• Tue. Apr 30th, 2024

PLACE YOUR AD HERE AT LOWEST PRICE

ಬಂಗಾರಪೇಟೆ:ತಾಲ್ಲೂಕಿನ ಬೂದಿಕೋಟೆ ಕಾಮಸಮುದ್ರ ಹೋಬಳಿ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ಎರಡು ಗಂಟೆಗೂ ಹೆಚ್ಚು ಕಾಲ ಉತ್ತಮ ಮಳೆಯಾಗಿದೆ. ಯಾವುದೇ ಮುನ್ಸೂ‍ಚನೆ ಇಲ್ಲದೆ ಸುರಿದ ಆಲಿಕಲ್ಲು ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ ಪರಿಣಾಮ ಜನ ಪರದಾಡುವಂತಾಯಿತು.

ಬೂದಿಕೋಟೆ ಪೆಟ್ರೋಲ್ ಬಂಕ್ ಬಳಿ ಸುಮಾರು 8 ಕ್ಕೂ ಹೆಚ್ಚಿನ ವಿದ್ಯುತ್ ಕಂಬಗಳು ನೆಲಕ್ಕೆ ಉರಳಿದ್ದು, ಅಕ್ಕಪಕ್ಕದ ಜನ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಂಗಾರಪೇಟೆ ಮಾರ್ಗದ ರಸ್ತೆ ಬದಿಗಳಲ್ಲಿ ಇದ್ದಂತಹ ಹತ್ತಕ್ಕೂ ಹೆಚ್ಚಿನ ಮರಗಳು ಬಿರುಗಾಳಿಗೆ ಬುಡ ಸಮೇತ ರಸ್ತೆಗೆ ಉರುಳಿದೆ.

ಇದರ ಪರಿಣಾಮ ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಯಿತು. ಗುಲ್ಲಹಳ್ಳಿ ಕ್ರಾಸ್ ಬಳಿ ಶ್ರೀನಿವಾಸ್ ಎಂಬುವವರಿಗೆ ಸೇರಿದ ಅಂಗಡಿಗೆ ಹಾಕಿದ್ದ ಕಬ್ಬಿಣದ ಶೀಟ್ ಗಳು ಹಾರಿ ಹೋಗಿ ಟ್ರಾನ್ಸ್‌ಫರ್‌ ಮರ್ ಮೇಲೆ ಬಿದ್ದಿದೆ.

ವಿದ್ಯುತ್ ನಿಲುಗಡೆಯಾಗಿದ್ದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಬೂದಿಕೋಟೆ ಗ್ರಾಮದ ರೈತ ಪಾಪೇಗೌಡ ಎಂಬುವವರ ಪಾಲಿ ಹೌಸ್ ನ ಪರದೆ ಸಂಪೂರ್ಣವಾಗಿ ಹರಿದು ಹೋದ ಕಾರಣ ರೈತನಿಗೆ ಲಕ್ಷಾಂತರ ರೂ ನಷ್ಟ ಉಂಟಾಗಿದೆ.

ಬೂದಿಕೋಟೆ ಗ್ರಾಮದಲ್ಲಿ ಮಂಗಳವಾರ ನಡೆದ ಸಂತೆಗೆ ಮಳೆ ತನ್ನ ಆರ್ಭಟವನ್ನು ತೋರಿಸಿದ ಕಾರಣ ಹಣ್ಣು ತರಕಾರಿ ದವಸ ಧಾನ್ಯಗಳು ನೀರು ಪಾಲಾಯಿತು.  ದಿನಸಿ ತರಕಾರಿ ಖರೀದಿಗೆ ಬಂದಿದ್ದ ಗ್ರಾಮಗಳ ಜನರು ಮಳೆಯಿಂದ ಪಾರಾಗಲು ಅಂಗಡಿ ಮುಂಗಟ್ಟುಗಳ ಮೊರೆಹೋದರು.

ತೇವಾಂಶವಿಲ್ಲದೆ ಒಣಗುತ್ತಿದ್ದ ಬೆಳೆಗಳಿಗೆ  ಅಕಾಲಿಕ ಮಳೆಯಿಂದ ಜೀವ ಕಲೆ ತಂದಂತಾಯಿತು. ಗಾಳಿ ಮಳೆ ಆರಂಭವಾಗುತ್ತಿದ್ದಂತೆ ವಿದ್ಯುತ್ ಕೈ ಕೊಟ್ಟ ಕಾರಣ ಹಲವು ಗ್ರಾಮಗಳ ಜನ ಕತ್ತಲಲ್ಲಿ ಕಾಲಹರಣ ಮಾಡುವಂತಾಗಿತ್ತು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!