್ಟ ವಿಶ್ವ ಆರೋಗ್ಯ ಸಂಸ್ಥೆಯು ವ್ಯಾಖ್ಯಾನಿಸಿದ ಹಾಗೆ ಕುಡಿಯುವ ನೀರಿನಲ್ಲಿ ಫ್ಲೋರೈಡ್‌ನ ಮಿತಿ 1.5 ಪಿಪಿಎಂ ವರೆಗೂ ಇರಬಹುದು. ಕರ್ನಾಟಕದ ಕೋಲಾರ ಜಿಲ್ಲೆಯಲ್ಲಿ, ಗರಿಷ್ಠ ದಾಖಲಾದ ನೀರಿನ ಫ್ಲೋರೈಡ್ ಮಟ್ಟವು 3.38 ಪಿಪಿಎಂಗೂ ಅಧಿಕವಾಗಿದೆ, ಇದನ್ನು ಹೆಚ್ಚುವರಿ ಫ್ಲೋರೈಡ್ ಎಂದು ಪರಿಗಣಿಸಲಾಗುತ್ತದೆ. ಹೀಗೆ ಫ್ಲೋರೈಡ್‌ಗೆ ತುತ್ತಾದ ಜನರು  ಫ್ಲೋರೋಸಿಸ್ ಎಂಬ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಬಹು ವಿವಿಧ ಆನಾರೋಗ್ಯ ಸಮಸ್ಯೆಗಳಿಂದ ನರಳುತ್ತಿರುವುದು ಸಂಶೋಧನೆಯಿಂದ ಬಹಿರಂಗವಾಗಿದೆ. ನೀರು – ಆಹಾರ ಫ್ಲೋರೈಡ್ ನೈಸರ್ಗಿಕವಾಗಿ ಫ್ಲೋರಿನ್ ಅನಿಲವಾಗಿ ಪ್ರಕಟವಾಗುತ್ತದೆ.ಇದು ಭೂಮಿಯ ಹೊರಪದರದಲ್ಲಿ 13 ನೇಅಂಶವಾಗಿ ಅತ್ಯಂತ ಹೇರಳವಾಗಿರುತ್ತದೆ. ಇದು ನೀರು, ಆಹಾರ ಮತ್ತು ಪಾನೀಯಗಳಲ್ಲಿ ಕಂಡುಬರುತ್ತದೆ. ಜನರು ಸೇವಿಸುವ ಹೆಚ್ಚಿನ…

‘ಒಂದು ದೇಶ ಒಂದು ಚುನಾವಣೆ, ನೀಟ್‌ ಪರೀಕ್ಷೆ’ ವಿರುದ್ದ ನಿರ್ಣಯ ಅಂಗೀಕರಿಸಿದ ರಾಜ್ಯ ಸರ್ಕಾರ

ನೀಟ್ ಪರೀಕ್ಷೆ ಹಾಗೂ ಕೇಂದ್ರ ಸರ್ಕಾರದ ಒಂದು ದೇಶ, ಒಂದು ಚುನಾವಣೆ ವಿರೋಧಿಸಿ ಕರ್ನಾಟಕ ಸರ್ಕಾರ ವಿಧಾನಸಭೆಯಲ್ಲಿ ನಿರ್ಣಯ ಮಂಡಿಸಿದ್ದು, ವಿಧಾನಸಭೆ ಮತ್ತು ವಿಧಾನ ಪರಿಷತ್‌ ಅದನ್ನು ಅಂಗೀಕರಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಜುಲೈ 22ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ…

ಕೆಜಿಎಫ್ ನಗರಾಭಿವೃದ್ದಿ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರಾಗಿ ಜಿ.ಗೋಪಾಲರೆಡ್ಡಿ ನೇಮಕ

ಕೆಜಿಎಫ್ ನಗರಾಭಿವೃದ್ದಿ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರಾಗಿ ಜಿ.ಗೋಪಾಲರೆಡ್ಡಿ ನೇಮಕ ಕೋಲಾರ,ಜುಲೈ.೨೩ : ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡ ದಾಸರಹೊಸಹಳ್ಳಿಯ ಜಿ.ಗೋಪಾಲರೆಡ್ಡಿ ಅವರನ್ನು ಕರ್ನಾಟಕ ನಗರಾಭಿವೃದ್ದಿ ಪ್ರಾಧಿಕಾರಗಳ ಕಾಯ್ದೆ ೧೯೮೭ರ ಕಲಂ(ಎ)ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ತಕ್ಷಣದಿಂದ ಜಾರಿಗೆ…

ನಟನೆಯಲ್ಲಿ ಗೆದ್ದ ಗೀತಾ ರಾಘವೇಂದ್ರ, ರಕ್ಕಸಿಯನ್ನು ಪ್ರೇಮ ಮಯಿ ಯಾಗಿಸಿದ ಬೇಲೂರು ರಘುನಂದನ್ ಜನಮನ ಗೆದ್ದ ಪ್ರೇಮಮಯಿ ಹಿಡಿಂಬೆ.

