• Thu. Apr 25th, 2024

ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಇಲ್ಲದಿದ್ದಿದ್ದರೆ  ಇಂದು ನಾವು ಪಾಕಿಸ್ತಾನಕ್ಕಿಂತ ಕೆಳ ಮಟ್ಟದಲ್ಲಿ ಇರಬೇಕಾಗಿತ್ತು- ವರ್ತೂರ್ ಪ್ರಕಾಶ್

PLACE YOUR AD HERE AT LOWEST PRICE

ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು ಪ್ರಧಾನಿಯಾದ ಮೇಲೆ ದೇಶವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗದಿದ್ದಿದ್ದರೆ ಇಂದು ನಾವು ಪಾಕಿಸ್ತಾನಕ್ಕಿಂತ ಕೆಳ ಮಟ್ಟದಲ್ಲಿ ಇರಬೇಕಾಗಿತ್ತು ಎಂದು ಮಾಜಿ ಸಚಿವ ಆರ್ ವರ್ತೂರ್ ಪ್ರಕಾಶ್ ಹೇಳಿದರು.

ಕೋಲಾರ ತಾಲೂಕಿನ ಚೆಲುವನಹಳ್ಳಿ ಗ್ರಾಮದಲ್ಲಿ ಜೆಡಿಎಸ್ ಪಕ್ಷ ತೊರದ ಹಲವು ಮುಖಂಡರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದ ಅವರು, ಇಡಿ ವಿಶ್ವವೇ ಭಾರತದತ್ತತ ತಿರಗಿ ನೋಡುತ್ತಿದೆ ಎಂದರೆ ಅದಕ್ಕೆ ಕಾರಣ, ಭಾರತೀಯ ಜನತಾ ಪಕ್ಷ ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿ ಅವರು ಪ್ರಧಾನಿಯಾದ ಮೇಲೆ ದೇಶವನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡುಹೋಗಿರುವುದು  ಎಂದು ಅಭಿಪ್ರಾಯಪಟ್ಟರು.

ಒಂದು ವೇಳೆ ಮೋದಿ ಇಲ್ಲದಿದ್ದಿದ್ದರೆ  ಇಂದು ನಾವು ಪಾಕಿಸ್ತಾನಕ್ಕಿಂತ ಕೆಳ ಮಟ್ಟದಲ್ಲಿ ಇರಬೇಕಾಗಿತ್ತು, ಪಾಕಿಸ್ತಾನದಲ್ಲಿ ಇಂದು  ಆಹಾರದ ಕೊರತೆಯಿಂದ ಅಲ್ಲಿನ ಸಾರ್ವಜನಿಕರು ದಂಗೆ ಹೇಳುತ್ತಿದ್ದು ನಮಗೂ ಭಾರತ ದೇಶದ ನರೇಂದ್ರ ಮೋದಿಜಿಯ ಪ್ರಧಾನಿಯಾಗಬೇಕು ಎಂದು ಹಾತೊರೆಯುತ್ತಿದ್ದಾರೆ.

ಈ ದೇಶದ ಬೆನ್ನೆಲುಬು ರೈತ ರೈತನಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಂತಹ ಪಕ್ಷ ಭಾರತೀಯ ಜನತಾ ಪಕ್ಷ ಇಂಥ ಪಕ್ಷವನ್ನು ನಾವು ನೀವುಗಳು ಬೆಂಬಲಿಸಬೇಕು ಈ ದೇಶದ ಹಿಂದುತ್ವ ಉಳಿಯಬೇಕಾದರೆ ಈ ದೇಶದ ರೈತನು ಉಳಿಯಬೇಕಾದರೆ ಭಾರತೀಯ ಜನತಾ ಪಕ್ಷ ಮುಂದಿನ ದಿನಗಳಲ್ಲಿ ಅಧಿಕಾರದಲ್ಲಿ ಮುಂದುವರಿಯಬೇಕು ಅದಕ್ಕಾಗಿ ನೀವುಗಳು ಬಿಜೆಪಿ ಪಕ್ಷಕ್ಕೆ ಮತ ನೀಡಬೇಕು.

ಬಸವರಾಜ್ ಬೊಮ್ಮಾಯಿ ಜಿ ರವರ ಬಳಿ ಕೋಲಾರ ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ಬೇಕು ಎಂದು ಕೇಳಿದಾಗ ಹಿಂದೆ ಮುಂದೆ ನೋಡದೆ ಹತ್ತು ಕೋಟಿ ಹಣವನ್ನು ಮಂಜೂರು ಮಾಡಿದ್ದಾರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಒಂದು ನಯಾ ಪೈಸೆ ಕೂಡ ಬಿಡುಗಡೆ ಮಾಡಲಿಲ್ಲ ಕೋಲಾರದ ಅಭಿವೃದ್ಧಿಗೆ ಪಣತೊಟ್ಟಿದ್ದಾರೆ ನಮ್ಮ ಹೆಮ್ಮೆಯ ಸಂಸದ ಎಸ್ ಮುನಿಸ್ವಾಮಿ ಅವರ ಹಾದಿಯಲ್ಲಿ ನಾನು ಸಹ ಸಾಗುತ್ತಿದ್ದೇನೆ .

