• Thu. Apr 25th, 2024

PLACE YOUR AD HERE AT LOWEST PRICE

ಆರ್.ಸಿ. ಆದೇಶದ ನೆಪದಲ್ಲಿ ೮ ವರ್ಷಗಳಿಂದ ಗಡಿಭಾಗದ ರೈತರ ಮರ ಗಿಡಗಳಿಗೆ ಪರಿಹಾರ ನೀಡದೆ ಸತಾಯಿಸುತ್ತಿರುವ ವಿಶೇಷ ಭೂ ಸ್ವಾನಾಕಾರಿಗಳ ವಿರುದ್ಧ ಕ್ರಮ ಕೈಗೊಂಡು ಪರಿಹಾರ ನೀಡುವಂತೆ ನೊಂದ ರೈತರಿಂದ ಜಿಲ್ಲಾಧಿಕಾರಿ ಅಕ್ರಂಪಾಷಾರಿಗೆ ಮನವಿ ನೀಡಿ ಒತ್ತಾಯಿಸಿದರು.

ನಮ್ಮ ಭೂಮಿ ಯಾವುದೇ ನಕಲಿ ದಾಖಲೆ ಸೃಷ್ಟಿ ಮಾಡಿ ಮಂಜೂರಾಗಿಲ್ಲ. ನಮ್ಮ ಬಳಿ ಲಂಚ ಕೊಡಲು ಹಣವಿಲ್ಲ. ಅಕಾರಿಗಳಿಗೆ ಲಂಚ ಕೊಡಬೇಕಾದರೆ ನಮ್ಮ ರಕ್ತ ಇಲ್ಲವೆ, ಬದುಕಲು ಇರುವ ಎರಡು ಕಿಡ್ನಿಯನ್ನು ಮಾರಾಟ ಮಾಡಿಯಾದರೂ ಲಂಚ ಕೊಡುತ್ತೇವೆ. ನಮ್ಮ ಪರಿಹಾರನ್ನು ಬಿಡುಗಡೆ ಮಾಡಿ ನಿಮ್ಮ ಪಾದಗಳಿಗೆ ಕೈ ಮುಗಿದು ಬೇಡುತ್ತೇವೆ. ಪಿ.ನಂಬರ್ ದುರಸ್ತಿ ಮಾಡಲು ತಾಲೂಕು ಕಚೇರಿಯಲ್ಲಿ ದಲ್ಲಾಳಿಗಳ ನೆರಳಿಲ್ಲದೆ ಅಕಾರಿಗಳ ನೆರಳು ಸಹ ನಾವು ತಾಕಲು ಸಾಧ್ಯವಿಲ್ಲ. ಅಂತಹ ಪರಿಸ್ತಿತಿಯಲ್ಲಿ ಲಕ್ಷ ಲಕ್ಷ ಲಂಚ ಕೊಟ್ಟು, ಪಿ.ನಂಬರ್ ದುರಸ್ತಿ ಮಾಡಲು ಸಾಧ್ಯವೆ ಎಂದು ನೊಂದ ರೈತ ಮಹಿಳೆ ಮಂಗಮ್ಮ ಕಣ್ಣೀರಿನೊಂದಿಗೆ ಜಿಲ್ಲಾಕಾರಿಗಳನ್ನು ಕೈ ಮುಗಿದು ಬೇಡಿಕೊಂಡರು.