ನಟನೆಯಲ್ಲಿ ಗೆದ್ದ ಗೀತಾ ರಾಘವೇಂದ್ರ, ರಕ್ಕಸಿಯನ್ನು ಪ್ರೇಮ ಮಯಿ ಯಾಗಿಸಿದ ಬೇಲೂರು ರಘುನಂದನ್ ಜನಮನ ಗೆದ್ದ ಪ್ರೇಮಮಯಿ ಹಿಡಿಂಬೆ. ಪ್ರೇಮ ಮಯಿ ಹಿಡಿಂಬೆ*” ನಾಟಕದಲ್ಲಿ ರಂಗವಿಜಯ ತಂಡದ ಗೀತಾ ರಾಘವೇಂದ್ರ ಅವರ ಏಕವ್ಯಕ್ತಿ ಅಭಿನಯ ರಾಕ್ಷಸರಲ್ಲೂ ಮನುಷ್ಯರಿಗಿಂತ ಮಿಗಿಲಾದ ಸದ್ಗುಣಗಳು, ಪ್ರೀತಿ,…

ರಾಜ್ಯಕ್ಕೆ ಚೊಂಬು ಕೊಟ್ಟ ನಿರ್ಮಲಾ ಸೀತಾರಾಮನ್:ಕೇಂದ್ರ ಬಜೆಟ್ ಬಗ್ಗೆ ಸಿಎಂ ಸಿದ್ದರಾಮಯ್ಯ ಟೀಕೆ.

ಪ್ರಧಾನ ಮಂತ್ರಿಗಳ ಕುರ್ಚಿ ಉಳಿಸಿಕೊಳ್ಳಲು ಆಂಧ್ರ ಮತ್ತು ಬಿಹಾರಕ್ಕೆ ವಿಶೇಷ ಅನುದಾನ ಕೊಟ್ಟಿದ್ದಾರೆ. ನಿರ್ಮಲಾ ಸೀತಾರಾಮನ್ ರಾಜ್ಯಕ್ಕೆ ಚೊಂಬು ಕೊಟ್ಟಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದರು. ಕೇಂದ್ರ ಬಜೆಟ್ ಕುರಿತು ಪ್ರತಿಕ್ರಿಯಿಸಲು ಸುದ್ದಿಗೋಷ್ಠಿ ಕರೆದು ಮಾತನಾಡಿದ ಅವರು, “ಕರ್ನಾಟಕದಿಂದ ಆರಿಸಿ ಹೋಗಿರುವ…

ಸಿಎಂ ಸಿದ್ದರಾಮಯ್ಯ ಮನೆಗೆ ಹೋಗುವ ಕಾಲ ಬಂದಿದೆ:ಛಲವಾದಿ ನಾರಾಯನಸ್ವಾಮಿ

ಸಿಎಂ ಸಿದ್ದರಾಮಯ್ಯ ಅವರನ್ನು ರಕ್ಷಿಸಲು ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್ ನಾಯಕರೂ ಏನೂ ಮಾಡಲಾಗದು. ಅವರು ಮನೆಗೆ ಹೋಗುವ ಕಾಲ ಬಂದಿದೆ ಎಂದು ವಿಧಾನ ಪರಿಷತ್ತಿನ ನೂತನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು. ಹೊಸ ಹುದ್ದೆಗೆ ನೇಮಕಗೊಂಡ ಬಳಿಕ ಮಲ್ಲೇಶ್ವರದ ಬಿಜೆಪಿ…

ಕರ್ನಾಟಕ ಯುವ ಮುನ್ನಡೆ ತಂಡದಿ0ದ ಪರಿಸರ ನ್ಯಾಯಕ್ಕಾಗಿ ಯುವ ಧ್ವನಿ ಘೋಷಣೆಯಡಿ “ಜೀವನದಿ ಪಾಲಾರ್ ಗಾಗಿ ನಮ್ಮ ಹೆಜ್ಜೆ” ಅರಿವಿನ ಜಾಥಾ ಯಶಸ್ವಿ:

