• Thu. Apr 18th, 2024

PLACE YOUR AD HERE AT LOWEST PRICE

ಕೆಜಿಎಫ್:ಬಗರ್ ಹುಕ್ಕುಂ ಸಾಗುವಳಿ ಸಕ್ರಮೀಕರಣ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯದೇ ನಮೂನೆ-53 ಮತ್ತು ನಮೂನೆ-57ರ ಅರ್ಜಿಗಳ ಕಡತಗಳನ್ನು ಗುಪ್ತ ಸ್ಥಳದಲ್ಲಿ ವಿಲೇವಾರಿ ಮಾಡುತ್ತಿರುವ ಬಗ್ಗೆ ಜಿಲ್ಲಾಧಿಕಾರಿಗಳು ಈ ಹಿಂದಿನ ಕೆಜಿಎಫ್ ತಹಸೀಲ್ದಾರ್ ಸುಜಾತ, ಶಿರಸ್ತೇದಾರ್ ಕೆ.ಸಿ.ಸುರೇಶ್ ಮತ್ತು ಸಿಬ್ಬಂದಿಗೆ ಕಾರಣ ಕೇಳಿ ನೊಟೀಸ್‍ನ್ನು ಜಾರಿಮಾಡಿದ್ದಾರೆ.

ಕೆಜಿಎಫ್ ನಗರಸಭೆ ವ್ಯಾಪ್ತಿಯ 7 ಕಿಮೀ ವ್ಯಾಪ್ತಿಯಲ್ಲಿ ಬರುವ ನೂರಾರು ಕೋಟಿ ರೂಪಾಯಿಗಳ ಬೆಲೆ ಬಾಳುವ ಸರ್ಕಾರಿ ಭೂಮಿಯನ್ನು ಅಧಿಕಾರಿಗಳು ಕಾನೂನನ್ನು ಗಾಳಿಗೆ ತೂರಿ ಬಗರ್ ಹುಕ್ಕುಂ ಸಾಗುವಳಿ ಸಕ್ರಮೀಕರಣ ಸಮಿತಿಗೆ ಮಂಡಿಸದೇ ವಿಲೆ ಮಾಡಿರುವ ಬಗ್ಗೆ ಬಂದ ಆರೋಪಗಳ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಕೆಜಿಎಫ್ ನ ಹಿಂದಿನ ತಹಶೀಲ್ದಾರ್ ಸುಜಾತ ಮತ್ತು ಸಿಬ್ಬಂದಿಗೆ ನೊಟೀಸ್ ನೀಡಿದ್ದಾರೆ.

ಎಲ್‍ಎನ್‍ಡಿಆರ್‍ಯುಒ/2311/1998-99 ರಂತೆ  4-25 ಎಕರೆ ಜಮೀನನ್ನು ಗಂಗೋಜಮ್ಮ ಕೋಂ ಮುನಿವೆಂಕಟರೆಡ್ಡಿ ಎಂಬುವವರಿಗೆ ಮಂಜೂರು ಮಾಡಿ ಫಹಣಿ ದಾಖಲಿಸಿರುವುದರ  ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗಳು ವ್ಯಕ್ತವಾದ ಹಿನ್ನಲೆಯಲ್ಲಿ ವಿಷಯ ಸುದ್ದಿಯಾಗಿತ್ತು. ಈ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳು ಈ ಹಿಂದಿನ ತಹಸೀಲ್ದಾರ್ ಸುಜಾತ, ಶಿರಸ್ತೇದಾರ್ ಕೆ.ಸಿ.ಸುರೇಶ್, ರಾಜಸ್ವ ನಿರೀಕ್ಷಕ ಮುನಿವೆಂಕಟಸ್ವಾಮಿ, ಗ್ರಾಮ ಲೆಕ್ಕಾಧಿಕಾರಿ ಪ್ರೇಮ, ದರಖಾಸ್ತು ಸಮಿತಿ ಗುಮಾಸ್ತ ಬಾಲಾಜಿ ಹಾಗೂ ಸರ್ವೇಯರ್ ಮೌಲಾಖಾನ್‍ರವರುಗಳಿಗೆ ಕಾರಣ ಕೇಳಿ ನೊಟೀಸ್ ಜಾರಿ ಮಾಡಿದ್ದಾರೆ.

ಕೂಡಲೇ ಜಿಲ್ಲಾಧಿಕಾರಿಗಳ ಸಮಕ್ಷಮ ಖುದ್ದು ಹಾಜರಾಗಿ ಸಮಜಾಯಿಷಿ ನೀಡುವಂತೆ ನೊಟೀಸ್ ನಲ್ಲಿ ಸೂಚಿಸಿದ್ದಾರೆ ಎನ್ನಲಾಗಿದೆ. ಕಡತಗಳ ನಡಾವಳಿ ಪುಸ್ತಕದಲ್ಲಿ ಒಂದೇ ದಿನಾಂಕದಲ್ಲಿ ಮೂರು ಬಾರಿ ಅಕ್ರಮವಾಗಿ ಸಾಗುವಳಿದಾರರ ಹೆಸರುಗಳನ್ನು ನಮೂದು  ಮಾಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು ಈ ಬಗ್ಗೆ ತಾಲ್ಲೂಕಿನಲ್ಲಿ ವ್ಯಾಪಕ ಚರ್ಛೆಗಳು ನಡೆಯುತ್ತಿದೆ.

