ಬಂಗಾರಪೇಟೆ ಟ್ಯಾಬ್ಲೆಟ್ ಕಾರ್ಖಾನೆಗೆ ವಿಶೇಷವಾದಂತಹ ಚರಿತ್ರೆ ಇದೆ. ಇದು 1920ನೇ ಇಸ್ವಯಲ್ಲಿ ಆರಂಭಗೊAಡ ಏಶಿಯಾ ಖಂಡದಲ್ಲೇ ಪ್ರಥಮ ಟ್ಯಾಬ್ಲೆಟ್ ಕಾರ್ಖಾನೆಯಾಗಿದೆ. ಮಾತ್ರೆಯನ್ನ ಮೊದಲನೆಯ ಬಾರಿಗೆ ಅಮೆರಿಕಾದಲ್ಲಿ ಪರಿಚಯಿಸಿದಾಗ ಖ್ಯಾತ ಕ್ರೆöÊಸ್ತ ಮಿಷನರಿಯಾಗಿದ್ದ ಡಾ.ಕ್ಯೂ.ಹೆಚ್.ಲಿನ್ ಇಲ್ಲಿಗೆ ಬಂದು ಸ್ವಂತ ಖರ್ಚಿನಲ್ಲಿ ಆರಂಭಿಸಿದ ಟ್ಯಾಬ್ಲೆಟ್ ಕಾರ್ಖಾನೆ ಇದಾಗಿದೆ.
ಆಲೋಪತಿ ಔಷಧಿಗಳಲ್ಲಿ ದ್ರವ ರೂಪದ ಔಷಧಿ ಅಂದರೆ ಕೆಂಪು ದ್ರವ ಮತ್ತು ಬೀಳಿ ದ್ರವಗಳನ್ನ ಮಿಶ್ರಣ ಮಾಡಿ ಕೊಡುತ್ತಿದ್ದ ಕಾಲದಲ್ಲಿ ಕಾರ್ಖಾನೆ ಆರಂಭವು ಇಲ್ಲಿನ ನಾಗರರೀಕರಲ್ಲಿ ಅಚ್ಚರಿಯನ್ನು ತಂದಿತ್ತು. ಡಾ.ಕ್ಯೂ.ಹೆಚ್.ಲಿನ್ ಕ್ರೆöÊಸ್ತ ಮಿಷನರಿ ಆಗಿದ್ದರೂ ಸಾಂಸ್ಥಿಕ ಧನ ಸಹಾಯ ಸಿಗದಾಗ ತನ್ನ ಸ್ವಂತ ಹಣದಿಂದ ಈ ಕಾರ್ಖಾನೆ ಆರಂಭಿಸದರು.
ನಮ್ಮ ದೇಶದಲ್ಲಿ 1920ರ ವೇಳೆಯಲ್ಲಿ ಪ್ಲೇಗ್ ಬಂದಿತ್ತು. ಪ್ಲೇಗ್ ಖಾಯಿಲೆಯಿಂದ ಸಾವುನೋವುಗಳು ಸಂಭವಿಸಿದ್ದವು. ಪ್ಲೇಗ್ ಬಂದು ಇಲ್ಲಿನ ಜನ ತುಂಬಾ ತೊಂದರೆಗೊಳಗಾಗಿದ್ದು, ಯಾರಾದರು ಸಹಾಯ ಮಾಡಲು ಮುಂದೆ ಬರಬಹುದು ಎಂದು ಆಗಿನ ಮೈಸೂರು ಸರ್ಕಾರ ನ್ಯೂಯಾರ್ಕ್ ಟೈಮ್ಸ್ ಪತ್ರಕೆಯಲ್ಲಿ ಜಾಹಿರಾತು ನೀಡಿತ್ತು.
ಜಾಹೀರಾತನ್ನು ನೋಡಿ ರೋಗಿಗಳಿಗೆ ಸಹಾಯ ಮಾಡಲು ಡಾ.ಕ್ಯೂ.ಹೆಚ್.ಲಿನ್ ಬಂದು ಇಲ್ಲಿ ಮಾತ್ರೆ ತಯಾರಿಸಲು ಮುಂದಾದರು. ಮಾತ್ರೆಗಳ ಮೇಲೆ ಯಾವ ಖಾಯಿಲೆಗೆ ಯಾವ ಮಾತ್ರೆ ಎಂದು ತಿಳಿಯುತ್ತಿರಲಿಲ್ಲವಾದ್ದರಿಂದ ಇಲ್ಲಿನ ಜನ ಮಾತ್ರೆಗಳ ಬಗ್ಗೆ ಗೊಂದಲಗೊಂಡಿದ್ದರು. ನಂತರ ಇಲ್ಲಿ ತಯಾರಾದ ಮಾತ್ರೆಗಳನ್ನ ಮಿಷನರೀಸ್ ಆಸ್ಪತ್ರೆಗಳಿಗೆ ಸರಬರಾಜು ಮಾಡಲಾಗುತ್ತಿತ್ತು.