ಗಡಿಭಾಗದ ಏತರನಹಳ್ಳಿ, ಚುಕ್ಕನಹಳ್ಳಿ, ಗ್ರಾಮಗಳ ೧೧ ಜನ ರೈತರ ಕೃಷಿ ಜಮೀನನ್ನು ಚೆನ್ನೈ ಕಾರಿಡಾರ್ ರಸ್ತೆ ಅಭಿವೃದ್ದಿಗೆ ವಿಶೇಷ ಭೂಸ್ವಾನಕಾರಿಗಳು ೮ ವರ್ಷಗಳ ಹಿಂದೆ ಸರ್ಕಾರದ ಆದೇಶದಂತೆ ಜಮೀನಿಗೆ ಹಾಗೂ ಮರ ಗಿಡಗಳಿಗೆ ಪರಿಹಾರ ನೀಡಿದ್ದೇನೆಂದು ಭರವಸೆ ನೀಡಿ ಪ್ರತಿ ಎಕರೆಗೆ ಅತಿ ಕಡಿಮೆ ಭೂ ಪರಿಹಾರ ೩ ಲಕ್ಷ ೮೦ ಸಾವಿರ ನೀಡುವ ಜೊತೆಗೆ ನಿಮ್ಮ ಮರ ಗಿಡಗಳಿಗೆ ಪರಿಹಾರ ನೀಡುತ್ತೇವೆಂದು ಭೂ ಸ್ವಾನ ಮಾಡಿಕೊಂಡ ನಂತರ ಜಮೀನಿನಲ್ಲಿದ್ದ ಮರ ಗಿಡಗಳನ್ನು ಹರಾಜು ಹಾಕಲು ಬಿಡದೆ ಜೆ.ಸಿ.ಬಿಗಳ ಮುಖಾಂತರ ಮರಗಿಡಗಳನ್ನು ನಾಶಮಾಡಿ ಭೂ ಸ್ವಾನ ಮಾಡಿಕೊಂಡು ೮ ವರ್ಷ ಕಳೆದರೂ ಇದುವರೆವಿಗೂ ಪರಿಹಾರ ಎಂಬುದು ಮರೀಚಿಕೆಯಾಗಿದೆ ಎಂದು ಅಕಾರಿಗಳ ವಿರುದ್ದ ದೂರು ನೀಡಿದರು.

ಪರಿಹಾರಕ್ಕಾಗಿ ನಾಲ್ಕು ಜನ ಜಿಲ್ಲಾಕಾರಿಗಳ ಬಳಿ ಅಂಗಲಾಚಿ ಬೇಡುವ ಜೊತೆಗೆ ಜಿಲ್ಲೆಯ ಶಾಸಕರು, ಸಂಸದರ ಬಳಿ ಕೈ ಮುಗಿದು ಕಾಲು ಹಿಡಿದುಕೊಂಡರೂ ೧೧ ಜನ ರೈತರ ಪರಿಹಾರ ನೀಡಲು ಇದುವರೆವಿಗೂ ಯಾವುದೇ ಅಕಾರಿಗಳು ಜನ ಪ್ರತಿನಿಗಳು ಸ್ಪಂದಿಸದೆ ಇರುವುದು ದುರದೃಷ್ಟಕರ ಎಂದು ಅಕಾರಿಗಳ ವಿರುದ್ದ ಆಕ್ರೊಷ ವ್ಯಕ್ತಪಡಿಸಿದರು.

ನೊಂದ ರೈತರಾದ ವೆಂಕಟೇಶ್ ಹಾಗೂ ರಾಜಣ್ಣ, ಮಾತನಾಡಿ ವಿಶೇಷ ಭೂಸ್ವಾನ ಅಕಾರಿಗಳಾದ ವೆಂಕಟರಾವ್ ರವರನ್ನು ಕೇಳಿದರೆ ನೀವು ವಿಶೇಷ ಭೂಸ್ವಾನ ಅಕಾರಿಗಳಿಗೆ ಶೇಕಡ ೧೫ ರಷ್ಟು ಲಂಚ ನೀಡಿದರೆ ನಿಮ್ಮ ಕೆಲಸ ಆಗುತ್ತದೆ ಎಂದರು. ಆಗ ನಮ್ಮ ಬಳಿ ಹಣ ವಿರಲಿಲ್ಲ. ಪರಿಹಾರ ನೀಡಿ ಅದರಲ್ಲಿ ಹಿಡಿದುಕೊಳ್ಳಿ ಎಂದರೆ ಒಪ್ಪಲಿಲ್ಲ. ಸ್ಥಳಕ್ಕೆ ಬಂದಾಗ ಡೀಸಲ್‌ಗೆ ಊಟಕ್ಕೆ ಹಣ ಪಡೆಯುತ್ತಿದ್ದರೂ ಜೊತೆಗೆ ಮಾವಿನ ಹಣ್ಣನ್ನು ಕೊಟ್ಟು ಮನೆ ಮಕ್ಕಳಂತೆ ಸಾಕಿದರೂ ನಮ್ಮ ಪರಿಹಾರ ಕೊಡಲಿಲ್ಲ. ಕಡೆಗೆ ನಿಮ್ಮ ಪರಿಹಾರ ಬೇಕಾದರೆ ಜಿಲ್ಲಾಕಾರಿಗಳು ಆದೇಶ ಮಾಡಬೇಕು. ಇಲ್ಲವೆ ನಿಮ್ಮ ಭೂಮಿಯ ಪಿ-ನಂಬರ್ ದುರಸ್ತಿ ಮಾಡಬೇಕೆಂದು ನೆಪ ಹೇಳಿ ಕಡೆಗೆ ೮ ವರ್ಷಗಳಿಂದ ಅಲೆದಾಡಿದರೂ ನಮ್ಮ ಪರಿಹಾರ ಸಿಗಲಿಲ್ಲವೆಂದು ಅಸಮದಾನ ವ್ಯಕ್ತಪಡಿಸಿದರು.

