• Sun. Apr 28th, 2024

PLACE YOUR AD HERE AT LOWEST PRICE

ರೇಷ್ಮೆ ಗೂಡಿಗೆ ಮತ್ತು ರೇಷ್ಮೆ ನೂಲಿಗೆ ಬೆಂಬಲ ಬೆಲೆಯನ್ನು ನೀಡುವ ಜತೆಯಲ್ಲಿ ರೇಷ್ಮೆ ಬೆಳೆಗಾರರ ಮತ್ತು ರೇಷ್ಮೆ ನೂಲು ಬಿಚ್ಚಾಣಿಕೆದಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ, ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ರ್ಯಾಲಿ ನಡೆಸಿ, ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಜಿಲ್ಲಾ ರೇಷ್ಮೆ ಅಭಿವೃದ್ಧಿ ಸಂಘದಿಂದ ಪ್ರತಿಭಟನೆ ನಡೆಸಿ ಎಡಿಸಿರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ರೇಷ್ಮೆ ಬೆಳೆಗಾರರ ಅಭಿವೃದ್ಧಿ ಸಂಘದ ಪಾಧಾಧಿಕಾರಿಗಳು ಮಾತನಾಡಿ, ಜಿಲ್ಲೆಯ ರೈತರ ಜೀವನಾಡಿಯಾಗಿರುವ ರೇಷ್ಮೆ ಗೂಡಿನ ಧಾರಣೆ ಹಾಗೂ ರೇಷ್ಮೆ ನೂಲು ಬಿಚ್ಚಾಣಿಕೆ ರೇಷ್ಮೆ ನೂಲಿನ ಧಾರಣೆ ಇತ್ತೀಚಿಗೆ ಕುಸಿತಗೊಂಡಿದ್ದು ರೇಷ್ಮೆ ಬೆಳೆಗಾರರು ಮತ್ತು ರೇಷ್ಮೆ ನೂಲು ಬಿಚ್ಚಾಣಿಕೆದಾರರ ಕಂಗಾಲಾಗಿದ್ದಾರೆ. ಈ ಕೂಡಲೇ ಸರಕಾರ ಮಧ್ಯ ಪ್ರವೇಶಿಸಿ, ಬೆಂಬಲ ಬೆಲೆಯನ್ನು ಘೋಷಣೆ ಮಾಡುವ ನಿಟ್ಟಿನಲ್ಲಿ ಸರಕಾರ ರೇಷ್ಮೆ ನೂಲನ್ನು ಖರೀದಿಸಬೇಕು ಎಂದು ಒತ್ತಾಯಿಸಿದರು.
 ಬೇರೆ ತೋಟಗಾರಿಕೆ ಬೆಳೆಗಳಿಗೆ ಇರುವಂತೆ ನಮ್ಮ ಹಿಪ್ಪು ನೇರಳೆ ತೋಟ ಮತ್ತು ಹುಳು ಸಾಕಾಣಿಯಲ್ಲಿ ವಿವಿಧ ಕಾರಣಗಳಿಗೆ ಬೆಲೆ ಹಾಳಾದಾಗ ವೈಜ್ಞಾನಿಕ ಪದ್ಧತಿಯನ್ನು ಅನುಸರಿಸಿ ಬೆಳೆ ವಿಮೆಯನ್ನು ನೀಡಲು ಅವಕಾಶ ಮಾಡಿಕೊಡಬೇಕು. ಹೊಸದಾಗಿ ನೂರು ಬಿಚ್ಚಾಣಿಕೆ ಮಾಡಲು ಅನೇಕರು ಮುಂದೆ ಬರುತ್ತಿದ್ದು. ಇದರ ಅವಶ್ಯಕತೆ ಸಹ ಇರುವುದರಿಂದ ಹಾಗೂ ಅನೇಕ ರೈತರು ಹೊಸದಾಗಿ ಹಿಪ್ಪು ನೇರಳೆ ನಾಟಿ ಮಾಡಿದ್ದು ಮುಂದಿನ ದಿನಗಳಲ್ಲಿ ಗೂಡಿನ ಉತ್ಪಾದನೆ ಹೆಚ್ಚಾಗುವ ಸಂಭವವಿದ್ದು ಹೆಚ್ಚು ಸ್ವಯಂ ಚಾಲಿತ ನೂಲು ಬಿಚ್ಚುವ ಘಟಕಗಳನ್ನು ಮಂಜೂರ ಮಾಡಬೇಕೆಂದು ಒತ್ತಾಯಿಸಿದರು.