ವಿಶೇಷ ಎಂದರೆ ಆಲ್ ಇಂಡಿಯಾ ಫ್ಯಾಕ್ಟರೀಸ್ ಆಕ್ಟ್ ನಲ್ಲಿ ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲು ನೋಂದಣಿಗೊಂಡಿದ್ದು ಇದೇ ಕಾರ್ಖಾನೆಯಾಗಿತ್ತು. ಹೆಚ್ಚಾಗಿ ದಕ್ಷಿಣ ಭಾರತದಾದ್ಯಂತ ಮಾತ್ರೆ ಸರಬರಾಜು ಮಾಡುತ್ತಿದ್ದ ಡಾ.ಕ್ಯೂ.ಹೆಚ್.ಲಿನ್ ತನ್ನ ಮಕ್ಕಳ ಸಹಕಾರದಿಂದ 1948ರ ತನಕವೂ ಕಾರ್ಖಾನೆಯನ್ನು ಮುಂದುವರೆಸಿಕೊಂಡು ಬಂದಿದ್ದರು.
1948ರಲ್ಲಿ ಜೈ ಸುಕ್‌ಲಾಲ್ ಹಾತಿ ನೇತೃತ್ವದ ಸಮಿತಿಯಿಂದ ಆರೋಗ್ಯ ನೀತಿಗಳು ಹೇಗಿವೆ ಮತ್ತು ಆರೋಗ್ಯದ ಬಗ್ಗೆ ಸೇವೆ ಮಾಡುತ್ತಿರುವ ಸಂಸ್ಥೆಗಳ ಕಾರ್ಯಚಟುವಟಿಕೆಗಳ ಬಗ್ಗೆ ಸರ್ವೆ ನಡೆದು ಒಂದು ವರಧಿಯನ್ನ ಭಾರತ ಸರ್ಕಾರಕ್ಕೆ ನೀಡಲಾಗುತ್ತದೆ. ಆ ವರಧಿಯಲ್ಲಿ ಈ ಟ್ಯಾಬ್ಲೆಟ್ ಕಾರ್ಖಾನೆ ಬಗ್ಗೆ ದಕ್ಷಿಣ ಭಾರತದಲ್ಲೇ ಬಹಳ ಉತ್ತಮ ಕಾರ್ಖಾನೆ ಎಂಬ ಹೆಗ್ಗಳಿಕೆಯ ವರಧಿ ಸಲ್ಲಿಕೆಯಾಗಿತ್ತು.
1948ರ ನಂತರ ಡಾ.ಕ್ಯೂ.ಹೆಚ್.ಲಿನ್‌ರ ಮಗ ಡಾ.ಕಿನ್ನಿ ಲಿನ್ ಕಾರ್ಖಾನೆಯನ್ನ ಮುಂದುವರೆಸುವ ಜೊತೆಗೆ ಬಂಗಾರಪೇಟೆಯಲ್ಲಿ ಜನರ ಜೊತೆ ಬೆರೆಯುತ್ತಿದ್ದ ಅವರು ಸಮಾಜ ಸೇವೆಯನ್ನೂ ಮುಂದುವರೆಸುತ್ತಾರೆ. ಡಾ.ಕಿನ್ನಿ ಲಿನ್‌ರ ಸೇವೆಯ ಫಲವಾಗಿ ಅವರಿಂದ ಸಹಾಯ ಪಡೆದ ಜನ ಅವರನ್ನು ದೊರೆಗಳು ಎಂದೇ ಸಂಬೋಧಿಸುತ್ತಿದ್ದರೆಂದು ಹೇಳಲಾಗುತ್ತದೆ.
