• Wed. May 8th, 2024

ದಿನನಿತ್ಯ ಬದುಕಿನಲ್ಲಿ ಫ್ಲೋರೈಡ್ ಸೇರ್ಪಡೆ-ಜಾಲಪ್ಪ ಆಸ್ಪತ್ರೆ ಸಂಶೋಧನೆ ಪ್ಲೊರೋಸೀಸ್ ನಿಯಂತ್ರಣಕ್ಕೆ ಕ್ಯಾಲ್ಸಿಯಂಭರಿತ ತರಕಾರಿ ಸೇವಿನೆ ಸಹಕಾರಿ

PLACE YOUR AD HERE AT LOWEST PRICE

ಕೋಲಾರ ಜಿಲ್ಲೆಯ ಜನರ ಜೀವನದಲ್ಲಿ ಪ್ಲೋರೈಡ್ ಅಂಶವು ಸೇರ್ಪಡೆಗೊಳ್ಳುತ್ತಿದ್ದು, ಪ್ಲೋರೋಸಿಸ್ ನಿಯಂತ್ರಣಕ್ಕೆ ಕ್ಯಾಲ್ಸಿಯಂಭರಿತ ಸೊಪ್ಪು, ತರಕಾರಿಗಳ ಸೇವನೆ ಮಾಡಬೇಕೆಂದು ಜಾಲಪ್ಪ ಆಸ್ಪತ್ರೆಯ ಸಂಶೋಧನಾ ತಂಡವು ತಿಳಿಸಿದೆ.

ಫ್ಲೋರೈಡ್ ಒಂದು ವಿಶಿಷ್ಟವಾದ ಮತ್ತು ನೈಸರ್ಗಿಕವಾಗಿ ಕಂಡು ಬರುವ ಅಣುವಾಗಿದೆ. ಈ ಅಣುವನ್ನು ನಾವು ಹೆಚ್ಚಾಗಿ ಕಲ್ಲುಬಂಡೆಗಳಲ್ಲಿಕಾಣಬಹುದು. ಕಲ್ಲುಬಂಡೆಗಳಿಂದ ನೀರಿನಲ್ಲಿ ಮತ್ತು ಮಣ್ಣಿನಲ್ಲಿ ಬೆರೆಯುತ್ತದೆ. ಕಾರ್ಖಾನೆಗಳಿಂದ ಹೊರಬರುವ ವಿಸರ್ಜನೆಗಳಿಂದ, ವ್ಯವಸಾಯಕ್ಕೆ ಉಪಯೋಗಿಸುವ ರಸಗೊಬ್ಬರಗಳಿಂದ ಫ್ಲೋರೈಡ್ ಗಾಳಿಯಲ್ಲಿ ಸೇರ್ಪಡೆಯಾಗುತ್ತದೆ. ಈ ರೀತಿಯಾಗಿ ಫ್ಲೋರೈಡ್ ತನ್ನ ವಿಸ್ತಾರವನ್ನು ಹರಡಿಕೊಂಡಿದೆ.
ಜನಜೀವನದಲ್ಲಿ ಫ್ಲೋರೈಡ್‌ಯುಕ್ತ ನೀರು, ಆಹಾರವನ್ನು ಸೇವನೆ ಮಾಡುತ್ತಿದ್ದಾರೆ. ದೇಹದಲ್ಲಿ ಫ್ಲೋರೈಡ್ ಎರಡು ಅಂಚಿನ ಕತ್ತಿಯಂತೆ ಕಾರ್ಯನಿರ್ವಹಿಸುತ್ತದೆ. ಇದು ದಂತ ಮತ್ತು ಮೂಳೆಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಅತಿಯಾದರೆ ಅಮೃತವು ಕೂಡ ವಿಷಎಂಬಂತೆ, ಫ್ಲೋರೈಡ್ ಅತಿಯಾಗಿ ಸೇವಿಸಿದರೆ ಫ್ಲೋರೋಸಿಸ್ ಎಂಬ ಕಾಯಿಲೆಗೆ ಒಳಗಾಗುತ್ತಾರೆ. ಆದ್ದರಿಂದ ನಾವು ಸೇವಿಸುವ ನೀರು ಮತ್ತು ಆಹಾರದಲ್ಲಿ ಫ್ಲೋರೈಡ್‌ನ ಪ್ರಮಾಣವನ್ನು ತಿಳಿಯುವುದು ಅತೀ ಮುಖ್ಯವಾಗಿದೆ.
