• Fri. May 3rd, 2024

ಕೋಲಾರ,ಚಿಕ್ಕಬಳ್ಳಾಪುರ ಜಿಲ್ಲಾ ಪತ್ರಿಕೆಗಳ ಸಂಪಾದಕರ ಸಂಘಕ್ಕೆ ಅಧ್ಯಕ್ಷರಾಗಿ ಮುರಳೀಧರ್, ಪ್ರಧಾನ ಕಾರ್ಯದರ್ಶಿ ಸದಾನಂದ್ ಆಯ್ಕೆ

PLACE YOUR AD HERE AT LOWEST PRICE

ಕೋಲಾರ ಜಿಲ್ಲಾ ಪತ್ರಿಕೆಗಳ ಸಂಪಾದಕರನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಇಂದು ದಿಟ್ಟಹೆಜ್ಜೆಯನ್ನಿಟ್ಟಿರುವ ಅವಿಭಜಿತ ಜಿಲ್ಲೆಗಳಾದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಸಂಪಾದಕರು ತಮ್ಮ ಸಂಘಕ್ಕೆ ಅಧ್ಯಕ್ಷರನ್ನಾಗಿ ಕೋಲಾರ ಧ್ವನಿ ಪತ್ರಿಕೆ ಸಂಪಾದಕ ಹೆಚ್.ಎನ್. ಮುರಳೀಧರ್, ಪ್ರಧಾನ ಕಾರ್ಯದರ್ಶಿಯಾಗಿ ಉದಯ ಮಿತ್ರ ಪತ್ರಿಕೆ ಸಂಪಾದಕ ಎ. ಸದಾನಂದ ಅವರನ್ನು ಆಯ್ಕೆ ಮಾಡಿದರು.
ನಗರದ ವಾರ್ತಾ ಭವನದ ಸಂಭಾಗಣದಲ್ಲಿ ಸೋಮವಾರ ಸಭೆ ಸೇರಿದ್ದ ಅವಿಭಜಿತ ಜಿಲ್ಲೆಗಳ ಪತ್ರಿಕೆಗಳ ಸಂಪಾದಕರು, ಸಂಘದ ಪದಾಧಿಕಾರಿಗಳ ಆಯ್ಕೆಗೆ ಹಿರಿಯರಾದ ಕಲಾವಿದ ವಿಷ್ಣು, ಕೆ.ಎಸ್. ಗಣೇಶ್, ವಿ. ಮುನಿರಾಜು ಅವರುಗಳ ನೇತೃತ್ವವದದಲ್ಲಿ ಸಮ್ಮತಿ ಸೂಚಿಸಿತು.
ಸಂಘದ ಉಪಾಧ್ಯಕ್ಷರಾಗಿ ಚಿಕ್ಕಬಳ್ಳಾಪುರ ಬಯಲುಸಿರಿ ಪತ್ರಿಕೆ ಸಂಪಾದಕಸಿ. ಬಾಲಕೃಷ್ಣ, ದುನಿಯಾ ಪತ್ರಿಕೆ ಸಂಪಾದಕರಾದ ಎನ್. ಮುನಿಯಪ್ಪ, ಕಾರ್ಯದರ್ಶಿಗಳಾಗಿ ಕೋಲಾರ ಕಿರಣ ಪತ್ರಿಕೆ ಸಂಪಾದಕ ಮಹಮದ್ ಚಾಂದ್ ಪಾಷ, ಕೋಲಾರ ಕುಸುಮ ಪತ್ರಿಕೆ ಸಂಪಾದಕ ಆರ್. ವೆಂಕಟೇಶ್ (ಬಾಬಾ), ಕೋಶಾಧ್ಯಕ್ಷರಾಗಿ ಹೆಚ್.ಎಲ್. ಸುರೇಶ್, ಸಂಘದ ನಿರ್ದೇಶಕರಾಗಿ ಗೋಪಿಕಾ ಮಲ್ಲೇಶ್, ಎಂ. ಲಕ್ಷ್ಮಣ್ ಎಂ. ಮುನಿರಾಜು, ಲಕ್ಷ್ಮಣ್, ಜೆ. ಅಂಬರೀಶ್ ಆಯ್ಕೆಗೊಂಡಿದ್ದಾರೆ.
ಸಂಘದ ಸಲಹಾ ಮಂಡಳಿ ಸದಸ್ಯರಾಗಿ ಕೆ.ಎಸ್. ಗಣೇಶ್, ಕಲಾವಿದ ವಿಷ್ಣು, ಅಬ್ಬಣಿ ಶಂಕರ್, ಬ್ಯಾಲಹಳ್ಳಿ ಎಂ. ಗೋವಿಂದಗೌಡ, ವಿ. ಮುನಿರಾಜು, ಕೋ. ನಾ. ಮಂಜುನಾಥ್, ತೇ.ಸಿ. ಬದ್ರಿನಾಥ್ ನಾಮ ನೀರ್ದೇಶನಗೊಂಡಿದ್ದಾರೆ.
