• Sat. Jul 27th, 2024

PLACE YOUR AD HERE AT LOWEST PRICE

ಹಣ, ಜಾತಿ, ಧರ್ಮಗಳ ಪ್ರಭಾವಕ್ಕೊಳಗಾಗದೆ ಕಡ್ಡಾಯ ಮತದಾನ ಮಾಡಬೇಕೆಂದು ಮತದಾರರನ್ನು ಉತ್ತೇಜಿಸಲು ಚುನಾವಣಾ ಆಯೋಗವು ಸ್ಪೀಪ್ ಕಾರ್ಯಕ್ರಮಗಳನ್ನು ನಡೆಸುತ್ತಿದೆ.

ಭಾನುವಾರ ಬೆಳಿಗ್ಗೆ ಕೋಲಾರ ನಗರದ ಕಾಲೇಜು ವೃತ್ತದಲ್ಲಿ ಸಾರ್ವಜನಿಕರು ಮತದಾರರ ಜಾಗೃತಿ ಹೆಸರಿನಲ್ಲಿ ಅಳವಡಿಸಿರುವ ಆಧಾರವಿಲ್ಲದ ಫ್ಲೆಕ್ಸ್ ಸ್ವಾಭಿಮಾನಿ ಮತದಾರರೇ ಮತವನ್ನು ಮಾರಾಟಕ್ಕಿಡಬೇಡಿ ಎಂಬ ಸಂದೇಶದಲ್ಲಿ ಅಳವಡಿಸಿದ್ದು ಗಮನ ಸೆಳೆದಿದೆ.

ಫ್ಲೆಕ್ಸ್ ನಲ್ಲಿ ಮತವನ್ನು ಹಣಕ್ಕೆ ಮಾರಾಟ ಮಾಡಿಕೊಳ್ಳುವುದು ನಾಯಿಯ ಹೇಸಿಗೆಗೆ ಬಾಯಿಯೊಡ್ಡಿದಂತೆ ಎಂಬುದನ್ನು ತೋರಿಸುತ್ತಿದೆ. ನೋಡಲು ಮುಜುಗರ ತಂದರೂ ಮತದಾನದ ಜಾಗೃತಿ ಮೂಡಿಸುವಂತಿದೆಎಂಬ ಅಭಿಪ್ರಾಯ ಜನರಲ್ಲಿ ಮೂಡಿದೆ.

ಚುನಾವಣಾ ಆಯೋಗವು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೂ ಚುನಾವಣಾ ಕಣದಲ್ಲಿ ಹಣ, ಜಾತಿ, ಧರ್ಮಗಳ ಪ್ರಭಾವ ಇಲ್ಲದಿರುವುದನ್ನು ಖಚಿತಪಡಿಸಲು ಸಾಧ್ಯವಾಗುತ್ತಿಲ್ಲ, ಈವರೆವಿಗೂ ಕೋಟ್ಯಾಂತರ ಮೌಲ್ಯದ ಹಣ ಸಾಗಾಣಿಕೆ ಸಂದರ್ಭದಲ್ಲಿ ವಶಪಡಿಸಿಕೊಳ್ಳಲಾಗುತ್ತಿದೆ. ಇದನ್ನು ಮೀರಿದ ಹಣ ಈಗಾಗಲೇ ಆಯಕಟ್ಟಿನ ಜಾಗ ಸೇರಿರುವ ಸಾಧ್ಯತೆಗಳಿವೆ.

ಚುನಾವಣಾ ಕಣದಲ್ಲಿ ಸಭೆಗಿಷ್ಟು, ಸಮಾರಂಭಕ್ಕಿಷ್ಟು, ಮತದಾನಕ್ಕಿಷ್ಟು ಎಂಬಂತೆ ಹಣ ಹಂಚಿಕೆಯಾಗುತ್ತಿರುವುದು ಹಣ ಹಂಚಿಕೆಯ ತಗಾದೆಯ ಸಂದರ್ಭಗಳಲ್ಲಿ ಬೆಳಕಿಗೆ ಬರುತ್ತಿದೆ. ಇದನ್ನು ಗಮನಿಸಿಯೇಜಾಗೃತ ಮತದಾರರ ಹೆಸರಿನಲ್ಲಿ ಕೋಲಾರದ ಆಯಕಟ್ಟಿನ ಜಾಗದಲ್ಲಿ ಅಳವಡಿಸಿರುವ ಈ ಫ್ಲೆಕ್ಸ್ ಮಾರ್ಮಿಕವಾಗಿ ಮತ ಮಾರಾಟ ಮಾಡುವವರನ್ನು ಚುಚ್ಚುವಂತಿರುವುದು ಗಮನ ಸೆಳೆದಿದೆ.

Leave a Reply

Your email address will not be published. Required fields are marked *

You missed

error: Content is protected !!