ಪ್ರತಿನಿತ್ಯ ದಿನಚರಿಗಳಲ್ಲಿ ಉಪಯೋಗಿಸುವ ಆಹಾರ ಪಧಾರ್ಥಗಳಲ್ಲಿ ಇರಬೇಕಾದ ಫ್ಲೋರೈಡ್ ಪ್ರಮಾಣವನ್ನು ಸಂಶೋಧನೆಗಳ ಆಧಾರದ ಮೇಲೆ ಇಲ್ಲಿವಿವರಿಸಲಾಗಿದೆ. ಮೊದಲನೆಯದಾಗಿ ನೀರಿನಲ್ಲಿ ಶೇ. ೦.೫-೧.೫ ಪಿಪಿಎಂ, ಹಸುವಿನಹಾಲು ೦.೦೨ – ೦.೧೬ ಪಿಪಿಎಂ ಮತ್ತು ಎಮ್ಮೆಹಾಲು ೦.೦೧ -೦.೧೮ ಪಿಪಿಎಂ ಟೀಪುಡಿ ೧-೪.೨, ಸೋಡಾ ೧, ಅಕ್ಕಿ ೦.೪-೪.೨, ಗೋ ೦.೪-೩, ಮೊಟ್ಟೆಯಲ್ಲಿ ೦.೦೧, ಮತ್ತು ತರಕಾರಿಗಳಾದ ಈರುಳ್ಳಿ ೦.೦೧, ಟೊಮೆಟೊ ೦.೦೨, ಕ್ಯಾರೆಟ್ ೦.೦೩, ಸೌತೆಕಾಯಿ ೦.೦೧, ಹಸಿರುಮೆಣಸು ೦.೦೧, ತರಕಾರೆಸೊಪ್ಪು ೦.೦೫, ಮೂಲಂಗಿ ೦.೦೬, ಆಲೂಗಡ್ಡೆ೦.೨-೦.೮ ಪಿಪಿಎಂ ವರೆಗೂ ಹಾಗೂ ಹಣ್ಣುಗಳಾದ ಸೇಬು ೦.೦೩, ಆವಕಾಡೊ ೦.೦೭, ಬಾಳೆಹಣ್ಣು ೦.೦೨, ಹಲಸಿನಹಣ್ಣು ೦.೦೧, ಚೆರ್ರ‍ಿಗಳು ೦.೦೨, ದ್ರಾಕ್ಷಿಹಣ್ಣು ೦.೦೧, ಪೀಚ್ಹಣ್ಣು ೦.೦೪, ಪೇರಳೆ ೦.೦೨, ದ್ರಾಕ್ಷಿ೦ ೦.೩-೧.೬ ಸ್ಟ್ರಾಬೆರಿ ೦.೦೪,ಕಲ್ಲಂಗಡಿ ೦.೦೧ ಪಿಪಿಎಂ ಅಷ್ಟುಫ್ಲೋರೈಡ್ ಅಂಶವಿರುತ್ತದೆಂದು ಧಾಖಲೆಯಾಗಿದೆ.
ಆಹಾರ ಪದಾರ್ಥಗಳ ಫ್ಲೋರೈಡ್ ಅಂಶವು, ವ್ಯವಸಾಯದಲ್ಲಿ ಉಪಯೋಗಿಸುವ ನೀರಿನ ಫ್ಲೋರೈಡ್ ಮೇಲೆ ಆಧಾರಿತವಾಗಿರುತ್ತದೆ. ಕೃಷಿಯಲ್ಲಿ ಬಳಸುವನೀರಿನಲ್ಲಿ ೨ ಪಿ.ಪಿ.ಎಂಗಿಂತ ಹೆಚ್ಚು ಫ್ಲೋರೈಡ್ ಇದ್ದರೆ, ಅದರಲ್ಲಿ ಬೆಳೆದ ತರಕಾರಿ, ಹಣ್ಣುಹಂಪಲುಗಳಲ್ಲಿಯೂ ಹೆಚ್ಚಾಗಿರುತ್ತದೆ. ಈ ಆಹಾರ ಪದಾರ್ಥಗಳನ್ನು ಸೇವಿಸಿದ ಜೀವರಾಶಿಗಳಲ್ಲಿ ಫ್ಲೋರೋಸಿಸ್‌ನ ದುಷ್ಪರಿಣಾಮಗಳು ಸಂಭವಿಸುತ್ತವೆ.
