ಕೋಲಾರದ ಎ.ಎಸ್.ಐ. ಮನೆಯೊಂದರಲ್ಲಿ ವಿದ್ಯುತ್ ಅವಘಡ, ಸ್ಥಳೀಯರ ಸಮಯ ಪ್ರಜ್ಞೆಯಿಂದ ಬಾರಿ ಅನಾಹುತವನ್ನು ತಪ್ಪಿಸಿದ್ದಾರೆ.
ಕೋಲಾರದ ಗಾಂಧಿನಗರದಲ್ಲಿ ಇರುವ ಎ.ಎಸ್.ಐ. ಬಿ.ರವಿಕುಮಾರ್ ರವರ ಮನೆಯಲ್ಲಿ ಬಾಡಿಗೆದಾರರು ವಾಸವಾಗಿದ್ದರು. ಮಕ್ಕಳು ಮನೆಯಲ್ಲಿದ್ದ ಸಂದರ್ಭದಲ್ಲಿ ಮನೆಯ ದ್ವಾರ ಬಾಗಿಲ ಬಳಿಯೇ ಇರುವ ಎಂ.ಸಿ.ಬಿ. ಬಾಕ್ಸ್ನಲ್ಲಿ ಬೆಂಕಿ ಕಾಣಿಸಿಕೊಂಡು ಉರಿಯಲು ಆರಂಬಿಸಿದೆ. ಬೆಂಕಿ ಅಂಟಿದ ಕ್ಷಣ ಮಾತ್ರದಲ್ಲೇ ಬೆಂಕಿಯ ಕೆನ್ನಾಲಿಗೆ ಪಕ್ಕದ ಬಾಗಿಲು ಕಿಟಕಿಗೆ ತಾಕಿ ಜೋರಾಗಿ ಧಗಧಗ ಎಂದು ಉರಿಯಲು ಪ್ರಾರಂಬಿಸಿದೆ .
ಇದನ್ನು ಗಮನಿಸಿದ ಅಕ್ಕಪಕ್ಕದ ಸ್ಥಳೀಯರು ಮನೆಯ ಮಾಲೀಕರಿಗೆ ಹಾಗೂ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ ಮತ್ತೂ ತಕ್ಷಣ ಕಾರ್ಯಪ್ರವೃತ್ತರಾಗಿ ವಿದ್ಯುತ್ ಸಂಪರ್ಕ ತುಂಡರಿಸಿ ಕೊಠಡಿಯಲ್ಲಿ ಮಲಗಿದ್ದ ಮಕ್ಕಳನ್ನು ಕಿಟಕಿ ಗಾಜು ಒಡೆದು ರಕ್ಷಿಸಿದ್ದಾರೆ.
ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ಮುಟ್ಟಿಸಿದ ಸ್ಥಳೀಯರು, ಬೆಂಕಿಯ ವೇಗವನ್ನು ತಡೆಯುವ ಸಲುವಾಗಿ ಮನೆ ಬಾಗಿಲು, ಕಿಟಕಿ, ಮನೆ ಸಾಮಗ್ರಿಗಳು, ಆಹಾರ ದಾನ್ಯಗಳು ಬೆಂಕಿಗೆ ಆಹುತಿ ಆಗುತ್ತಿರುವುದನ್ನು ನಂದಿಸಲು ಅರಸಾಹಸ ಪಟ್ಟಿದ್ದಾರೆ ನಂತರ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಉಳಿದ ಬೆಂಕಿ ನಂದಿಸಿದ್ದಾರೆ.
ವಿಷಯ ತಿಳಿದ ಗಲ್‌ಪೇಟೆ ಪೋಲೀಸ್ ಠಾಣೆ ಆರಕ್ಷಕ ಉಪ ನಿರೀಕ್ಷಕರು ಹಾಗೂ ಸಿಬ್ಬಂದಿ ಬೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು. ಅವಘಡದಿಂದ ಯಾವುದೇ ಜೀವ ಹಾನಿ ನಡೆಯದೆ ಎಲ್ಲರೂ ಸುರಕ್ಷಿತವಾಗಿದ್ದಾರೆ. ಮನೆಯಲ್ಲಿದ್ದ ಸೋಫಾ ಸೆಟ್ , ಟೇಬಲ್, ಹೊಲಿಗೆಯಂತ್ರ, ಕಿಟಕಿ ಬಾಗಿಲು, ಸ್ವಿಚ್ ಬರ‍್ರ್ಗಳು, ವೈರಿಂಗ್ ಪೈಪ್ ಲೇನ್ಸ್, ಎಲ್ಲಾ ಸೇರಿ ಸುಮಾರು ೨ ಲಕ್ಷ ನಷ್ಟವಾಗಿರಿವುದಾಗಿ ಅಂದಾಜಿಸಲಾಗಿದೆ. ಮನೆ ಮಾಲೀಕರಾದ ಪೋಲೀಸ್ ರವಿಕುಮಾರ್ ಕುಟುಂಬದವರು ಸ್ಥಳದಲ್ಲಿ ಹಾಜರಿದ್ದರು.