• Thu. Apr 25th, 2024

PLACE YOUR AD HERE AT LOWEST PRICE

ಅಮೂಲ್‌ನ್ನು ರಾಜ್ಯದಲ್ಲಿ ನಿಷೇದಿಸಿ ನಂದಿನಿಯನ್ನು ಉಳಿಸಿ ಬೆಳೆಸಬೇಕೆಂದು ರೈತ ನಾಯಕ ಪ್ರೊ.ನಂಜುಂಡಸ್ವಾಮಿ ಸ್ಥಾಪಿತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ಮಾನ್ಯ ಉಪ ವಿಭಾಗಾಧಿಕಾರಿ ವೆಂಕಟಲಕ್ಷ್ಮಿ ಮತ್ತು ತಹಸೀಲ್ದಾರ್ ಹರ್ಷವರ್ಧನ್ ಮುಖಾಂತರ ಮುಖ್ಯ ಮಂತ್ರಿಗಳಲ್ಲಿ ಹಾಗೂ ಸಹಕಾರ ಸಚಿವರಗಳಿಗೆ ಮನವಿಯನ್ನು ಸಲ್ಲಿಸಲಾಯಿತು.

ಕರ್ನಾಟಕ ನಂದಿನಿಯನ್ನು ಉಳಿಸಿ, ಗುಜರಾತ್ ಅಮೂಲ್‌ನ್ನು ತೊಲಗಿಸಿ ಎಂದು ರೈತ ಸಂಘದ ಮುಖಂಡರು ಆಗ್ರಹಿಸಿದರು.

ಕರ್ನಾಟಕ ರಾಜ್ಯದಲ್ಲಿ ೧೭೦೧೪ ನೊಂದಾಯಿತ ಸಹಕಾರ ಸಂಘಗಳು ಇವೆ. ಕರ್ನಾಟಕ ರಾಜ್ಯದಲ್ಲಿ ಸುಮಾರು ೨೭ ಸಾವಿರ ಹಳ್ಳಿಗಳಲ್ಲಿ ಹೈನುಗಾರಿಕೆಯಿಂದ ರೈತರು ಜೀವನ ಮಾಡುತ್ತಿದ್ದಾರೆ. ಆದರೆ ಇವತ್ತಿಗೂ ಕೂಡ ೧೫೦೪೩ ಸಹಕಾರ ಸಂಘಗಳು ಸಕ್ರಿಯವಾಗಿ ಕೆಲಸ ನಿರ್ವಹಿಸುತ್ತಿದ್ದು, ೭೦ ರಿಂದ ೮೦ ಲಕ್ಷ ಲೀಟರ್ ಹಾಲನ್ನು ಉತ್ಪಾದನೆ ಮಾಡುತ್ತಿದ್ದಾರೆ. ಅದರಲ್ಲಿ ೮ ರಿಂದ ೧೦ ಲಕ್ಷ ಲೀಟರ್ ಹಾಲು ಬರಿ ಮೊಸರಿಗೆ ಮಾತ್ರ ಬಳಸುತ್ತಾರೆ. ೨೦೨೨ ರ ಕೆ.ಎಂ.ಎಫ್ ಆದಾಯ ೪೯೨೦ ಕೋಟಿ ರೂಗಳು ಕೆ.ಎಂ.ಎಫ್ ವಾರ್ಷಿಕ ಆದಾಯ ರೂ. ೧೯೭೮೪ ಕೋಟಿ ರೂಗಳು, ೨೦೨೦ ರ ಆದಾಯ ೪೭೨೫ ಕೋಟಿ ರೂಗಳು, ೨೦೨೧ ರಲ್ಲಿ ಇನ್ನು ಸ್ವಲ್ಪ ಏರಿಕೆಯಾಗಿ ೫೩೫೬ ಕೋಟಿ ರೂಗಳು ಆದಾಯ ಕೆ.ಎಂ.ಎಫ್ ತಲುಪಿದೆ.

