• Sat. Jul 13th, 2024

PLACE YOUR AD HERE AT LOWEST PRICE

ಆಲ್ ಇಂಡಿಯಾ ನ್ಯೂಸ್ ಪೇಪರ್ ಎಡಿಟರ್ಸ್ ಕಾನೆರೆನ್ಸ್ (ಐನಕ್) ನವದೆಹಲಿಯ ಆಲ್ ಇಂಡಿಯಾ ಕಾರ್ಯಕಾರಿ ಸ್ಥಾಯಿ ಸಮಿತಿ ಸದಸ್ಯರಾಗಿ ಕರ್ನಾಟಕದಿಂದ ಕೋಲಾರದ ಈಮುಂಜಾನೆ ಪ್ರಾದೇಶಿಕ ಕನ್ನಡ ದಿನಪತ್ರಿಕೆ ಸಂಪಾದಕ ಡಾ.ಮಹಮದ್ ಯೂನುಸ್ ಅವರು ನೇಮಕಗೊಂಡಿದ್ದಾರೆ.

ಪ್ರಪ್ರಥಮ ಬಾರಿಗೆ ಕೋಲಾರ ಜಿಲ್ಲೆಯಿಂದ ನವದೆಹಲಿಯ ಆಲ್ ಇಂಡಿಯಾ ಕಾರ್ಯಕಾರಿ ಸ್ಥಾಯಿ ಸಮಿತಿ ಸದಸ್ಯರಾಗಿ ಡಾ.ಮಹಮದ್ ಯೂನುಸ್ ಅವರು ನೇಮಕಗೊಂಡಿರುವುದು ಹರ್ಷದಾಯಕ ಸಂಗತಿಯಾಗಿದೆ.

ಇವರ ಸೇವಾ ಅವಧಿ ೨೦೨೩-೨೬ ರವರೆಗೆ ಆಗಿರುತ್ತದೆ ಎಂದು ಐನಕ್ ನವದೆಹಲಿಯ ಅಧ್ಯಕ್ಷ ರಮೇಶ್ ಗುಪ್ತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನವದೆಹಲಿಯ ಆಲ್ ಇಂಡಿಯಾ ಕಾರ್ಯಕಾರಿ ಸ್ಥಾಯಿ ಸಮಿತಿ ಸದಸ್ಯರಾಗಿ ನೇಮಕಗೊಂಡಿರುವ ಡಾ.ಮಹಮದ್ ಯೂನುಸ್‌ರನ್ನು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಕೆ.ಎಸ್.ಗಣೇಶ್, ವಿ.ಮುನಿರಾಜು, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಖಜಾಂಚಿ ಎ.ಜಿ.ಸುರೇಶ್‌ಕುಮಾರ್ ಅಭಿನಂದಿಸಿದ್ದಾರೆ.

 

Leave a Reply

Your email address will not be published. Required fields are marked *

You missed

error: Content is protected !!