ಮಾನ್ಯತೆ ಪಡೆದ ಪತ್ರಿಕಾ ಸಂಪಾದಕರು, ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ, ಸಂಪಾದಕರು ಇನ್ನಷ್ಟು ಗಟ್ಟಿಗೊಳ್ಳಲು ಸಂಘ ಸಹಕಾರಿಯಾಗುತ್ತೆ ಎಂದು ಕನ್ನಡತಿಲಕ ಪತ್ರಿಕೆ ಸಂಪಾದಕರಾದ ಕಲಾವಿದ ವಿಷ್ಣು ತಿಳಿಸಿದರು.
ಜಿಲ್ಲಾ ಮಟ್ಟದ ಪತ್ರಿಕೆಗಳಿಗೆ ಜಾಹೀರಾತೆ ಜೀವಾಳವಾಗಿದ್ದು, ಇತ್ತೀಚಿನ ದಿನಗಳಲ್ಲಿ ಎಲ್ಲಾ ಹಂತದಲ್ಲೂ ಜಿಲ್ಲಾ ದಿನಪತ್ರಿಕೆಗಳನ್ನು ಸೈಡ್‌ಲೈನ್ ಮಾಡುವ ಪ್ರವೃತ್ತಿ ಕೆಲ ರಾಜಕಾರಣಿಗಳಿಂದ ನಡೆಯುತ್ತಿದೆ. ಇದು ಮುಂದುವರೆಯಲು ಬಿಡದೆ, ಸಂಘ ಎಲ್ಲಾ ಹಂತದಲ್ಲೂ ನಿರಂತರ ಜಾಹೀರಾತು ಪಡೆಯುವಲ್ಲಿ ಶ್ರಮಿಸಬೇಕಾಗಿದೆ ಎಂದು ಅಧಿನಾಯಕ ಪತ್ರಿಕೆ ಸಂಪಾದಕರಾದ ಕೆ.ಎಸ್. ಗಣೇಶ್ ಹೇಳಿದರು.
ಸಂಘದ ಪದಾಧಿಕಾರಿಗಳಾದವರು, ಈ ಕ್ಷಣದಿಂದ ವಿವಿಧ ಆಯಾಮಗಳಿಂದ ಸೋರಿಹೋಗುತ್ತಿರುವ ಜಾಹೀರಾತುಗಳನ್ನು ಮತ್ತು ಪತ್ರಿಕೆಗಳಿಗೆ ಲಭಿಸಬಹುದಾದ ಸವಲತ್ತುಗಳನ್ನು ದೊರಕಿಸಿಕೊಡುವ ಜವಬ್ದಾರಿ ನಿಮ್ಮ ಮೇಲಿದೆ, ಇದರೊಂದಿಗೆ ಹಲವು ಜಾಹೀರಾತು ಸಂಸ್ಥೆಗಳಿಂದ ಪತ್ರಿಕೆಗಳಿಗೆ ಬಿಲ್ಲುಗಳು ಬಾಕಿ ಇದ್ದು, ಇದರ ಬಗ್ಗೆ ಗಮನಹರಿಸುವಂತೆ ವಿಯಜಧ್ವನಿ ಪತ್ರಿಕೆ ಸಂಪಾದಕರಾದ ಅಬ್ಬಣಿ ಶಂಕರ್ ತಿಳಿಸಿದರು.
ಎರಡೂ ಜಿಲ್ಲೆಗಳ ಪತ್ರಿಕಾ ಸಂಪಾದಕರು, ತಮ್ಮ ಪತ್ರಿಕೆಗಳಲ್ಲಿ ಅತಿ ಹೆಚ್ಚು ಸ್ಥಳೀಯ ಸುದ್ದಿಗಳನ್ನೇ ಪ್ರಕಟಿಸುತ್ತಿದ್ದಾರೆ. ಹೀಗಿದ್ದರೂ ಕೂಡ, ಕನ್ನಡ ಪತ್ರಿಕೆಗಳಿಗೆ ಜಾಹೀತಿನ ಪ್ರೋತ್ಸಾಹ ಇಲ್ಲದಿರುವುದನ್ನು ಇಲ್ಲಿನ ಜಿಲ್ಲಾಡಳಿತ ಮತ್ತು ಜನಪ್ರತಿನಿಗಳು ಮನಗಾಣಬೇಕೆಂದು ಸಂಯುಕ್ತ ವಿಜಯ ಪತ್ರಿಕೆ ಸಂಪಾದಕರಾದ ವಿ. ಮುನಿರಾಜು ಅಭಿಪ್ರಾಯಿಸಿದರು.
ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳಿಗೆ ಪತ್ರಕರ್ತರಾದ ಎಂ. ಆರ್. ಚೇತನ್‌ಬಾಬು, ಪುನೀತ್, ಚಂದ್ರಶೇಖರ್ ರಾಘವೇಂದ್ರ ಹಾಗೂ ಮತ್ತಿತರರು ಪುಷ್ಪಮಾಲೆ ಹಾಕಿ, ಸಿಹಿ ಹಂಚಿ ಶುಭ ಕೋರಿದರು.

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!