ಆರ್.ಸಿ. ಆದೇಶದಂತೆ ಪಿ.ನಂಬರ್ ದುರಸ್ತಿ ಮಾಡಲು ಭೂ ಸ್ವಾನ ಈಗ ಗೌರವಾನ್ವಿತ ರಾಷ್ಟ್ರ ಪತಿಗಳ ಹೆಸರಿನಲ್ಲಿ ಜಮೀನು ಬರುತ್ತಿದೆ. ಅದರಂತೆ ದುರಸ್ತಿ ಮಾಡಲು ಸಾದ್ಯವಿಲ್ಲ. ಮಾನ್ಯ ಜಿಲ್ಲಾಕಾರಿಗಳು ಮನಸ್ಸು ಮಾಡಿದರೆ ನೊಂದ ರೈತರಿಗೆ ಪರಿಹಾರ ಸಿಗಬಹುದು. ಮಾನ್ಯ ಜಿಲ್ಲಾಕಾರಿಗಳು ೮ ವರ್ಷಳಿಂದ ಮರಗಿಡಗಳ ಪರಿಹಾರಕ್ಕಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಿರುವ ಗಡಿಭಾಗದ ೧೧ ಜನ ನೊಂದ ರೈತರ ಪರಿಹಾರವನ್ನು ವಿತರಣೆ ಮಾಡಲು ವಿಶೇಷ ಭೂ ಸ್ವಾನಾಕಾರಿಗಳಿಗೆ ಆದೇಶ ಮಾಡುವ ಮುಖಾಂತರ ಬಡವರ ಜೀವವನ್ನು ಉಳಿಸಬೇಕೆಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಕಾರಿಗಳಾದ ಅಕ್ರಂಪಾಷ ಸಂಬಂಧಪಟ್ಟ ಎಲ್ಲಾ ಇಲಾಖೆಯ ಅಕಾರಿಗಳ ಸಭೆ ಕರೆದು ಒಂದು ವಾರದೊಳಗೆ ನಿಮ್ಮ ಪರಿಹಾರವನ್ನು ವಿತರಣೆ ಮಾಡುವ ಭರವಸೆಯನ್ನು ನೀಡಿದರು.

ಮನವಿ ನೀಡುವಾಗ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ,. ಚಂಗೇಗೌಡ, ಜನಾರ್ಧನ್,ಸೀನಪ್ಪ, ಮಣಿ, ವೆಂಕಟರಾಮ, ವಿಶ್ವನಾಥ್, ಜಗದೀಶ್, ಶಿವಪ್ಪ, ನಟರಾಜ, ರಾಜಣ್ಣ, ಚಂಗೇಗೌಡ, ರಾಜಪ್ಪ, ಗೀರಿಶ್ ಮುಂತಾದವರಿದ್ದರು.

 

Related Post

ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ
ತಳಸಮುದಾಯವರು ಇಂದಿನ ಸುಳ್ಳುಗಳ ಜೊತೆಗೆ ಟ್ಯಾಗ್ ಆಗುತ್ತಿರುವುದು ದುರಂತ – ಎಲ್.ಎನ್.ಮುಕು0ದರಾಜ್
ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ರವರಿಗೆ ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತ ರಂಗ ಬೆಂಬಲ : ಡಾ.ಎಂ. ಚಂದ್ರಶೇಖರ್

Leave a Reply

Your email address will not be published. Required fields are marked *

You missed

error: Content is protected !!