ಕ್ಯಾಲ್ಸಿಯಂ ಭರಿತ
ಆಹಾರ ಸೇವಿಸಿ
ಕೆಲವೊಂದು ಆಹಾರ ಪದಾರ್ಥಗಳಿಂದ ಫ್ಲೋರೋಸಿಸನ್ನು ಹತೋಟೆಯಲ್ಲಿಡಬಹುದೆಂದು ಸಂಶೋಧನೆಗಳಲ್ಲಿ ಲಿಖಿತವಾಗಿದೆ. ಅವು ಯಾವುವೆಂದರೆ ಕ್ಯಾಲ್ಸಿಯಂ ಹೆಚ್ಚಾಗಿ ಇರುವಂತಹ ಆಹಾರ ಪದಾರ್ಥಗಳಾದ ಹಾಲು, ಸೊಪ್ಪು, ಕೋಸುಗಡ್ಡೆ, ವಿಟಮಿನ್ಸ್ ಇರುವ ಹುಣಸೆಹಣ್ಣು, ನಿಂಬೆಹಣ್ಣು ಆಹಾರಪದಾರ್ಥಗಳು, ಅರಿಸಿನ, ನುಗ್ಗೆಕಾಯಿ ಸೊಪ್ಪು ಮತ್ತುಹಸಿರು ತರಕಾರಿಗಳನ್ನು ಹೆಚ್ಚಾಗಿ ಸೇವಿಸುವುದರಿಂದ, ದೇಹದಲ್ಲಿ ಕ್ಯಾಲ್ಸಿಯಂ ಸಾಂದ್ರತೆಯನ್ನು ಹೆಚ್ಚಿಸಿ, ಫ್ಲೋರೈಡ್‌ನಿಂದ ಆಗುವ ಪರಿಣಾಮಗಳನ್ನು ಕಡಿಮೆ ಮಾಡಬಹುದು.
ಈ ಬಗ್ಗೆ ಶ್ರೀದೇವರಾಜ ಅರಸು ವೈದ್ಯಕೀಯ ಮಹಾವಿದ್ಯಾಲಯ, ಜೀವರಸಾಯನ ಶಾಸ್ತ್ರವಿಭಾಗವು ಫ್ಲೋರೋಸಿಸ್ ಸಂಶೋಧನೆ ಮತ್ತುಪ್ರಾಯೋಗಿಕಪ್ರಯೋಗಾಲಯವನ್ನು ನಿರ್ಮಿಸಿದ್ದಾರೆ. ಈ ಪ್ರಯೋಗಾಲಯದಲ್ಲಿ ಡಾ.ಶಶಿಧರ್ ಕೆ.ಎನ್, ಡಾ.ಆರ್.ಸಾಯಿದೀಪಿಕಾ ಮತ್ತು ಇಂದುಮತಿ ಎ ಎನ್ ಅವರು ಫ್ಲೋರೋಸಿಸ್ ಬಗ್ಗೆ ಅನೇಕ ಸಂಶೋಧನೆಗಳನ್ನು ನಡೆಸುತ್ತಿದ್ದಾರೆ. ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಿ, ಈ ಅಸ್ವಸ್ಥತೆಯನ್ನುಪೂರ್ಣವಾಗಿ ನಿರ್ಮೂಲನೆ ಮಾಡುವುದರಲ್ಲಿ ಶ್ರಮಿಸುತ್ತಿದ್ದಾರೆ. ನೀರಿನಲ್ಲಿ, ಹಾಲಿನಲ್ಲಿ, ಆಹಾರ ಪದಾರ್ಥಗಳಲ್ಲಿ ಹಾಗೂ ಇತರೆ ಜೈವಿಕ ಮಾದರಿಗಳಲ್ಲಿಫ್ಲೋರೈ?ಡ್‌ನ್ನು ಕಂಡು ಹಿಡಿಯುವುದು ಮತ್ತು ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಂಶೋಧನೆಗಳನ್ನು ನಡೆಸುವುದು ಅವರ ಯೋಜನೆಯಾಗಿದೆ. ಈ ಮಾದರಿಗಳಲ್ಲಿಫ್ಲೋರೈಡ್ ಅಂಶವನ್ನು ತಿಳಿದುಕೊಳ್ಳಲು ಹಾಗೂ ಜಾಗೃತರಾಗಲು ಬಯಸುವವರು ಈ ಚರದೂರವಾಣಿ ೯೮೪೫೨೪೮೭೪೨ ಸಂಖ್ಯೆಯನ್ನು ಸಂಪರ್ಕಿಸಿ ಹಾಗೂ ಇದರ ಬಗ್ಗೆಯೇ ಪ್ರಬಂಧಗಳನ್ನು ಯೂಟ್ಯೂಬ್ ಚಾನೆಲ್ ಫ್ಲೋರೋಸಿಸ ರೀಸರ್ಚ್ ಮತ್ತು ರೆಫರಲ್ ಲ್ಯಾಬೊರೇಟರಿಯಲ್ಲಿ ವೀಕ್ಷಿಸಿ ತಿಳಿಯಬಹುದು.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!