ಕೆಜಿಎಫ್ :ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಹೊರ ತೆಗೆಯಲು ವಿಜ್ಞಾನ ಮತ್ತು ವಸ್ತು ಪ್ರದರ್ಶನವೂ ಸೂಕ್ತ ವೇದಿಕೆಯಾಗಿದೆ ಎಂದು ಎಸ್‍ಡಿಎಂಸಿ ಮಾಜಿ ಅಧ್ಯಕ್ಷ ಆರ್.ಹೇಮಾರೆಡ್ಡಿ ಹೇಳಿದರು.
ಕೆಜಿಎಫ್ ತಾಲ್ಲೂಕಿನ ಬೇತಂಮಗಲ ಹೋಬಳಿಯ ಸುಂದರಪಾಳ್ಯ ಗ್ರೀನ್ ವುಡ್ಜ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ಮತ್ತು ವಸ್ತು ಪ್ರದರ್ಶನ (ಎಕ್ಸ್ಪೋ) ದಲ್ಲಿ ಪಾಲ್ಗೋಂಡು ಅವರು ಮಾತನಾಡಿದರು.

ಮಕ್ಕಳಿಗೆ ಶಿಕ್ಷಣ ಜತೆಗೆ ಇಂತಹ ಹಲವು ಅರಿವು, ತಂತ್ರಜ್ಞಾನ ಕಾರ್ಯಕ್ರಮಗಳನ್ನು ಶಾಲೆಗಳಳ್ಲಿ ಹಮ್ಮಿಕೊಳ್ಳುವುದರಿಂದ ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಲು ಸಹಕಾರಿ ಆಗಲಿದೆ ಎಂದರು.
ಶಾಲೆಯ ಪ್ರಾರಂಭವಾಗಿ 1 ವರ್ಷದಲ್ಲೇ ಉತ್ತಮ ಹೆಸರುಗಳಿಸಿದೆ. ಮಕ್ಕಳು ಸಹ ಶಿಸ್ತು, ಸಂವಯ, ಗೌರವವನ್ನು ಕಲಿತಿದ್ದಾರೆ. ಇನ್ನೂ ಹೆಚ್ಚಿನ ರೀತಿಯಲ್ಲಿ ವಿಜ್ಞಾನ, ವಸ್ತು ಪ್ರದರ್ಶನ, ಮಕ್ಕಳ ಸಂತೆ, ಕ್ರೀಡೆ, ಸಾಂಸ್ಕøತಿಕ ಹಮ್ಮಿಕೊಂಡು ಮಕ್ಕಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿದರೆ ಅವರು ಸಾಧನೆ ಮಾಡಲು ಸಹಕಾರಿ ಎಂದರು.

ಸುಂದರಪಾಳ್ಯ, ಎನ್.ಜಿ ಹುಲ್ಕೂರು ಭಾಗಗಳಿಂದ ಸರ್ಕಾರಿ ಶಾಲೆಯ ಮಕ್ಕಳು ಈ ವಿಜ್ಞಾನ ಮತ್ತು ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ವೀಕ್ಷಿಸಲು ಈ ಶಾಲೆ ವತಿಯಿಂದಲೇ ವಾಹನ ವ್ಯವಸ್ಥೆ ಕಲ್ಪಿಸಿದ್ದರು ಆಯಾ ಶಾಲಾ ಶಿಕ್ಷಕರು ಪಾಲ್ಗೋಂಡಿದ್ದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷರುಗಳಾದ ರಾಂಬಾಬು, ಸುನೀಲ್, ಮಮತಾಗಣೇಶ್, ಶಾಲೆಯ ಕಾರ್ಯದರ್ಶಿ ಹರಿಕೃಷ್ಣ, ಪ್ರಾಂಶುಪಾಲ ಶ್ರೀನಿವಾಸ್, ಮುಳಬಾಗಿಲು ವಾರಿಧಿ ಮಂಜುನಾಥ್, ಸಿಆರ್ಪಿ ಸೂರೆಪ್ಪ, ಕಲಾವಿಹೊಸಹಳ್ಳಿ ಮುಖ್ಯ ಶಿಕ್ಷಕ ಸುರೇಶ್, ನಾರಾಯಣ, ಮುಖಂಡರಾದ ಧನುಶ್, ಮಂಜುನಾಥ್, ನರೇಶ್, ಚಂದ್ರಾ,
ಮುರಳಿ, ಮುಸ್ತಾಪ, ಶ್ರೀರಾಮ್ ರೆಡ್ಡಿ, ದಿನೇಶ್, ಗ್ರಾಪಂ ಮಾಜಿ ಸದಸ್ಯ ರಮೇಶ್, ಪಿಡಿಒ ಏಜಾಜ್ ಶಾಲಾ ಮಕ್ಕಳ
ಪೋಷಕರು, ಶಿಕ್ಷಕರು, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.