• Thu. Apr 25th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ತಾಲ್ಲೂಕಿನ ಹನುಮಂತಪುರ ಗ್ರಾಮದ ಸ.ನಂ.22/ಪಿ1ರಲ್ಲಿ 1ಎಕರೆ ಜಮೀನು ನಿವೇಶನ ರಹಿತರಿಗೆ ಮೀಸಲಿಟ್ಟಿರುವ ಜಾಗಕ್ಕೆ ವಿನಾಕಾರಣ ತೊಂದರೆ ನೀಡುತ್ತಿರುವ ಅಮರಪ್ಪ ವಿರುದ್ದ ಕ್ರಮ ಕೈಗೊಂಡು ಈ ಕೂಡಲೇ ನಿವೇಶನ ಹಂಚಿಕೆ ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ರೈತಸೇನೆ ಅಧ್ಯಕ್ಷ ಹುಣಸನಹಳ್ಳಿ ಎನ್.ವೆಂಕಟೇಶ್ ನೇತೃತ್ವದಲ್ಲಿ ತಹಸೀಲ್ದಾರರಿಗೆ ಮನವಿ ನೀಡಿ ಒತ್ತಾಯಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗ ಪ್ರತಿಭಟನೆ ಹಮ್ಮಿಕೊಂಡು ಮಾತನಾಡಿದ ಅವರು, ಬಂಗಾರಪೇಟೆ ತಾಲ್ಲೂಕು, ಕಸಬಾ ಹೋಬಳಿ, ಹನುಮಂತಪುರ ಗ್ರಾಮದ ಸ.ನಂ. 22/ಪಿ1ರಲ್ಲಿ 1ಎಕರೆ ಜಮೀನಿನಲ್ಲಿ ಹುಣಸನಹಳ್ಳಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ (ಆದಿಕರ್ನಾಟಕ) ಜನಾಂಗದ ನಿರ್ಗತಿಕ ಬಡವರಿ ಹಂಚಿಕೆ ಮಾಡಬೇಕು.

ಈ ಕಡು ಬಡವರು ಸುಮಾರು ವರ್ಷಗಳಿಂದ ಹುಣಸನಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದು, ಅವರಿಗೆ ನಿವೇಶನವನ್ನು ನೀಡಲು ಯಾವುದೇ ಜನಪ್ರತಿನಿದಿಗಳು ಮುಂದಾಗದೇ ಅವರನ್ನು ಬರೀ ಓಟು ಬ್ಯಾಂಕ್‌ ಆಗಿ ಬಳಸಿಕೊಳ್ಳುತ್ತಿದ್ದು, ಇವರು ಸುಮಾರು ವರ್ಷಗಳಿಂದ ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದು ಈ ಹಿಂದೆ ಕೊರೊನಾ ಮಹಾ ಮಾರಿ ವಕ್ಕರಿಸಿಕೊಂಡಾಗ ಬಾಡಿಗೆ ಸಹ ಕಟ್ಟಲಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಈ ಗ್ರಾಮದ ನಿರ್ಗತಿಕ ಬಡವರ ಪರ ಕರ್ನಾಟಕ ದಲಿತ ರೈತಸೇನೆ ಮತ್ತು ಹುಲಿಬೆಲೆ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯ ಹೆಚ್.ಆರ್.ಶ್ರೀನಿವಾಸರ ನೇತೃತ್ವದಲ್ಲಿ ಹನುಮಂತಪುರ ಗ್ರಾಮದ ಸ.ನಂ. 22/ಪಿ1ರಲ್ಲಿ ಸುಮಾರು ಜನಕ್ಕೆ ಮಂಜೂರಾಗಿ ಉಳಿದಂತಹ ಜಮೀನನ್ನು ಪತ್ತೆಹಚ್ಚಿ ನಮ್ಮ ಸಂಘಟನೆ ನೇತೃತ್ವದಲ್ಲಿ ಸುಮಾರು 40 ಕುಟುಂಬಗಳು ಗುಡಿಸಲು ಹಾಕಿಕೊಂಡು ಪ್ರತಿಭಟನೆ ನಡೆಸಲಾಗಿತ್ತು.

ತಾಲ್ಲೂಕು ಮತ್ತು ಜಿಲ್ಲಾಡಳಿತ ಇದಕ್ಕೆ ಸ್ಪಂಧಿಸಿ ಸಂಬಧಪಟ್ಟ ತಹಸೀಲ್ದಾರರು ದಾಖಲೆಗಳ ಮೇಲೆ ಅಲ್ಲಿ ಮಂಜೂರಾಗಿ ಉಳಿದಿರುವ 1ಎಕರೆ ಜಮೀನನ್ನು ನಿವೇಶನ ರಹಿತರಿಗೆ ನೀಡಲು ಆದೇಶವನ್ನು ನೀಡಿದ್ದರು.
ಈ ಜಮೀನಿನ ಪಕ್ಕದಲ್ಲಿ ಸರೋಜಮ್ಮ ಕೋಂ ಶಂಕರಪ್ಪ ಎಂಬವವರಿಗೆ 1.03ಗುಂಟೆ ಜಮೀನು ಮಂಜೂರಾಗಿದರು ಬಗ್ಗೆ ದಾಖಲೆಗಳನ್ನು ಂಆಡಲಾಗಿದೆ.

ಈ ಜಮೀನನ್ನು ಹುಣಸನಹಳ್ಳಿ ಗ್ರಾಮ ಅಮರಪ್ಪ ಎಂಬುವವರಿಗೆ ಮಾರಾಟ ಮಾಡಿರುವುದಾಗಿ “ಅನ್ ರಿಜಿಸ್ಟರ್” ದಾಖಲೆ ಇಟ್ಟುಕೊಂಡು ನಿವೇಶನ ರಹಿತರಿಗೆ ಮಂಜೂರು ಮಾಡಿರುವ ಜಮೀನು ನಮ್ಮದೆ ಎಂದು ವಿನಾಕಾರಣ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ತೊಂದರೆ ನೀಡುತ್ತಿರುತ್ತಾರೆ.