ಕೋಲಾರದ ಅಭಿವೃದ್ಧಿಗೆ ಬೇಕೇ ಬೇಕು ಭಾರತೀಯ ಜನತಾ ಪಕ್ಷ ನಾನು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದು ನನ್ನನ್ನ ಐವತ್ತು ಸಾವಿರ ಮತಗಳ ಅಂತರದಿಂದ ಗೆಲ್ಲಿಸಲು ತಮ್ಮಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ ನಿಮ್ಮ ಮಗನಾಗಿ ನಿಮ್ಮ ಋಣವನ್ನು ತೀರಿಸುವ ಜವಾಬ್ದಾರಿ ನನ್ನದು ನಾನು ಹತ್ತು ವರ್ಷಗಳ ಕಾಲ ಶಾಸಕನಾಗಿದ್ದ ವೇಳೆ ಹಲವಾರು ಯೋಜನೆಗಳನ್ನ ತಂದು ಕ್ಷೇತ್ರವನ್ನು ಅಭಿವೃದ್ಧಿಪಡಿಸಿದ್ದೇನೆ.

ಈಗಿನ ಶಾಸಕರು ಅಭಿವೃದ್ಧಿ ಮಾಡದೆ ಗೆದ್ದಿದ್ದು ಒಂದು ಪಕ್ಷದಿಂದ ಇರೋದು ಒಂದು ಪಕ್ಷದಲ್ಲಿ ಇಂಥವರನ್ನು ಕಟ್ಟಿಕೊಂಡು ಏನೋ ಅಭಿವೃದ್ಧಿ ಆಗುತ್ತೆ ಶ್ರೀನಿವಾಸ ಗೌಡರು ಗೆದ್ದಿದ್ದರಿಂದ ಕೋಲಾರ ಹತ್ತು ವರ್ಷಗಳ ಹಿಂದಕ್ಕೆ ಹೋಗಿದೆ ಇನ್ನು ಸಿದ್ದರಾಮಯ್ಯ ಸ್ಪರ್ಧಿಸಿ ಗೆದ್ದರೆ 40 ವರ್ಷಗಳ ಹಿಂದಕ್ಕೆ ಹೋಗುತ್ತದೆ ಕೋಲಾರದ ಜನತೆ ಬುದ್ಧಿವಂತರು ನೀವು ಭಾರತೀಯ ಜನತಾ ಪಕ್ಷಕ್ಕೆ ಮತ ಕೊಡುತ್ತೇವೆಂಬ ಆಶಾ ಭಾವನೆ ಹಾಗೂ ನನಗೆ ನಂಬಿಕೆ ಇದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಬೆಗ್ಲಿ ಸೂರ್ಯ ಪ್ರಕಾಶ್ , ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಸಿ ಎಸ್ ವೆಂಕಟೇಶ್, ತಾಲೂಕು ಅಧ್ಯಕ್ಷ ಸಿಡಿ ರಾಮಚಂದ್ರಗೌಡ, ಕುರುಬರ ಸಂಘದ ಅಧ್ಯಕ್ಷ ತಂಬಳ್ಳಿ ಮುನಿಯಪ್ಪ, ಜಿಲ್ಲಾ ರೈತ ಮೋರ್ಚ ಉಪಾಧ್ಯಕ್ಷ ಎಚ್ ಶ್ರೀನಿವಾಸ್, ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾದ ಮುಖಂಡರಾದ ಆಂಜಿನಪ್ಪ, ನಾರಾಯಣಸ್ವಾಮಿ, ಚಿಕ್ಕಣ್ಣ, ಪಾಪಣ್ಣ,ವೆಂಕಟಪ್ಪ, ಶಬರಿ ಕುಮಾರಿ, ಮಂಜುಳಾ, ಚಿಕ್ಕ ಯಲ್ಲಪ್ಪ, ನಂಜುಂಡಸ್ವಾಮಿ, ಸುರೇಶ್, ಗ್ರಾಮದ ಹಿರಿಯರು ಉಪಸ್ಥಿತರಿದ್ದರು

Related Post

ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ
ತಳಸಮುದಾಯವರು ಇಂದಿನ ಸುಳ್ಳುಗಳ ಜೊತೆಗೆ ಟ್ಯಾಗ್ ಆಗುತ್ತಿರುವುದು ದುರಂತ – ಎಲ್.ಎನ್.ಮುಕು0ದರಾಜ್
ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ರವರಿಗೆ ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತ ರಂಗ ಬೆಂಬಲ : ಡಾ.ಎಂ. ಚಂದ್ರಶೇಖರ್

Leave a Reply

Your email address will not be published. Required fields are marked *

You missed

error: Content is protected !!