• Sat. Mar 2nd, 2024

PLACE YOUR AD HERE AT LOWEST PRICE

ಮಾಜಿ ಮುಖ್ಯಮಂತ್ರಿ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸ್ಪರ್ಧೆ ವಿಚಾರವಾಗಿ ವಿರೋಧಪಕ್ಷಗಳು ದಿನನಿತ್ಯ ಅಪಪ್ರಚಾರದಲ್ಲಿ ತೊಡಗಿದ್ದಾರೆ ಯಾರು ಕಿವಿ ಕೊಡಬೇಡಿ ಹಬ್ಬದ ರೀತಿಯಲ್ಲಿ ಕಾಂಗ್ರೆಸ್ ಪ್ರಚಾರದ ಕಾರ್ಯಕ್ರಮಗಳನ್ನು ಮಾಡೋಣ ಎಂದು ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ತಿಳಿಸಿದರು

ನಗರದ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಛೇರಿಯಲ್ಲಿ ಸಿದ್ದರಾಮಯ್ಯ ಮಾ 20ರಿಂದ ಎರಡು ದಿನಗಳ ಕೋಲಾರ ವಿಧಾನಸಭಾ ಕ್ಷೇತ್ರದ ಪ್ರವಾಸದ ಕುರಿತಂತೆ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಸಿದ್ದರಾಮಯ್ಯ ಕೋಲಾರಕ್ಕೆ ಬಂದು ಸ್ಪರ್ಧೆ ಮಾಡುತ್ತೇನೆ ಎಂದ ದಿನಗಳಿಂದ ವಿರೋಧಪಕ್ಷಗಳು ಅವರು ಬರೋದಿಲ್ಲ ಬಂದರೂ ಕೈಗೆ ಸಿಗೋದಿಲ್ಲ ಅಂತ ಎಲ್ಲಾ ಅಪಪ್ರಚಾರದಲ್ಲಿ ತೊಡಗಿದ್ದಾರೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮತ್ತು ಮುಖಂಡರು ಒಗ್ಗಟ್ಟಿನಿಂದ ಪಕ್ಷವನ್ನು ಸಂಘಟಿಸಿ ಇತಿಹಾಸ ಪುಟಗಳಲ್ಲಿ ಈ ಬಾರಿಯ ಸಿದ್ದರಾಮಯ್ಯ ಗೆಲುವು ದಾಖಲಾಗುವಂತೆ ಮಾಡಬೇಕು ಎಂದರು

ಸಿದ್ದರಾಮಯ್ಯ ಅವರು ರಾಜ್ಯಾದ್ಯಂತ ಪ್ರವಾಸ ಮಾಡಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿ ಹೊತ್ತಿದ್ದಾರೆ ಅದರಂತೆ ಮಾರ್ಚ್ 20 ರಂದು ಕೋಲಾರ ವಿಧಾನಸಭಾ ಕ್ಷೇತ್ರದ ಗ್ರಾಮಾಂತರ ಪ್ರದೇಶದಲ್ಲಿ ಎಂಟು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಭೆಗಳು ನಡೆಯುತ್ತವೆ ಮಾ 21 ರಂದು ನಗರಸಭೆ ವ್ಯಾಪ್ತಿಯಲ್ಲಿ ನಡೆಯುವ ಸಭೆಗಳಲ್ಲಿ ಭಾಗವಹಿಸುತ್ತಾರೆ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ಸೇರಿದಂತೆ ಯೋಜನೆಗಳನ್ನು ಮನೆ ಬಾಗಿಲಿಗೆ ತಿಳಿಸಬೇಕು ಜೊತೆಗೆ ಕಾರ್ಯಕರ್ತರು ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದರು

ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಸಭಾಪತಿ ವಿ.ಆರ್ ಸುದರ್ಶನ್ ಮಾತನಾಡಿ ಈಗಾಗಲೇ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಒಗ್ಗಟ್ಟಿನಿಂದ ಗ್ರಾಮಗಳಿಗೆ ಮತ್ತು ವಾರ್ಡ್ ಗಳಿಗೆ ಭೇಟಿ ನೀಡಿ ಬೂತ್ ಸಮಿತಿಗಳನ್ನು ರಚಿಸಿದ್ದು ಅವರ ಮೂಲಕ ಮತದಾರರು ಹೆಚ್ಚಿನ ಪ್ರಮಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುವಂತೆ ಮಾಡಬೇಜು ಜಿಲ್ಲೆಯ ಹೊಸ ಪರಂಪರೆಯನ್ನು ಸ್ಥಾಪಿಸಲು ಅಭಿವೃದ್ಧಿ ಮತ್ತು ಸಂಘಟನೆಯ ಜೊತೆಗೆ ದೊಡ್ಡ ಅಂತರದ ಗೆಲುವು ಸಿದ್ದರಾಮಯ್ಯ ಅವರಿಗೆ ಸಿಗುವಂತೆ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಎಂಎಲ್ಎ ಕೆ.ಶ್ರೀನಿವಾಸಗೌಡ, ಎಂಎಲ್ಸಿ ನಜೀರ್ ಅಹಮದ್, ಮಾಜಿ ಸಚಿವ ನಿಸಾರ್ ಅಹಮದ್, ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಲಕ್ಷ್ಮೀನಾರಾಯಣ, ಕಾರ್ಯಾಧ್ಯಕ್ಷ ಊರಬಾಗಿಲು ಶ್ರೀನಿವಾಸ್, ಮುಖಂಡರಾದ ಪ್ರಸಾದ್ ಬಾಬು, ನಂದಿನಿ ಪ್ರವೀಣ್, ಜಯದೇವ್, ಶ್ರೀಕೃಷ್ಣ, ವಕ್ಕಲೇರಿ ರಾಜಪ್ಪ, ಅಂಬರೀಶ್, ಜಗನ್ ಜಗದೀಶ್, ರತ್ನಮ್ಮ, ಮುರಳಿ, ರೌತ್ ಶಂಕರಪ್ಪ, ಲಾಲ್ ಬಹಾದ್ದೂರ್ ಶಾಸ್ತ್ರಿ, ಒಬಿಸಿ ಮಂಜುನಾಥ್, ಮುಂತಾದವರು ಇದ್ದರು

Leave a Reply

Your email address will not be published. Required fields are marked *

You missed

error: Content is protected !!