ಕಾನೂನು ಪ್ರಕಾರ ಒಂದು ಬಾರಿ ಸಭೆ ಮುಗಿದ ಬಳಿಕ ಆ ಸಭೆಯಲ್ಲಿ ಮಂಡಿಸಲಾದ ಒಟ್ಟು  ಕಡತಗಳ ವಿವರಗಳನ್ನು ನಮೂದು ಮಾಡಿ ಅಧ್ಯಕ್ಷರು, ಸದಸ್ಯರ ಸಹಿಗಳನ್ನು ಪಡೆದು ಕಡತವನ್ನು ಮುಕ್ತಾಯಗೊಳಿಸಬೇಕು. ಆದರೆ ಈ ಹಿಂದಿನ ತಹಸೀಲ್ದಾರ್ ಸುಜಾತ, ಶಿರಸ್ತೇದಾರ್ ಕೆ.ಸಿ.ಸುರೇಶ್ ಮತ್ತು ಸಿಬ್ಬಂದಿಗಳೆಲ್ಲರೂ ಸೇರಿಕೊಂಡು ಒಂದೇ ದಿನ ಒಟ್ಟು ಮೂರು ಬಾರಿ  ನಡಾವಳಿ ಪುಸ್ತಕದಲ್ಲಿ ಸಾಗುವಳಿದಾರರ ಹೆಸರನ್ನು ನಮೂದು ಮಾಡಿದ್ದಾರೆ ಎಂದು ಸಾರ್ವಜನಿಕರ ಾರೋಪವಾಗಿತ್ತು.

ಬಗರ್ ಹುಕ್ಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಅಧ್ಯಕ್ಷರಾದ ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ರವರ ಸಹಿಯನ್ನು ಹಾಕಿದವರು ಯಾರು? ಶಾಸಕರ ಸಹಿಯನ್ನು ನಕಲಿ ಮಾಡಿ ಅವರ ಮತ್ತು ಬಗರ್ ಹುಕ್ಕುಂ ಸಮಿತಿ ಸದಸ್ಯರ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆಯೇ? ಎಂಬುದು ಸಾರ್ವಜನಿಕ ಆರೋಪವಾಗಿದೆ.

ಕಳೆದ 2022ರ ಏಪ್ರಿಲ್ 27 ರಂದು ನಡೆದ ದರಖಾಸ್ತು ಸಮಿತಿ ಸಭೆಯಲ್ಲಿ ಒಟ್ಟು 40 ಕಡತಗಳನ್ನು ಮಂಡಿಸಿ ಸಮಿತಿ ಅಧ್ಯಕ್ಷರಾದ ಶಾಸಕಿ ಡಾ.ರೂಪಕಲಾ ಎಂ ಶಶಿಧರ್ ಮತ್ತು ಸಮಿತಿ ಸದಸ್ಯರಿಂದ ಅನುಮೋದನೆ ಪಡೆದುಕೊಳ್ಳಲಾಗಿತ್ತು. ಹೀಗೆ ಅನುಮೋದನೆ ಪಡೆದುಕೊಂಡಿರುವ 40 ಕಡತಗಳಲ್ಲಿ ಕೆಜಿಎಫ್ ತಾಲ್ಲೂಕು ಬೇತಮಂಗಲ ಹೋಬಳಿಯ ಗರುಡಾದ್ರಹಳ್ಳಿ ಸರ್ವೆ ನಂ 10ರ ಎಲ್‍ಎನ್‍ಡಿಆರ್‍ಯುಒ/2311/1998-99 ರ ಕಡತವು ಇರುದಿಲ್ಲವೆಂದು ಸಾರ್ವಜನಿಕರು ಆರೋಪ ಮಾಡುತ್ತಿದ್ದಾರೆ.

Related Post

ಶೇ.೯೦ ರಷ್ಟು ದೇಶದ ಸಮುದಾಯಗಳು ಮುಖ್ಯವಾಹಿನಿ ಮಾದ್ಯಮಗಳಲ್ಲಿ, ಕಾರ್ಪೋರೇಟ್ ವಿಭಾಗದಲ್ಲಿ ಮತ್ತು ಅತ್ಯುನ್ನತ ಸರ್ಕಾರಿ ಹುದ್ದೆಗಳಲ್ಲಿ ಭಾಗವಹಿಸುವಿಕೆ ಇಲ್ಲ! : ರಾಹುಲ್ ಗಾಂಧಿ
ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯ ಬಲಗೈ ಸಮುದಾಯಕ್ಕೆ ಅನ್ಯಾಯ ಮಾಡಿವೆ : ಸಮುದಾಯ ಮುಖಂಡರ ಆಕ್ರೋಶ,
ಸಂವಿಧಾನ ಉಳಿಸಲು ದೇಶದ ಸಮಗ್ರತೆ ಕಾಪಾಡಲು ಬಿಜೆಪಿಯನ್ನು ಸೋಲಿಸಿ: ಮಂಜುನಾಥ್ ಅಣ್ಣಯ್ಯ

Leave a Reply

Your email address will not be published. Required fields are marked *

You missed

error: Content is protected !!