ಕರ್ನಾಟಕ ಯುವ ಮುನ್ನಡೆ ತಂಡದಿ0ದ ಪರಿಸರ ನ್ಯಾಯಕ್ಕಾಗಿ ಯುವ ಧ್ವನಿ ಘೋಷಣೆಯಡಿ “ಜೀವನದಿ ಪಾಲಾರ್ ಗಾಗಿ ನಮ್ಮ ಹೆಜ್ಜೆ” ಅರಿವಿನ ಜಾಥಾ ಯಶಸ್ವಿ: ಕೋಲಾರ : ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ೪ ಸಾವಿರಕ್ಕೂ ಹೆಚ್ಚು ಕೆರೆಗಳು ಇದ್ದವು. ಇಂದು ಅಕಾಲಿಕ ಮಳೆ,…

ಕುತ್ತು ತಂದ ಕಾಟ್ಯಾಕ್ಟ್ ಲೆನ್ಸ್:ಕಣ್ಣು ಕಳೆದುಕೊಳ್ಳುವ ಭೀತಿಯಲ್ಲಿ ಕನ್ನಡದ ನಟಿ?

ಕನ್ನಡ, ತಮಿಳು ಸಿನಿಮಾಗಳು ಹಾಗೂ ಹಲವು ಹಿಂದಿ ಧಾರಾವಾಹಿಗಳಲ್ಲಿ ನಟಿಸಿದ್ದ ನಟಿ ಜಾಸ್ಮಿನ್ ಭಾಸಿನ್ ಅವರ ಜೀವನ ಈಗ ಸಂಕಷ್ಟಕ್ಕೆ ಸಿಲುಕಿದೆ. ಕಣ್ಣಿಗೆ ಲೆನ್ಸ್ ಹಾಕುವ ಪ್ರಯತ್ನದಲ್ಲಿದ್ದ ಅವರು ಕಣ್ಣಿನ ಕಾರ್ನಿಯಲ್​ಗೆ ಹಾನಿ ಮಾಡಿಕೊಂಡಿದ್ದಾರೆ. ಇದರಿಂದ ಅವರ ದೃಷ್ಟಿಗೆ ತೊಂದರೆಯಾಗಿ ಕಣ್ಣು…

ವಾಲ್ಮೀಕಿ ನಿಗಮದ ಹಗರಣದಲ್ಲಿ ಭಾಗಿಯಾದ ತಪ್ಪಿತಸ್ಥರು ಕಾನೂನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ: ಸಚಿವ ಕೆ.ಹೆಚ್.ಮುನಿಯಪ್ಪ

ಕೋಲಾರ,ಜುಲೈ.೨೨ : ವಾಲ್ಮೀಕಿ ನಿಗಮದ ಹಗರಣ ಭಾಗಿಯಾದ ತಪ್ಪಿತಸ್ಥರು ಕಾನೂನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿದೆ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ.ಹೆಚ್.ಮುನಿಯಪ್ಪ ತಿಳಿಸಿದರು.  ಗುರುಪೂರ್ಣಿಮೆ ಪ್ರಯುಕ್ತ ಭಾನುವಾರ ನಗರದ ಸಾಯಿಬಾಬಾ ದೇವಾಲಯಕ್ಕೆ ಬೇಟಿ ನೀಡಿದ ಬಳಿಕ…

ಮೂಡಾ ಹಗರಣ ಆರೋಪ:ಸಿಎಂ ಸಿದ್ದು ಸೇರಿ ಆರು ಮಂದಿ ವಿರುದ್ಧ ಲೋಕಾಯುಕ್ತಕ್ಕೆ ದೂರು

ಆಪಾದಿತ ಮೂಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಪತ್ನಿ ಬಿ.ಎಂ ಪಾರ್ವತಿ ಸೇರಿ ಆರು ಮಂದಿ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ. ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಇವರ ಸಹೋದರ ಬಿ.ಎಂ ಮಲ್ಲಿಕಾರ್ಜುನಸ್ವಾಮಿ, ಮೂಡಾದ ಮಾಜಿ‌ ಅಧ್ಯಕ್ಷರಾದ ಬಸವನಗೌಡ, ಹೆಚ್.ವಿ…

You missed

error: Content is protected !!