• Mon. Apr 29th, 2024

PLACE YOUR AD HERE AT LOWEST PRICE

ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ಚುನಾವಣಾ ಪೂರ್ವದಲ್ಲಿ ಚಿತ್ರದುರ್ಗದಲ್ಲಿ ನಡೆದ ಎಸ್.ಸಿ. ಸಮಾವೇಶದಲ್ಲಿ ನೀಡಿದ ವಾಗ್ದಾನದಂತೆ ನ್ಯಾಯಮೂರ್ತಿ ಎ.ಜಿ.ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಈಗ ನಡೆಯುತ್ತಿರುವ ವಿಧಾನಸಭೆ ಹಾಗೂ ವಿಧಾನ ಪರಿಷತ್ ಅಧಿವೇಶನದಲ್ಲಿ ಮಂಡಿಸಿ ಅನುಮೋದನೆ ಪಡೆದು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯ ಪ್ರಧಾನ ಸಂಚಾಲಕ ಬಸವರಾಜ್ ಕೌತಾಳ್ ಒತ್ತಾಯಿಸಿದರು.

ಕೋಲಾರ ನಗರದ ಪ್ರಕರ್ತರ ಭವನದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡುತ್ತಾ, ಎಸ್.ಸಿ.ಎಸ್.ಟಿ ಸಮುದಾಯಗಳಿಗೆ ೨೦೨೩-೨೪ ನೇ ಸಾಲಿನ ಬಜೆಟ್ ನಲ್ಲಿ ಸಮುದಾಯಗಳಿಗೆ ಎಸ್.ಸಿ.ಪಿ-ಟಿ.ಎಸ್.ಪಿ ಕಾಯಿದೆಯಂತೆ ೩೪ ಸಾವಿರ ಕೋಟಿ ಮೀಸಲಿಟ್ಟಿರುವುದು ಸ್ವಾಗತಾರ್ಹ. ಮೀಸಲು ಹಣವನ್ನು ಜನಸಂಖ್ಯೆ ಅನುಗುಣವಾಗಿ ಮಾದಿಗ ಮತ್ತು ಮಾದಿಗ ಸಂಬAಧಿತ ಸಮುದಾಯಗಳಿಗೆ ಶೇ ೬ ರಷ್ಟು, ಹೊಲೆಯ ಮತ್ತು ಹೊಲೆಯ ಸಂಬAಧಿತ ಸಮುದಾಯಗಳಿಗೆ ಶೇ ೫ ರಷ್ಟು, ಭೋವಿ ,ಲಂಬಾಣಿ ಮುಂತಾದ ಸಮುದಾಯಕ್ಕೆ ಶೇ.೩ ರಷ್ಟು, ಅಲೆಮಾರಿ ಸಮುದಾಯಗಳಿಗೆ ಶೇ.೧ ರಷ್ಟು ವರ್ಗೀಕರಿಸಿ ಅಭಿವೃದ್ಧಿಗೆ ಖರ್ಚು ಮಾಡಬೇಕೆಂದು ಆಗ್ರಹಿಸಿದರು.

ಈ ಹಿಂದಿನ ಬಿಜೆಪಿ ಸರ್ಕಾರ ಅವೈಜ್ಞಾನಿಕವಾದ ಶಿಫಾರಸ್ಸುಗಳನ್ನು ಮಾಡುವ ಮೂಲಕ ಪರಿಶಿಷ್ಟ ಜಾತಿ ಸಮುದಾಯಗಳಿಗೆ ಮೋಸ ಮಾಡಿದೆ. ಮೀಸಲಾತಿ ಹೆಚ್ಚಳವು ಸಂವಿಧಾನ ವಿರೋಧಿಯಾಗಿ ನಿಯಮಾವಳಿಗಳನ್ನು ಗಾಳಿಗೆ ತೂರಿ ನೀಡಲಾಗಿದೆ. ಆದರೆ, ಮೀಸಲಾತಿ ಶೇ.೫೦ರ ಮಿತಿಯನ್ನು ದಾಟದ ಹಾಗೆ ವೈಜ್ಞಾನಿಕವಾಗಿ ನೀಡಲಾದ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯನ್ನು ಮೂಲೆಗುಂಪು ಮಾಡಿ ಅನ್ಯಾಯ ಮಾಡಿತ್ತು ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಸದರಿ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸುಗಳನ್ನು ಮಾಡಿದ ನಂತರ ಕೇಂದ್ರ ಸರ್ಕಾರ ಶೆಡ್ಯೂಲ್ ೯ರ ಅಡಿಯಲ್ಲಿ ತಿದ್ದುಪಡಿ ತಂದು ರಾಜ್ಯ ಸರ್ಕಾರ ಅನುಷ್ಟಾನ ಮಾಡಲು ಅವಕಾಶ ಕಲ್ಪಿಸದಿದ್ದರೆ, ಈಗಾಗಲೇ ದಕ್ಷಿಣ ಭಾರತದಾದ್ಯಂತ ಒಳಮೀಸಲಾತಿ ಕುರಿತು ಕೇಂದ್ರಕ್ಕೆ ಶಿಫಾರಸ್ಸುಗಳು ಕಳುಹಿಸಲಾಗಿದೆ. ಮುಂದಿನ ದಿನಗಳಲ್ಲಿ ರಾಷ್ಟçವ್ಯಾಪ್ತಿ ದೊಡ್ಡ ಮಟ್ಟದಲ್ಲಿ ಹೋರಾಟ ರೂಪಿಸುವುದಲ್ಲದೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಾಗುತ್ತದೆ  ಎಂದು ಬಸವರಾಜ್ ಕೌತಾಳ್ ಎಚ್ಚರಿಕೆ ನೀಡಿದರು.