90 ವರ್ಷಗಳ ಕಾಲ ಇಡೀ ದೇಶಕ್ಕೆ ಮಾತ್ರೆಗಳನ್ನು ನೀಡಿದ ಮಾಲೀಕ ಡಾ.ಕಿನ್ನಿ ಲಿನ್ 1982ನೇ ಇಸ್ವಯಲ್ಲಿ ತೀರಿಕೊಳ್ಳುತ್ತಾರೆ. ಅವರಿಗೆ ಇಲ್ಲಿನ ಜನರ ಜೊತೆಗಿನ ಸಂಬಂಧ ಎಷ್ಟಿತ್ತು ಎಂದರೆ ಅವರ ಶವವನ್ನು ಸ್ಮಶಾಣದವರೆಗೆ ಹಿಂದೂಗಳೆ ಎತ್ತಿಕೊಂಡು ಸಾಗಿಸುತ್ತಾರೆ. ಕ್ರೆöÊಸ್ತರಿಗೆ ವಿಧಿ ವಿಧಾನಗಳನ್ನು ಮಾಡಲು ಕೊನೆಯಲ್ಲಿ ಅವಕಾಶ ಬಿಟ್ಟುಕೊಡುತ್ತಾರೆ.
ನಂತರ ಅವರ ಕುಟುಂಬವರ್ಗ ಕಾರ್ಖಾನೆಯನ್ನ ಮುಂದುವರೆಸಲು ಆಗದೆ 1975-76ರಲ್ಲಿ ಮೆಥೊಡಿಸ್ಟ್ ಮಿಷನ್ ಟ್ರಸ್ಟ್ ಗೆ ನೀಡುತ್ತಾರೆ. ಅವರ ಮಾರ್ಗದರ್ಶನದಲ್ಲಿ ಆಲ್ ಇಂಡಿಯಾ ಟ್ಯಾಬ್ಲೆಟ್ ಇಂಡಸ್ಟಿçà (ರಿ) ಹೆಸರಿನ ಟ್ರಸ್ಟ್ ನ್ನು ದಿನಾಂಕ: 23-11-176ರಂದು ಬಂಗಾರಪೇಟೆ ಉಪ ನೋಂದಣಾಧಿಕಾರಿಗಳ ಕಛೇರಿಯಲ್ಲಿ ನೋಂದಣಿ ಮಾಡಿ ಚಟುವಟಿಕೆ ಮುಂದುವರೆಸಲಾಗುತ್ತದೆ.
ಆಲ್ ಇಂಡಿಯಾ ಟ್ಯಾಬ್ಲೆಟ್ ಇಂಡಸ್ಟಿ (ರಿ) ಹೆಸರಿನ ಟ್ರಸ್ಟ್ ಗೆ ತಾರಾನಾಥ್ ಸಾಗರ್ ಅದ್ಯಕ್ಷರಾಗಿ, ಜಯವಂತ್ ಕಾರ್ಯದರ್ಶಿಯಾಗಿ, ಸಂಜೀವ್ ದಯಾನಂದ್ ಖಜಾಂಚಿಯಾಗಿ ನೇಮಕಗೊಂಡು ಮೆಥೊಡಿಸ್ಟ್ ಚರ್ಚ್ ನ ಮಾರ್ಗದರ್ಶನದಂತೆ 2014ರ ತನಕ ಕಾರ್ಖಾನೆಯಲ್ಲಿ ಮಾತ್ರೆ ತಯಾರಿಕೆ ನಡೆಯುತ್ತದೆ.
ದೇಶದಾದ್ಯಂತ ಮಾತ್ರೆ ತಯಾರಿಕೆ ಕಾರ್ಖಾನೆಗಳು ಆರಂಭಗೊಳ್ಳುತ್ತಿದ್ದಂತೆ ಇಲ್ಲಿ ಮಾತ್ರೆ ತಯಾರಿ ದುಬಾರಿಯಾದ ಕಾರಣ 2014ರ ವೇಳೆಗೆ ಕಾರ್ಖಾನೆ ಮಾತ್ರೆ ತಯಾರಿಕೆ ನಿಲ್ಲಿಸುತ್ತದೆ. ಆ ನಂತರ ಮೆಥೊಡಿಸ್ಟ್ ಚರ್ಚ್ ನಿರ್ವಹಣೆಯನ್ನು ಮುಂದುವರೆಸಿದೆ. ಕೋಲಾರ ಮುಖ್ಯ ರಸ್ತೆಯ ಪಟ್ಟಾಭಿಷೇಕೋದ್ಯಾನವನದ (ದೊಡ್ಡ ಪಾರ್ಕ) ಹಿಂಬಾಗವಿರುವ ಈ ಸ್ಥಳ ಪ್ರವಾಸಿ ಸ್ಥಳವಾಗಿ ಬೆಳೆಯಬೇಕಿದೆ.
ಕೆ.ರಾಮಮೂರ್ತಿ.