ಕೋಲಾರದ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವಕೀಲರ ಭವನ ಶಾಖೆ ವತಿಯಿಂದ ರಥಸಪ್ತಮಿ ಪ್ರಯುಕ್ತ ಶನಿವಾರದಂದು ಮುಂಜಾನೆ 5.30ಕ್ಕೆ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ 108 ಸೂರ್ಯ ನಮಸ್ಕಾರವನ್ನು ಸೂರ್ಯ ಭಗವಂತನಿಗೆ ಅರ್ಪಿಸಲಾಯಿತು.
ಯೋಗಶಿಕ್ಷಕರಾದ ಮಾರ್ಕೋಂಡಣ್ಣನವರು ಹಾಗೂ ರವಿಕುಮಾರಣ್ಣ ನವರು ಯೋಗಾಭ್ಯಾಸ ಹಾಗೂ 108 ಸೂರ್ಯ ನಮಸ್ಕಾರ ಮಾಡಿಸಿದರಲ್ಲದೆ ರಥಸಪ್ತಮಿಯ ಮಹತ್ವವನ್ನು ತಿಳಿಸಿದರು.
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕೋಲಾರ ವತಿಯಿಂದ ರಥಸಪ್ತಮಿ ಪ್ರಯುಕ್ತ ಬೃಹತ್ ಸಾಮೂಹಿಕ ಸೂರ್ಯ ನಮಸ್ಕಾರವನ್ನು 29-1-2023 ಭಾನುವಾರದಂದು ಟೇಕಲ್ ರಸ್ತೆಯ ಮಕ್ಕಳ ಉದ್ಯಾನವನದಲ್ಲಿ ಏರ್ಪಡಿಸಲಾಗಿದೆ ಎಲ್ಲಾ ಯೋಗಬಂಧುಗಳು ಭಾಗವಹಿಸುವಂತೆ ಮನವಿ ಮಾಡಿದರು.
ಸೂರ್ಯ ನಮಸ್ಕಾರದಲ್ಲಿ ಯೋಗ ಬಂಧುಗಳಾದ ಚಂದ್ರಣ್ಣ, ಬಾಬಣ್ಣ, ಉಮಾಶಂಕರಣ್ಣ, ಶ್ರೀನಾಥ್‌ಅಣ್ಣ, ಹನುಮಣ್ಣ, ಕೃಷ್ಣೇಗೌಡಅಣ್ಣ, ರಾಮಮೂರ್ತಿಅಣ್ಣ, ಮಂಜುನಾಥಅಣ್ಣ, ವೆಂಕಟೇಶಣ್ಣ, ವಿಜಯಅಕ್ಕ, ರಮ್ಯಾಅಕ್ಕ, ರಾಣಿಅಕ್ಕ, ಲಕ್ಷ್ಮಿಅಕ್ಕ , ಅನಿತಾಅಕ್ಕ , ಅಮಲಅಕ್ಕ, ಸವಿತಅಕ್ಕ, ಆಶಾಅಕ್ಕ ,ಸತೀನಾಅಕ್ಕ ,ದೇವಕಿಅಕ್ಕ, ರಾಜೇಶ್ವರಿಅಕ್ಕ, ಮಮತಅಕ್ಕ, ಸುಮಾಅಕ್ಕ ಭಾಗವಹಿಸಿದ್ದರು.