ಇದನ್ನೇ ನಂಬಿರುವ ಗ್ರಾಮೀಣ ಭಾಗದ ೨೬ ಲಕ್ಷ ರೈತರು ಹೈನುಗಾರಿಕೆಯನ್ನು ನಂಬಿದ್ದಾರೆ. ಇನ್ನಿತರೆ ಕೃಷಿ ಚಟುವಟಿಕೆಗಳಲ್ಲಿ ರೈತರಿಗೆ ಬದುಕಲು ಬೇದಾಷ್ಟು ಆದಾಯ ಬರುತ್ತಿಲ್ಲ. ಬಹಳಷ್ಟು ನಷ್ಟದಲ್ಲಿ ರೈತರು ಅನುಭವಿಸುತ್ತಿದ್ದು, ರಾಜ್ಯದಲ್ಲಿ ಸಾಲದ ಸೋಕ್ಕೆ ಸಿಲುಕಿ ರೈತರ ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆಗಳು ಕೂಡ ರಾಜ್ಯದಲ್ಲಿವೆ. ಇಂತಹ ಸಂದರ್ಭದಲ್ಲಿ ರೈತರನ್ನು ಕೈ ಹಿಡಿದಿದ್ದೇ ಹೈನುಗಾರಿಕೆ.
ಆದ್ದರಿಂದ ಕರ್ನಾಟಕದ ಹೈನುಗಾರಿಕೆ ಉದ್ಯಮವಾದ ನಂದಿನಿಯನ್ನು ಉಳಿಸಿ ಬೆಳೆಸುವಂತಹ ಜವಾಬ್ದಾರಿ ಎಲ್ಲರ ಮೇಲೆ ಇದೆ, ಅಮೂಲ್ ಜೊತೆ ನಂದಿನಿ ವಿಲೀನ ಮಾಡಲು ಪ್ರಥಮ ಹೆಜ್ಜೆಯಾಗಿ ಅಮೂಲ್ ಹಾಲನ್ನು ಕರ್ನಾಟಕಕ್ಕೆ ಸರಬರಾಜು ಮಾಡಿಕೊಂಡು ಹಾಲ್‌ಬೂತ್‌ಗಳ ಮುಖಾಂತರ ಆನ್‌ಲೈನ್ ಮುಖಾಂತರ ಡಿಲೆವರಿ ಬಾಯ್‌ಗಳ ಮುಖಾಂತರ ಮಾರಾಟ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ನಂದಿನಿಗೆ ಬಹಳಷ್ಟು ತೊಂದರೆಯಾಗಲಿದೆ ಎಂದು ವಿವರಿಸಿದರು.

ಈ ಸಂದರ್ಭದಲ್ಲಿ ಯುವ ಘಟಕ ಅಧ್ಯಕ್ಷ ಕಲ್ವಮಂಜಲಿ ರಾಮುಶಿವಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ, ಜಿಲ್ಲಾಧ್ಯಕ್ಷರು ಕೊಲದೇವಿ ಗೋಪಾಲಕೃಷ್ಣಮೂರ್ತಿ, ಜಿಲ್ಲಾ ಗೌರವಾಧ್ಯಕ್ಷರು ಕೊತ್ತಮೀರಿ ಮಂಜುನಾಥ, ಮುಳಬಾಗಿಲು ತಾಲ್ಲೂಕು ಅಧ್ಯಕ್ಷರು ಲಕ್ಷ್ಮೀನಾರಾಯಣಶೆಟ್ಟಿ, ಶ್ರೀನಿವಾಸಪುರ ತಾಲೂಕು ಅಧ್ಯಕ್ಷ ದೊಡ್ಡಕುರುಬರಹಳ್ಳಿ ಶಂಕರೇಗೌಡ, ಕೋಲಾರ ತಾಲೂಕು ಅಧ್ಯಕ್ಷ ಜಗನ್ನಾಥರೆಡ್ಡಿ, ತೇರಹಳ್ಳಿ ಚಂದ್ರಪ್ಪ, ಮುಳಬಾಗಿಲು ತಾಲೂಕು ಮುಖಂಡ ವಿಶ್ವನಾಥ, ಮಹಿಳಾ ಘಟಕ ಮುಖಂಡರಾದ ವಕ್ಕಲೇರಿ ನಾಗವೇಣಮ್ಮ, ರಮಾಮಣಿ, ಬೈರಮ್ಮ, ಭವ್ಯ, ಮುಂತಾದವರು ಉಪಸ್ಥಿತರಿದ್ದರು.

 

Related Post

ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ
ತಳಸಮುದಾಯವರು ಇಂದಿನ ಸುಳ್ಳುಗಳ ಜೊತೆಗೆ ಟ್ಯಾಗ್ ಆಗುತ್ತಿರುವುದು ದುರಂತ – ಎಲ್.ಎನ್.ಮುಕು0ದರಾಜ್
ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ರವರಿಗೆ ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತ ರಂಗ ಬೆಂಬಲ : ಡಾ.ಎಂ. ಚಂದ್ರಶೇಖರ್

Leave a Reply

Your email address will not be published. Required fields are marked *

You missed

error: Content is protected !!