• Sat. Apr 27th, 2024

PLACE YOUR AD HERE AT LOWEST PRICE

ಐಎಎಸ್,ಐಪಿಎಸ್,ಕೆಎಎಸ್ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಾಧನೆ ಮಾಡುವ ಮೂಲಕ ಜಿಲ್ಲೆಯ ಘನತೆ ಹೆಚ್ಚಿಸಿ, ಉತ್ತಮ ಅಧಿಕಾರಿಗಳಾಗಿ ಮಾನವೀಯತೆ,ಹೃದಯವಂತಿಕೆಯಿಂದ ಸಮಾಜದ ಆಸ್ತಿಯಾಗಿ ಎಂದು ಬೆಂಗಳೂರು ಉತ್ತರ ವಲಯ ಡಿಸಿಪಿ ಡಿ.ದೇವರಾಜ್ ಕರೆ ನೀಡಿದರು.

ಕೋಲಾರ ನಗರದಲ್ಲಿ ಜಿಲ್ಲೆಯ ಯುವಕರಿಗಾಗಿ ಅವರೇ ಸ್ಥಾಪಿಸಿರುವ ಡಿಎಂಆರ್ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ ಮೊದಲ ತಂಡಕ್ಕೆ ಬೀಳ್ಕೊಟ್ಟು, ಎರಡನೇ ತಂಡವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕೇವಲ ಡಾಕ್ಟರ್, ಇಂಜಿನಿಯರ್ ಮಾತ್ರವೇ ನಿಮ್ಮ ಆಯ್ಕೆಯಲ್ಲ, ಐಎಎಸ್,ಕೆಎಎಸ್, ಐಪಿಎಸ್ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸಾಗಿ ಉತ್ತಮ ಅಧಿಕಾರಿಗಳಾಗಿ ಸಮಾಜಕ್ಕೆ ಕೊಡುಗೆ ನೀಡಲು ಹೆಚ್ಚಿನ ಅವಕಾಶಗಳಿವೆ ಎಂದು ತಿಳಿಸಿದರು.

ರಾಜ್ಯ ಪತ್ರಕರ್ತರ ಸಂಘದ ಕಾರ್ಯಕಾರಿ ಸದಸ್ಯ ವಿ.ಮುನಿರಾಜು ಮಾತನಾಡಿ, ಡಿಸಿಪಿ ದೇವರಾಜ್ ಅವರು, ತಮ್ಮ ತವರು ಜಿಲ್ಲೆಯಾದ ಕೋಲಾರದ ಯುವಕರು ಸ್ಪರ್ಧಾತ್ಮಕ ಪರೀಕ್ಷೆ ಬರೆದು ಸಾಧಕರಾಗಲಿ ಎಂಬ ಆಶಯದೊಂದಿಗೆ ಈ ಕೇಂದ್ರ ತೆರೆದಿದ್ದಾರೆ, ಅವರ ಕನಸು ನನಸಾಗಿಸಲು ನೀವು ಪ್ರಯತ್ನ ನಡೆಸಬೇಕು ಎಂದರು.

ಹಿರಿಯ ವಕೀಲ ಕೆ.ವಿ.ಶಂಕರಪ್ಪ ಮಾತನಾಡಿ, ಕೋಲಾರ ಜಿಲ್ಲೆ ಎಂದರೆ ವಕೀಲರ ತವರು, ಕೆಎಎಸ್.ಅಧಿಕಾರಿಗಳ ತವರು ಎಂಬ ಮಾತಿದೆ, ಬೆಂಗಳೂರಿನಲ್ಲಿ ಹೋದರೆ ಕೋಲಾರದವರೇ ಹೆಚ್ಚಿನವರುವಕೀಲರಾಗಿದ್ದಾರೆ, ಇಲ್ಲಿನ ಜನ ಕಷ್ಟಜೀವಿಗಳು, ಪಾತಾಳ ಬಗೆದು ನೀರು ತೆಗೆದು ಬೆಳೆ ತೆಗೆಯುವ ಸಾಧಕರು ಎಂದರು.

ಕೆಎಎಸ್ ಅಧಿಕಾರಿ ನಾಗಮಣಿ ಮಾತನಾಡಿ, ಡಿಸಿಪಿ ಡಿ.ದೇವರಾಜ್ ಅವರ ಹೃದಯವಂತಿಕೆ ಮೆಚ್ಚುವಂತದ್ದು, ಸದಾ ಅಭಿವೃದ್ದಿಯ ಚಿಂತನೆ, ತನ್ನ ತವರು ಜಿಲ್ಲೆಯ ಪ್ರಗತಿಗೆ ದುಡಿಯುವ ಹಂಬಲ ಹೊಂದಿರುವ ಅವರು, ಡಿಎಂಆರ್ ಸ್ಪರ್ಧಾತ್ಮಕ ಕೇಂದ್ರ ತೆರೆಯುವ ಮೂಲಕ ನಮ್ಮ ಯುವಕರ ಸ್ವಾವಲಂಬಿ ಬದುಕಿಗೆ ಸಂಕಲ್ಪ ಮಾಡಿದ್ದಾರೆ ಎಂದರು.

ಕೆಎಎಸ್ ಅಧಿಕಾರಿ ಗಂಗಾಧರ್ ಮಾತನಾಡಿ, ಐಎಎಸ್,ಕೆಎಎಸ್ ಎಲ್ಲವೂ ಸಾಧಕನ ಸ್ವತ್ತು, ಅದು ದುಡ್ಡುಕೊಟ್ಟು ಪಡೆಯುವುದಲ್ಲ, ಸಾಧನೆಯ ಹಸಿವು ಇರುವ ಯಾರು ಬೇಕಾದರೂ ಈ ಪರೀಕ್ಷೆಗಳನ್ನು ಗೆಲ್ಲಬಹುದು, ಅಂತಹ ಜ್ಞಾನದ ಹಸಿವು ನಿಮ್ಮದಾಗಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಮೊದಲ ತಂಡದಲ್ಲಿ ತರಬೇತಿ ಮುಗಿಸಿದ ೯೦ ಮಂದಿಯನ್ನು ಬೀಳ್ಕೊಡಲಾಯಿತು. ಹೊಸದಾಗಿ ಸೇರ್ಪಡೆಯಾದ ೭೦ ಮಂದಿಯ ತಂಡವನ್ನು ಉದ್ಘಾಟಿಸುವ ಮೂಲಕ ಡಿಎಂಆರ್ ಪರೀಕ್ಷಾಕೇಂದ್ರ ಜಿಲ್ಲೆಯಲ್ಲಿ ಯುವಕರ ಜ್ಞಾನದ ಹಸಿವು ನೀಗಿಸುವ ಪ್ರಯತ್ನ ಮುಂದುವರೆಸಿತು.
ಕಾರ್ಯಕ್ರಮದಲ್ಲಿ ಕಸಾಪ ನಿಕಟಪೂರ್ವ ಅಧ್ಯಕ್ಷ ನಾಗಾನಂದ್ ಕೆಂಪರಾಜ್, ವಕೀಲ ಕಲ್ಲಂಡೂರು ಲೋಕೇಶ್, ನೀರಾವರಿ ಹೋರಾಟಗಾರ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!