• Fri. May 3rd, 2024

PLACE YOUR AD HERE AT LOWEST PRICE

ಕೆಜಿಎಫ್ ನಗರದ ಗಿಡ್ಡೆಗೌಡನಹಳ್ಳಿ ಗ್ರಾಮ ವ್ಯಾಪ್ತಿಯ ಸರ್ವೆ ನಂಬರ್ ೩೫ ರಲ್ಲಿ ೨.೩೦ ಎಕರೆ ಪ್ರದೇಶದಲ್ಲಿ ಪವರ್‌ಲೂಮ್ ಹಾಗೂ ಗ್ರಾಮೆಂಟ್ಸ್ ಕಾರ್ಖಾನೆಯನ್ನು ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದ್ದು ಅತಿ ಶೀಘ್ರವಾಗಿ ಕೈಗಾರಿಕೆಯನ್ನು ನಮ್ಮ ಕ್ಷೇತ್ರದ ನಿರುದ್ಯೋಗ ಯುವಕ ಯುವತಿಯರಿಗೆ ಸರ್ಮಪಣೆ ಮಾಡುವುದಾಗಿ ಜೆಡಿಎಸ್ ಮುಖಂಡ ಕೆಜಿಎಫ್ ಪವರ್ ಲೂಮ್ ಚೇರರ್ಮೆನ್ ಕೆ.ರಾಜೇಂದ್ರನ್ ಘೋಷಿಸಿದರು.

ಪವರ್ ಲೂಮ್ ಹಾಗೂ ಗ್ರಾಮೆಂಟ್ಸ್ ಕೈಗಾರಿಕೆಯ ಸ್ಥಳದಲ್ಲಿ ಮಂಗಳವಾರ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಕೆ.ರಾಜೇಂದ್ರನ್ ಕೆಜಿಎಫ್ ವಿಧಾನಸಭೆ ಕ್ಷೇತ್ರದಲ್ಲಿ ಯಾವ ಜನಪ್ರತಿನಿಧಿ ಸಹ ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ಅವಕಾಶವನ್ನು ಕಲ್ಪಿಸುವ ನಿಟ್ಟಿನಲ್ಲಿ ಯಾವುದೆ ಪ್ರಯತ್ನ ಸಹ ನಡೆಸಿಲ್ಲ ಕ್ಷೇತ್ರದ ಜನರಿಗೆ ಸುಳ್ಳು ಆಶ್ವಾಸನೆಗಳನ್ನು ಮಾತ್ರ ನೀಡುತ್ತಾ ಮತ ಪಡೆದು ಜನರ ಸಂಕಷ್ಟವನ್ನು ಮರೆತು ಬಿಡುತ್ತಾರೆ ಆದರೆ ನಾನು ಕಳೆದ ೭ ವರ್ಷಗಳಿಂದ ಈ ಒಂದು ಯೋಜನೆ ಕಾರ್ಯಗತ ಮಾಡಲು ಶ್ರಮವಹಿಸಿದ್ದೇನೆ ಎಂದರು.

ಪ್ರಾರಂಭದಲ್ಲೇ ದಿವಂಗತ ಮಾಜಿ ಶಾಸಕ ಭಕ್ತವತ್ಸಲಂ ಮಾಜಿ ಶಾಸಕ ಎಸ್.ರಾಜೇಂದ್ರನ್ ಸೇರಿದಂತೆ ಹಲವು ಮುಖಂಡರು ಬಹಳಷ್ಟು ತೊಂದರೆಯನ್ನು ರಾಜಕೀಯವಾಗಿ ಹಾಗೂ ಕಾರ್ಖಾನೆ ಪ್ರಾರಂಭಿಸುವ ನಿಟ್ಟಿನಲ್ಲಿ ಇಟ್ಟ ಹೆಜ್ಜೆಯಲ್ಲಿ ನೀಡಿದ್ದರೆ ಆದರು ಕಷ್ಟಪಟ್ಟು ನನ್ನ ಮನೆಯನ್ನು ಬ್ಯಾಂಕ್‌ನಲ್ಲಿ ಅಡವಿಟ್ಟು ನನ್ನ ಸೇಹ್ನಿತರ ಬಳಿ ಕೈಸಾಲವನ್ನು ಮಾಡಿಕೊಂಡು ಈ ಯೋಜನೆಯನ್ನು ಪೂರ್ಣಗೊಳಿಸಲು ಕಂಕಣ ತೊಟ್ಟಿದ್ದೇನೆ.

ಈ ಭಾಗದಲ್ಲಿನ ೩೫೦ ಎಕರೆಯಷ್ಟು ಸರ್ಕಾರಿ ಜಮೀನು ಇದ್ದು ಹಿಂದಿನ ನಾಡ ಕಚೇರಿಯಲ್ಲಿ ಜಮೀನು ನೀಡಿರುವಂತೆ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ೫೧,೫೩ ರಲ್ಲಿ ಅರ್ಜಿ ಹಾಕಿದ್ದಾರೆ ಆದರೆ ಈ ಭಾಗದಲ್ಲಿರುವ ಯಾವುದೆ ಜಮೀನು ಯಾರಿಗೂ ಸ್ವಂತವಿಲ್ಲ ನಾನು ಈ ಜಮೀನು ಪಡೆಯಲು ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದೇ ಜಿಲ್ಲಾಧಿಕಾರಿಗಳಿಂದ ಹಿರಿಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಪ್ರಸ್ಥಾವನೆ ಹೋಗಿ ಅಲ್ಲಿ ಸಂಭAದಪಟ್ಟ ಸಚಿವರು ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಕೆಜಿಎಫ್ ಪವರ್ ಲೂಮ್ ಗ್ರಾಮೆಂಟ್ಸ್ ಪ್ರಾರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದರು.

ಸರ್ಕಾರಿ ನಿಯಮಗಳ ಅನುಸಾರವಾಗಿ ನಗರ ಪ್ರದೇಶ ವ್ಯಾಪ್ತಿಯ ೫ ಕಿಲೋಮಿಟರ್ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನು ಮಂಜೂರು ಮಾಡುವಂತಿಲ್ಲ ಎಂಬ ನಿಯಮವಿದೆ ಆದ್ದರಿಂದ ನಾನು ಈ ಭಾಗದಲ್ಲಿ ಎಷ್ಟು ಮಂದಿಗೆ ಜಮೀನು ಮಂಜೂರು ಮಾಡಲಾಗಿದೆ ಮತ್ತು ಯಾವ ಆಧಾರದ ಮೇರಗೆ ಮಂಜೂರು ಮಾಡಲಾಗಿದೆ ಎಂಬುದನ್ನು ತನಿಖೆ ನಡೆಸಬೇಕು ಎಂದು ಲೋಕಾಯುಕ್ತಕ್ಕೆ ದೂರು ನೀಡಲಿದ್ದೇನೆ ಎಂದು ಹೇಳಿದರು.

ಈ ಕಾರ್ಖಾನೆಯಲ್ಲಿ ಕನಷ್ಟ ಪಕ್ಷ ೧೦೦೦ ಸಾವಿರ ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗ ಅವಕಾಶ ಲಭಿಸಲಿದೆ ಎಂದು ಹೇಳಿ ಇಂತಹ ಉದ್ಯೋಮ ಸ್ಫಾಪನೆಯನ್ನು ನಮ್ಮ

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!