• Thu. Sep 28th, 2023

PLACE YOUR AD HERE AT LOWEST PRICE

ಕೆಜಿಎಫ್:ತಾಲ್ಲೂಕಿನ ಗುಟ್ಟಹಳ್ಳಿ (ಬಂಗಾರುತಿರುಪತಿ)ಯಲ್ಲಿ ಗೋಲ್ಡನ್ ಬಾಯ್ಸ್ ವತಿಯಿಂದ 3 ದಿನಗಳ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಅಂಬೇಡ್ಕರ್ ವೀರ ಸೇನೆ ಸಂಸ್ಥಾಪಕ ಅಧ್ಯಕ್ಷ ಭಟ್ರಕುಪ್ಪ ಅರುಣ್ ಸೇರಿದಂತೆ ಗಣ್ಯರು ಚಾಲನೆ ನೀಡಿದರು.

ಈ ವೇಳೆ ಭಟ್ರಕುಪ್ಪ ಅರುಣ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಕರು ಮೊಬೈಲ್ ಹಾಗೂ ಟಿವಿಗಳ ವ್ಯಾಮೋಹದಿಂದ ಕ್ರೀಡಾ ಚಟುವಟಿಕೆಗಳಿಂದ ದೂರ ಉಳಿಯುತ್ತಿರುವುದು ಬೇಸರ ಸಂಗತಿಯಾಗಿದೆ.

ಯುವಕರು ಕ್ರೀಡೆಗಳಲ್ಲಿ ತೋಡಗಿಸಿಕೊಳ್ಳುವುದರಿಂದ ಆರೋಗ್ಯ ಹಾಗೂ ಉತ್ತಮ ದೇಹ ದೃಢತೆಯನ್ನು ಸಹ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ, ಕ್ರೀಡೆಯಿಂದ ತಮ್ಮಲ್ಲಿನ ಪ್ರತಿಭೆಯನ್ನು ಪ್ರದರ್ಶಿಸಿಕೊಳ್ಳಲು ಸೂಕ್ತ ವೇದಿಕೆಯಾಗುತ್ತದೆ ಎಂದರು.

ಯಾವುದೇ ಕ್ರೀಡಾ ಕೂಟದಲ್ಲಿಯೂ ಸಹ ಸೋಲು-ಗೆಲುವು ಸರ್ವೇ ಸಮಾನ್ಯವಾಗಿರುತ್ತದೆ, ನಿರಂತರ ಪ್ರಯತ್ನದಿಂದ ಯಾವ ಕ್ರೀಡೆಯಲ್ಲಿ ಬೇಕಾದರೂ ಗೆಲುವು ಸಾಧಿಸುವುದು ಸಾಧ್ಯವಾಗುತ್ತದೆ ಎಂದರು.

ಈ ಭಾಗದ ಯುವಕರು ಯಾವುದೇ ಕ್ರೀಡಾಕೂಟವನ್ನು ಹಮ್ಮಿಕೊಂಡರು ಸಹ ತಮ್ಮಮ ಸಂಪೂರ್ಣ ಸಹಕಾರ ಇರುತ್ತದೆ, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕ್ರಿಕೆಟ್ ಪಂದ್ಯಾವಳಿ ಸೇರಿದಂತೆ ಇತರೆ ಕ್ರೀಡಾಕೂಟಗಳಲ್ಲಿಯೂ ಭಾಗವಹಿಸಲು ತಿಳಿಸಿದರು.

ಈ ಸಂದರ್ಭದಲ್ಲಿ ಕ್ರಿಕೆಟ್ ಪಂದ್ಯಾವಳಿಯ ಅಯೋಜಕರು, ಸ್ಥಳೀಯ ಮುಖಂಡರು, ಕ್ರಿಕೆಟ್ ತಂಡಗಳ ಆಟಗಾರರು ಹಾಗೂ ಕ್ರಿಕೆಟ್ ಅಭಿಮಾನಿಗಳು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!