ಸರೋಜಮ್ಮರಿಗೆ ಮಂಜೂರು ಮಾಡಿದಾಗ ಚೆಕ್ಕುಬಂದಿ ಪೂರ್ವಕ್ಕೆ: ಸೀನಪ್ಪ, ಪಶ್ಚಿಮಕ್ಕೆ: ಸರ್ವೆನಂ. 21 ಮತ್ತು 22  ಜಮೀನು, ಉತ್ತರಕ್ಕೆ: ಸರ್ಕಾರಿ ಜಮೀನು ಹಾಗೂ ದಕ್ಷಿಣಕ್ಕೆ: ಕೃಷ್ಣಪ್ಪನ ಜಮೀನು ಇರುತ್ತದೆ. ಇದರ ಪಕ್ಕದಲ್ಲಿರುವ ಉಳಿಕೆ ಜಮೀನನ್ನು ನಿವೇಶನ ರಹಿತರಿಗೆ ಹಂಚಲು ಮಾನ್ಯ ಕಾರ್ಯನಿರ್ವಹಣಾಧಿಕಾರಿಗಳ ಹೆಸರಿಗೆ ಪಹಣಿಯಲ್ಲಿ ನಮೂದಾಗಿರುತ್ತದೆ.

ದಲಿತರಿಗೆ ಮಂಜೂರಾಗಿರುವ ಸ್ವತ್ತನ್ನು ಕಬಳಿಸುವ ಉದ್ದೇಶದಿಂದ ಮಾನ್ಯ ನ್ಯಾಯಾಲಯದಲ್ಲಿ ದಾವೆ ಹೂಡಿರುತ್ತಾರೆ. ಆದರೆ ನಿವೇಶನ ರಹಿತರಿಗೆ ಮೀಸಲಿರಿಸಿದ ಸ್ಥಳಕ್ಕೆ ಚೆಕ್ಕುಬಂದಿ: ಪೂರ್ವಕ್ಕೆ: ಸರೋಜಮ್ಮ ಪಶ್ಚಿಮಕ್ಕೆ: ಗಿಡ್ಡಾರೆಡ್ಡಿರ ಜಮೀನು ಸ.ನಂ.21, ಉತ್ತರಕ್ಕೆ: ಸ್ಮಶಾನ ಮತ್ತು ಕುಂಟೆ ಸ.ನಂ.22, ದಕ್ಷಿಣಕ್ಕೆ: ಕೃಷ್ಣಪ್ಪನ ಜಮೀನು ಆಗಿರುತ್ತದೆ.

ಅಮರಪ್ಪ ಎಂಬುವವರಿಗೆ ಯಾವುದೇ ಪಕ್ಕಾ ದಾಖಲೆ ಇಲ್ಲದೆ ತೊಂದರೆ ನೀಡುತ್ತಿದ್ದು, ಹಲವಾರು ಕುಟುಂಬಗಳನ್ನು ಬೀದಿಗೆ ತರುವ ಹುನ್ನಾರವನ್ನು ಮಾಡುತ್ತಿರುತ್ತಾನೆ. ಹಾಗಾಗಿ ಹುಣಸನಹಳ್ಳಿ ಗ್ರಾಮದ ನಿವಾಸಿಯಾದ ಅಮರಪ್ಪರ ವಿರುದ್ದ ಪರಿಶಿಷ್ಟ ಜಾತಿ ಮತ್ತು ಪಂಗಡದ ದೌರ್ಜನ್ಯ ತಡೆ ಕಾಯ್ದೆಯನ್ವಯ ಕೇಸನ್ನು ದಾಖಲಿಸಿ ಇವನನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕುಇ ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಮಹದೇವಪುರ ವೆಂಕಟೇಶ್, ತಾಲ್ಲೂಕು ಅಧ್ಯಕ್ಷ ಹಿರೇಕರಪನಹಳ್ಳಿ ಮುನಿರಾಜು, ಮಹಿಳಾ ಅಧ್ಯಕ್ಷೆ ಶಾಂತಮ್ಮ, ಗೌರವಾಧ್ಯಕ್ಷ ಹುಳದೇನಹಳ್ಳಿ ವೆಂಕಟೇಶ್, ಸೇಟ್‌ಕಾಂಪೌಂಡ್ ಮಾರಿ, ಕೀಲುಕೊಪ್ಪ ಸತೀಶ್, ಅಂಬೇಡ್ಕರ್ ವೀರಸೇನೆ ಅಧ್ಯಕ್ಷ ಭಟ್ರಕುಪ್ಪ ಅರುಣ್, ಕಾರಮಾನಹಳ್ಳಿ ಅಶೋಕ್, ಹುಣಸನಹಳ್ಳಿ ಸತೀಶ್, ಸರಸ್ಪತಿ, ತಿಲಕಾವತಿ, ಮಲರ್, ಗಜವೇಣಿ, ಸುಶೀಲಮ್ಮ, ಅಮುದ, ರಾಧ, ಜಯ, ಮುಂತಾದವರು ಇದ್ದರು.

Related Post

ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ
ತಳಸಮುದಾಯವರು ಇಂದಿನ ಸುಳ್ಳುಗಳ ಜೊತೆಗೆ ಟ್ಯಾಗ್ ಆಗುತ್ತಿರುವುದು ದುರಂತ – ಎಲ್.ಎನ್.ಮುಕು0ದರಾಜ್

Leave a Reply

Your email address will not be published. Required fields are marked *

You missed

error: Content is protected !!