ಇತ್ತೀಚಿಗೆ ರೇಷ್ಮೆ ಗೂಡಿನ ಧಾರಣೆ ಹಾಗೂ ರೇಷ್ಮೆ ನೂಲಿನ ಧಾರಣೆ ಕುಸಿತ ಕಂಡಿದ್ದು, ಇದರಿಂದ ನಮ್ಮ ಜಿಲ್ಲೆ ರೇಷ್ಮೆ ಬೆಳೆಗಾರರು ಮತ್ತು ರೇಷ್ಮೆ ನೂಲು ಬಿಚ್ಚಣಿಕೆದಾರರು ಜೀವನ ನಡೆಸುತ್ತಿದ್ದು. ಇಂದು ಧಾರಣೆ ಕುಸಿತದಿಂದ ಕಂಗಾಲಾಗಿದ್ದಾರೆ. ಇದರ ಸಲುವಾಗಿ ಸರ್ಕಾರ ಮಧ್ಯ ಪ್ರವೇಶಿಸಿ ಮಿಶ್ರತಳಿ ಗೂಡುಗಳಿಗೆ ಪ್ರತಿ ಕೆಜಿಗೆ ರೂ.150, ಹಾಗೂ ದ್ವಿತಳಿ ರೇಷ್ಮೆ ಗೂಡಿಗೆ 200 ರೂ. ಗಳ ಬೆಂಬಲ ಬೆಲೆಯನ್ನು ಘೋಷಣೆ ಮಾಡಬೇಕು. ಪ್ರತಿ ಕೆಜಿಗೆ ನೂಲಿಗೆ 500 ಗಳ ಬೆಂಬಲ ಬೆಲೆ ನೀಡಿ ಸರ್ಕಾರ ವತಿಯಿಂದ ಹೆಚ್ಚಿನ ರೇಷ್ಮೆ ಖರೀದಿಸುವಂತೆ ಕ್ರಮ ವಹಿಸಬೇಕು.
 ಹಿಪ್ಪು ನೇರಳೆ ಸೊಪ್ಪಿಗೆ ಇತ್ತೀಚೆಗೆ ತೀವ್ರ ತರವಾದ ರೋಗ ಬಾದೆ ಕಾಡುತ್ತಿದ್ದು, ಈ ರೋಗವು ಈ ವಾತಾವರಣ ಪ್ರತಿ ವರ್ಷ ಕಾಡುತ್ತಿದ್ದು.
 ಈ ವಾತಾವರಣದಲ್ಲಿ ರೇಷ್ಮೆಗೂಡು ಬೆಳೆಯಲು ಕಷ್ಟ ಸಾಧ್ಯವಾಗಿದ್ದು ಈ ಕುರಿತು ರೇಷ್ಮೆ ಸಂಶೋಧನೆ ಕೇಂದ್ರಗಳ ಮೂಲಕ ಒಂದು ಶಾಶ್ವತ ಪರಿಹಾರವನ್ನು ಒದಗಿಸಬೇಕೆಂದು ಮನವಿ ಮಾಡಿದರು.
 ಜಿಲ್ಲಾ ರೇಷ್ಮೆ ಬೆಳೆಗಾರರ ಅಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಬಳಗೆರೆ ಶಂಕರ್ ಗೌಡ. ಜಿಲ್ಲಾ ರೇಷ್ಮೆ ಬೆಳೆಗಾರ ಅಭಿವೃದ್ಧಿ ಸಂಘದ ಅಧ್ಯಕ್ಷ ನಾಗನಾಳ ಶ್ರೀನಿವಾಸ್, ಉಪಾಧ್ಯಕ್ಷ ಕಾಡುದೇವಂಡಳ್ಳಿ ಎಂ ರಮೇಶ್, ರೈತರು ಇತರರು ಇದ್ದರು.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!