ಡಿ.ಎಸ್.ಎಸ್.ಹಿರಿಯ ಮುಖಂಡ ಎನ್.ವೆಂಕಟೇಶ್ ಮಾತನಾಡಿ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಜನ ವಿರೋಧಿ,ಭ್ರಷ್ಟ, ಸಂವಿಧಾನ ವಿರೋಧಿ ಬಿ.ಜೆ.ಪಿ.ಸರ್ಕಾರವನ್ನು ಸೋಲಿಸುವಲ್ಲಿ ದಲಿತ,ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯಗಳು ಪ್ರಮುಖ ಪಾತ್ರವಹಿಸಿದ್ದು ಕಾಂಗ್ರೆಸ್ ಸರ್ಕಾರ ಆತ್ಮ ಸಾಕ್ಷಿಯಾಗಿ ಒಪ್ಪುಕೊಂಡಿದೆ.ರಾಜ್ಯದ ಜನತೆಗೆ ನೀಡಿದ ೫ ಗ್ಯಾರೆಂಟಿಗಳನ್ನು ಅನುಷ್ಠಾನ ತರುವಲ್ಲಿ ಬಹುತೇಕ ಯಶಸ್ಸು ಕಂಡಿರುವ ಕಾಂಗ್ರೆಸ್ ಸರ್ಕಾರ ದಲಿತರಿಗೆ ನೀಡಿರುವ ಎಲ್ಲಾ ಭರವಸೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಒತ್ತಾಯಿಸಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಸೂಲಿಕುಂಟೆ ರಮೇಶ್ ಮಾತನಾಡಿ, ಒಕ್ಕೂಟದ ಮುಖ್ಯ ಬೇಡಿಕೆಗಳಾದ ನೆನೆಗುದಿಗೆ ಬಿದ್ದಿರುವ ಕಾಂತರಾಜ್ ವರದಿ ಆಧಾರದ ಮೇಲೆ ವರ್ಗೀಕೃತ ಮೀಸಲಾತಿ ಜಾರಿಗೆ ತರಬೇಕು ಹಾಗೂ ಪಿ.ಟಿ.ಸಿ.ಎಲ್ ಕಾಯ್ದೆಗೆ ತಿದ್ದುಪಡಿ ತಂದು ಸಮುದಾಯದ ಜನ ಕಳೆದು ಕೊಂಡ ಜಮೀನುಗಳ ರಕ್ಷಣೆಗೆ ಮುಂದಾಗಬೇಕು, ಕಳೆದ ೩ ವರ್ಷಗಳಿಂದ ತಡೆಹಿಡಿಯಲಾದ ಎಸ್.ಸಿ.ಎಸ್.ಟಿ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ನೀಡಬೇಕೆಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ದಲಿತ ಮುಖಂಡರುಗಳಾದ ಹಾರೋಹಳ್ಳಿ ರವಿ, ಹೂವರಸನಹಳ್ಳಿ ರಾಜಪ್ಪ, ನಾರಾಯಣ್, ಮಂಜುನಾಥ್, ಸುರೇಶ್ ಕೌತಾಳ್ ಉಪಸ್ಥಿತರಿದ್ದರು .

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!